ನವದೆಹಲಿ:ಜಾಗತಿಕ ದೈತ್ಯಸರ್ಚ್ ಇಂಜಿನ್ ಗೂಗಲ್ ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಡೂಡಲ್ ಬಿಡುಗಡೆಗೊಳಿಸಿದೆ. ಇದು ಅನಲಾಗ್ ಟಿವಿ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಯುಗಕ್ಕೆ ದೇಶದ ಬದಲಾವಣೆಯನ್ನು ಬಿಂಬಿಸುತ್ತಿದೆ. ಸೃಜನಾತ್ಮಕ ಕಲಾಕೃತಿಯ ಮೂಲಕ ಗೂಗಲ್‌ನ ಪರದೆಯ ಮೇಲೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಮಾರಂಭದ ಪರೇಡ್ ವೀಕ್ಷಿಸುವ ಈ ಶೈಲಿ ದಶಕಗಳಿಂದ ಹೇಗೆ ಬದಲಾಯಿತು ಎಂಬುದನ್ನು ತಿಳಿಸುತ್ತದೆ.
ಕ್ಯಾಥೋಡ್ ರೇ ಟ್ಯೂಬ್‌ಗಳನ್ನು ಹೊಂದಿರುವ ದೊಡ್ಡ ಟಿವಿ ಸೆಟ್‌ಗಳಿಂದ ಸಣ್ಣ ಟಿವಿಗಳು ಮತ್ತು ಅಂತಿಮವಾಗಿ ಸ್ಮಾರ್ಟ್‌ಫೋನ್‌ಗಳವರೆಗೆ, ಅಂದರೆ, ಹಲವು ವರ್ಷಗಳಲ್ಲಿ ಭಾರತದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಇದನ್ನು ತೋರಿಸಲು ಗೂಗಲ್ ತನ್ನ ಡೂಡಲ್‌ನಲ್ಲಿ ಎರಡು ಟಿವಿ ಸೆಟ್‌ಗಳು ಮತ್ತು ಮೊಬೈಲ್ ಫೋನ್ ಅನ್ನು ಚಿತ್ರಿಸಿದೆ. ಮೊದಲ ಅನಲಾಗ್ ಟೆಲಿವಿಷನ್ ಸೆಟ್ ಎಡಭಾಗದಲ್ಲಿ 'G' ಅಕ್ಷರವಿದೆ ಮತ್ತು ಸೆಟ್‌ಗಳ ಪರದೆಗಳು 'Google'ನ ಎರಡು 'O'ಗಳನ್ನು ರೂಪಿಸುತ್ತವೆ.