ದಿಯೋಘರ್ (ಜಾರ್ಖಂಡ್) :ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಎರಡು ದಿನಗಳ ಜಾರ್ಖಂಡ್ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ವಿವಿಧ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ದಿಯೋಗಢದ ಬಾಬಾ ದೇವಾಲಯದಲ್ಲಿ ವೈದ್ಯನಾಥನಿಗೆ ಪೂಜೆ ಸಲ್ಲಿಸಿದರು. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ವೈದ್ಯನಾಥ ಸನ್ನಿಧಿಯೂ ಒಂದಾಗಿದೆ. ವೈದ್ಯನಾಥನಿಗೆ ಜಲಾಭಿಷೇಕ ಮತ್ತು ಮುಂತಾದ ಸೇವೆಗಳನ್ನು ಸಲ್ಲಿಸಿದ ಬಳಿಕ ಅವರು, ದುಮ್ಕಾದ ವಾಸುಕಿನಾಥ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನಗಳ ಭೇಟಿಯ ಬಳಿಕ ಮಂಗಳವಾರ ದಿಯೋಗಢದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶ ಸುಭಿಕ್ಷವಾಗಿರಲು ಪ್ರಾರ್ಥನೆ ಸಲ್ಲಿಸಿದ್ದೇನೆ. ಎಲ್ಲರೂ ಸುಖವಾಗಿರಬೇಕು ಎಂದು ಅವರು ಕೋರಿದರು.
ರಾಜಕೀಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, ದೇಶದಲ್ಲಿ ಕಾಂಗ್ರೆಸ್ ಸ್ವತಂತ್ರ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡರೂ, ಸರ್ಕಾರ ರಚನೆ ಮಾಡುವ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಲಿಲ್ಲ ಎಂದರು.