ಶಹದೋಲ್, ಮಧ್ಯಪ್ರದೇಶ: ಕಲ್ಲಿದ್ದಲು ತುಂಬಿದ ರೈಲು, ಶಹದೋಲ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಗೂಡ್ಸ್ ರೈಲು ಶಹದೋಲ್ ರೈಲು ನಿಲ್ದಾಣದ ಪಕ್ಕದ ಯಾರ್ಡ್‌ನಲ್ಲಿ ಗುರುವಾರ ಹಳಿತಪ್ಪಿತ್ತು. ಈ ಘಟನೆಯಲ್ಲಿ ಗೂಡ್ಸ್ ರೈಲಿನ ನಾಲ್ಕು ಲೋಡ್ ಬೋಗಿಗಳು ಭಾರಿ ಶಬ್ದದೊಂದಿಗೆ ಹಳಿತಪ್ಪಿ ಪಲ್ಟಿಯಾಗಿವೆ. ಗೂಡ್ಸ್ ರೈಲು ಬೋಗಿಗಳು ಹಳಿತಪ್ಪಿ ನಿಲ್ದಾಣದಲ್ಲಿ ಸೈರನ್ ಮೊಳಗಿದಾಗ ಗದ್ದಲ ಉಂಟಾಯಿತು. ಇದರಿಂದ ಪ್ರಯಾಣಿಕರೂ ಭಯಗೊಂಡರು. ಮಾಹಿತಿ ಲಭಿಸಿದ ತಕ್ಷಣ ರೈಲ್ವೆ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ರೈಲು ಬೋಗಿಗಳನ್ನು ತೆಗೆಯುವ ಕಾರ್ಯವನ್ನು ತ್ವರಿತವಾಗಿ ನಿರ್ವಹಿಸಲಾಗಿದೆ.
ಗೂಡ್ಸ್ ರೈಲು ಎಲ್ಲಿಗೆ ಹೋಗುತ್ತಿತ್ತು?: ಈ ಗೂಡ್ಸ್ ರೈಲು ಕಲ್ಲಿದ್ದಲು ತುಂಬಿಕೊಂಡು ಛತ್ತೀಸ್‌ಗಢದ ಸೂರಜ್‌ಪುರದಿಂದ ರಾಜಸ್ಥಾನಕ್ಕೆ ಹೋಗುತ್ತಿದ್ದಾಗ ಮಧ್ಯಪ್ರದೇಶದ ಶಹದೋಲ್ ರೈಲು ನಿಲ್ದಾಣದ ಅಂಗಳದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಂಜಾನೆ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಯಾರ್ಡ್ ಲೈನ್ ನಂ.10ರಲ್ಲಿ ಗೂಡ್ಸ್ ರೈಲು ಬೋಗಿಗಳು ಹಳಿತಪ್ಪಿದ್ದವು