ಕರ್ನಾಟಕ

karnataka

ETV Bharat / bharat

ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ವೈದ್ಯರ ದುರ್ಮರಣ - AGRA LUCKNOW EXPRESSWAY ACCIDENT

ಎಕ್ಸ್​ಪ್ರೆಸ್​ವೇನಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್​ ಡಿಕ್ಕಿ ಹೊಡೆದಿದ್ದು, ನಾಲ್ವರು ವೈದ್ಯರು ಸಾವನ್ನಪ್ಪಿದ್ದಾರೆ.

four doctors were killed in a road accident in Agra-Lucknow Expressway in Kannauj
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 27, 2024, 10:10 AM IST

ನವದೆಹಲಿ: ಕನೌಜ್​ನ ಆಗ್ರಾ-ಲಕ್ನೋ ಎಕ್ಸ್​​ಪ್ರೆಸ್​ವೇನಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೈದ್ಯರು ಸಾವನ್ನಪ್ಪಿದ್ದಾರೆ. ಅನಿರುದ್ಧ್ ವರ್ಮಾ, ಸಂತೋಷ್ ಕುಮಾರ್ ಮೌರ್ಯ, ಜಯವೀರ್ ಸಿಂಗ್, ಅರುಣ್ ಕುಮಾರ್ ಮತ್ತು ನರದೇವ್ ಸಾವನ್ನಪ್ಪಿದ ವೈದ್ಯರೆಂದು ಗುರುತಿಸಲಾಗಿದೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ವೈದ್ಯಕೀಯ ಪಿಜಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಕ್ನೋಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿ ಸುತ್ತಮುತ್ತ ಆವರಿಸಿರುವ ದಟ್ಟ ಮಂಜು ಕೂಡ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಚಳಿಗಾಲದ ಆರಂಭದಲ್ಲಿ ಮಂಜಿನಿಂದಾಗಿ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಅಪಘಾತಗಳು ಸಂಭವಿಸುತ್ತವೆ.

ಇದನ್ನೂ ಓದಿ: ಸ್ಪೂರ್ತಿದಾಯಕ ಕಥೆ: ಬಿದಿರಿನಿಂದ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ಬದುಕು ಕಟ್ಟಿಕೊಂಡ ಕುಗ್ರಾಮದ ಮಹಿಳೆಯರು

ABOUT THE AUTHOR

...view details