ಕರ್ನಾಟಕ

karnataka

ETV Bharat / bharat

ಶೀಘ್ರವೇ ಸಿಎಂ ನಿವಾಸ ಖಾಲಿ ಮಾಡಲಿದ್ದಾರೆ ಕೇಜ್ರಿವಾಲ್: ಸಂಸದ ಮಿತ್ತಲ್ ನಿವಾಸಕ್ಕೆ ಸ್ಥಳಾಂತರ - Kejriwal new house - KEJRIWAL NEW HOUSE

ದೆಹಲಿ ಮಾಜಿ ಮುಖ್ಯಮಂತ್ರಿ ಶೀಘ್ರದಲ್ಲೇ ಹೊಸ ನಿವಾಸಕ್ಕೆ ಸ್ಥಳಾಂತರವಾಗಲಿದ್ದಾರೆ.

ಫಿರೋಜ್ ಷಾ ರಸ್ತೆಯಲ್ಲಿರುವ ನಂ. 5 ಬಂಗಲೆ
ಫಿರೋಜ್ ಷಾ ರಸ್ತೆಯಲ್ಲಿರುವ ನಂ. 5 ಬಂಗಲೆ (AAAAAAA)

By ETV Bharat Karnataka Team

Published : Oct 3, 2024, 1:18 PM IST

ನವದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ತಾವಿದ್ದ ಅಧಿಕೃತ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡಲಿದ್ದಾರೆ. ಪಿತೃಪಕ್ಷ ಕೊನೆಗೊಂಡು, ನವರಾತ್ರಿ ಪ್ರಾರಂಭವಾದ ತಕ್ಷಣ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೊಸ ಮನೆಗೆ ಸ್ಥಳಾಂತರಗೊಳ್ಳುವುದಾಗಿ ಅವರು ಈ ಹಿಂದೆ ಹೇಳಿದ್ದರು.

ಕೇಜ್ರಿವಾಲ್ ಅವರು ಪ್ರಸ್ತುತ ಎಎಪಿ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ಹಂಚಿಕೆಯಾಗಿರುವ ಫಿರೋಜ್ ಷಾ ರಸ್ತೆಯಲ್ಲಿರುವ ನಂ. 5 ಬಂಗಲೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ. ಈ ಬಂಗಲೆಯು ನವದೆಹಲಿಯ ಅಡಿಯಲ್ಲಿ ಬರುತ್ತದೆ. ಈ ಬಂಗಲೆಯಲ್ಲಿ ಕೇಜ್ರಿವಾಲ್ ಕುಟುಂಬ ಸಮೇತ ವಾಸಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯಸಭಾ ಸದಸ್ಯರಾಗಿರುವ ಅಶೋಕ್​ ಮಿತ್ತಲ್:ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆಯಾದಾಗ, ಪಕ್ಷದಿಂದ ಟಿಕೆಟ್ ಪಡೆದ ಎಂಟು ರಾಜ್ಯಸಭಾ ಸದಸ್ಯರಲ್ಲಿ ಅಶೋಕ್ ಮಿತ್ತಲ್ ಕೂಡ ಒಬ್ಬರು. ಅಶೋಕ್ ಮಿತ್ತಲ್ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿಯಾಗಿದ್ದಾರೆ. 60 ವರ್ಷದ ಮಿತ್ತಲ್ 2022 ರ ಪಂಜಾಬ್ ವಿಧಾನಸಭಾ ಚುನಾವಣೆಯ ನಂತರ ಸಕ್ರಿಯ ರಾಜಕೀಯಕ್ಕೆ ಸೇರಿದರು.

ಸಂಸದ ಮಿತ್ತಲ್ ಸ್ವತಃ ಕೇಜ್ರಿವಾಲ್ ಅವರಿಗೆ ದೆಹಲಿಯ ತಮ್ಮ ನಿವಾಸಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮನೆ ನೀಡಲು ಮುಂದೆ ಬಂದ ಅನೇಕ ಶಾಸಕರು:"ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ಸಿಎಂ ನಿವಾಸವನ್ನು ತೊರೆಯಲಿದ್ದು, ಅವರಿಗಾಗಿ ಹೊಸ ಮನೆ ಹುಡುಕಲಾಗುತ್ತಿದೆ. ಜನರೊಂದಿಗೆ ಸಂಪರ್ಕದಲ್ಲಿರಲು ಅವರು ಶಾಸಕರಾಗಿರುವ ನವದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸಲು ಆದ್ಯತೆ ನೀಡಿದ್ದಾರೆ. ಅನೇಕ ಶಾಸಕರು, ಕೌನ್ಸಿಲರ್​ಗಳು ಪಕ್ಷದ ಕಾರ್ಯಕರ್ತರು ಮತ್ತು ಸಾಮಾನ್ಯ ಜನರು ತಮ್ಮ ಮನೆಗಳನ್ನು ಕೇಜ್ರಿವಾಲ್​ರಿಗೆ ಬಿಟ್ಟುಕೊಡುವುದಾಗಿ ಹೇಳುತ್ತಿದ್ದಾರೆ" ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.

ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನಿಂದ ಜಾಮೀನು ಪಡೆದು ಆಗಸ್ಟ್​ನಲ್ಲಿ ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2025 ರ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜನರಿಂದ ಹೊಸ ಜನಾದೇಶ ಬಂದರೆ ಮಾತ್ರ ಸಿಎಂ ಹುದ್ದೆಗೆ ಮರಳುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೇಜ್ರಿವಾಲ್ ನಂತರ ಅತಿಶಿ ಮರ್ಲೇನಾ ನೂತನ ಮುಖ್ಯಮಂತ್ರಿಯಾಗಿ ಸೆಪ್ಟೆಂಬರ್​ 22 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಅತಿಶಿ ದೆಹಲಿಯ 3ನೇ ಮಹಿಳಾ ಸಿಎಂ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ಅಕಾಲಿಕ ಮಳೆಯಿಂದ ಉಪ್ಪು ಉತ್ಪಾದನೆ ಕುಂಠಿತ: ಬೆಲೆಯೇರಿಕೆಯ ಆತಂಕ - Salt production decline

ABOUT THE AUTHOR

...view details