ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೂನ್ 20ರಂದು ಉದ್ಯಮ ಚೇಂಬರ್ಸ್ ಜೊತೆಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 2024-25ನೇ ಹಣಕಾಸು ವರ್ಷದ ಬಜೆಟ್ ಅನ್ನು ಜುಲೈ ತಿಂಗಳ ದ್ವಿತೀಯಾರ್ಧದಲ್ಲಿ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಸೀತಾರಾಮನ್ ಅವರು ಬಜೆಟ್ ಪೂರ್ವ ಸಮಾಲೋಚನಾ ಸಭೆಯನ್ನು ಜೂನ್ 18 ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರೊಂದಿಗೆ ಮೊದಲು ನಡೆಯಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. 2024-25 ರ ಬಜೆಟ್ ಮೋದಿ 3.0 ಸರ್ಕಾರದ ಆರ್ಥಿಕ ಕಾರ್ಯಸೂಚಿಯನ್ನು ರೂಪಿಸುವ ಸಾಧ್ಯತೆಯಿದೆ. ಹಣಕಾಸು ಸಚಿವರು ಹಣದುಬ್ಬರಕ್ಕೆ ಧಕ್ಕೆಯಾಗದಂತೆ ಬೆಳವಣಿಗೆಯನ್ನು ಹೆಚ್ಚಿಸುವ ಕ್ರಮಗಳನ್ನು ನೋಡಬೇಕಿದೆ. ಮತ್ತು ಸಮ್ಮಿಶ್ರ ಸರ್ಕಾರದ ಬೇಡಿಕೆಗಳನ್ನು ಪೂರೈಸಲು ಸಂಪನ್ಮೂಲಗಳನ್ನು ಹುಡುಕಬೇಕಿದೆ.
ಆರ್ಥಿಕ ಕಾರ್ಯಸೂಚಿಯು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಮಾಡಲು ಹಾಗೂ 2047ರ ವೇಳೆಗೆ ದೇಶವನ್ನು 'ವಿಕ್ಷಿತ್ ಭಾರತ್' ಆಗಿ ಪರಿವರ್ತಿಸಲು ವೇಗದ ಸುಧಾರಣೆಗಳ ಹಂತಗಳನ್ನು ಒಳಗೊಂಡಿರುತ್ತದೆ.
ಆರ್‌ಬಿಐನಿಂದ 2.11 ಲಕ್ಷ ಕೋಟಿ ರೂ. ಡಿವಿಡೆಂಡ್:ಆರ್‌ಬಿಐ ಅಂದಾಜಿನ ಪ್ರಕಾರ, ಗ್ರಾಮೀಣ ಬೇಡಿಕೆಯನ್ನು ಸುಧಾರಿಸುವುದು ಮತ್ತು ಹಣದುಬ್ಬರವನ್ನು ಮಿತಗೊಳಿಸುವುದರ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7.2 ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಮೋದಿ 3.0 ಸರ್ಕಾರವು ಹಣಕಾಸಿನ ಹಿಡಿತವನ್ನು ಹೊಂದಿರುವ ಬಲವಾದ ಆರ್ಥಿಕತೆಯನ್ನು ತನ್ನದಾಗಿಸಿಕೊಳ್ಳುಲು ಯೋಜನೆಗಳನ್ನು ರೂಪಿಸಲಿದೆ. ಹಣಕಾಸು ವರ್ಷ 2024ರಲ್ಲಿ ಆರ್‌ಬಿಐನಿಂದ 2.11 ಲಕ್ಷ ಕೋಟಿ ರೂ. ಅತ್ಯಧಿಕ ಡಿವಿಡೆಂಡ್ ನೀಡಿರುವುದು ಕೂಡ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಪ್ರಮುಖ ನೀತಿ, ಆದ್ಯತೆಗಳು ಕೃಷಿ ವಲಯದಲ್ಲಿನ ಒತ್ತಡವನ್ನು ನಿಭಾಯಿಸುವುದು, ಉದ್ಯೋಗ ಸೃಷ್ಟಿ, ಕ್ಯಾಪೆಕ್ಸ್ ಆವೇಗವನ್ನು ಉಳಿಸಿಕೊಳ್ಳುವುದು ಮತ್ತು ಹಣಕಾಸಿನ ಬಲವರ್ಧನೆಯ ಹಾದಿಯಲ್ಲಿ ಉಳಿಯಲು ಆದಾಯದ ಬೆಳವಣಿಗೆಯನ್ನು ಕಂಡುಕೊಳ್ಳುವುದು ಆಗಿರುತ್ತದೆ.
ಹತ್ತು ವರ್ಷ ಮೋದಿ ಆಡಳಿತಕ್ಕೆ ಧನಾತ್ಮಕ ರೇಟಿಂಗ್:ರೇಟಿಂಗ್ ಏಜೆನ್ಸಿ S&P ಈಗಾಗಲೇ ಧನಾತ್ಮಕ ರೇಟಿಂಗ್ ಅನ್ನು ನೀಡಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಆಡಳಿತವು ಅನುಸರಿಸಿದ ಆರ್ಥಿಕ ನೀತಿಗಳಿಗೆ ಥಂಬ್ಸ್ ಅಪ್ ಕೊಟ್ಟಿದೆ. ಸರ್ಕಾರವು ತನ್ನ ವಿತ್ತೀಯ ಕೊರತೆಯ ಮಾರ್ಗಸೂಚಿಗೆ ಅಂಟಿಕೊಂಡರೆ ಮುಂದಿನ 1-2 ವರ್ಷಗಳಲ್ಲಿ ಸಂಭವನೀಯ ರೇಟಿಂಗ್ ಅಪ್‌ಗ್ರೇಡ್ ಬಗ್ಗೆಯೂ ಇದು ಸುಳಿವು ನೀಡಿದೆ. ಸರ್ಕಾರವು ತೆರಿಗೆ ಆದಾಯ, ಏರ್ ಇಂಡಿಯಾವನ್ನು ಹೊರತುಪಡಿಸಿ, ತೆರಿಗೆಯೇತರ ಆದಾಯವು ಒಂದು ಸವಾಲಾಗಿ ಉಳಿದಿದೆ.
ಇದನ್ನೂ ಓದಿ:ಕಳೆದ ವಾರ $202 ಮಿಲಿಯನ್ ನಿಧಿ ಸಂಗ್ರಹಿಸಿದ ಸ್ಟಾರ್ಟ್ಅಪ್ಗಳು: ಫಂಡಿಂಗ್ ಶೇ 100ರಷ್ಟು ಹೆಚ್ಚಳ - Indian startups