ವೆಲ್ಲೂರು (ತಮಿಳುನಾಡು):ಡಿಎಂಕೆ ಸಂಸದ ಕತಿರ್ ಆನಂದ್ ಅವರ ಇಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿ ಇಂದು ಕೂಡ ಇಡಿ ಅಧಿಕಾರಿಗಳ ದಾಳಿ ಮುಂದುವರೆದಿದೆ.
ಶುಕ್ರವಾರ ಆರಂಭವಾದ ಇಡಿ ದಾಳಿ ಶನಿವಾರ ಕೂಡ ಮುಂದುವರೆದಿದ್ದು, ಕಟಪಾಡಿಯ ಕ್ರಿಶ್ಚಿಯನ್ ಪೇಟೆಯಲ್ಲಿರುವ ಕಿಂಗ್ಸ್ಟನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಡಿ ಪರಿಶೀಲನೆಯಲ್ಲಿ 18ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಕತೀರ್ ಆನಂದ್ ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವ ನಾಯಕ ದುರೈಮುರುಗನ್ ಅವರ ಪುತ್ರನಾಗಿದ್ದು, ವೆಲ್ಲೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಶುಕ್ರವಾರ ಕಾಲೇಜಿನಲ್ಲಿ ದಾಳಿ ಮತ್ತು ಕಡತಗಳ ಪರಿಶೀಲನೆ ವೇಳೆ ಲಾಕರ್ನಲ್ಲಿ ಸಿಕ್ಕಿದ್ದ ಲೆಕ್ಕವಿಲ್ಲದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಲೇಜಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳ ಪರಿಶೀಲನೆ ಇಂದು ಕೂಡ ಮುಂದುವರೆದಿದೆ.
ಇತ್ತ ಕಟಪಾಡಿಯ ಗಾಂಧಿನಗರದಲ್ಲಿರುವ ನಿವಾಸ ಮೇಲೂ ಇಡಿ ಶೋಧ ಮುಂದುವರೆದಿದ್ದು, ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಆರಂಭವಾದ ಪರಿಶೀಲನೆ ಶನಿವಾರ ನಸಕಿನಜಾವ 1.35ರ ವರೆಗೆ ಸತತ 11 ಗಂಟೆಗಳ ಕಾಲ ಸಾಗಿತು.
ಈ ದಾಳಿ ವೇಳೆ ಅಧಿಕಾರಿಗಳು ಕತೀರ್ ಆನಂದ್ ತಂದೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಸಚಿವ ಎಸ್. ದುರೈಮುರುಗನ್ ಅವರ ಕೋಣೆಯನ್ನು ತೆರೆಯಲು ಹರಸಾಹಸಪಟ್ಟರು. ಇದು ವೇಳೆ ನೆರೆಹೊರೆಯವರಲ್ಲಿ ಗದ್ದಲ ಉಂಟಾಯಿತು.
ಈ ದಾಳಿಯು ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಗುರಿಯಾಗಿದೆ. ಇಡಿ ಬಳಕೆ ಮಾಡಿ ರಾಜಕೀಯ ಒತ್ತಡ ಹೇರಲಾಲಾಗುತ್ತಿದೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರು.
ದಾಳಿಯ ಕುರಿತಾಗಿ ಇಡಿ ಇನ್ನೂ ಅಧಿಕೃತ ಹೇಳಿಕೆ ಮತ್ತು ಸಾಕ್ಷ್ಯಗಳ ವಿವರ ನೀಡಿಲ್ಲ. ಆದಾಗ್ಯೂ ದೀರ್ಘ ಕಾಲದ ಈ ಕಾರ್ಯಾಚರಣೆ ಹಾಗೂ ನಗದು ಮತ್ತು ದಾಖಲಾತಿ ವಶದ ಹಿಂದೆ ಅಕ್ರಮ ಹಣಕಾಸಿನ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಉತ್ತರ ಭಾರತದಲ್ಲಿ ತೀವ್ರವಾದ ಚಳಿ; ದೆಹಲಿಯಲ್ಲಿ ದಟ್ಟ ಮಂಜಿಗೆ ಇಂದು ಹಲವು ವಿಮಾನಗಳ ವ್ಯತ್ಯಯ