ಕರ್ನಾಟಕ

karnataka

ETV Bharat / bharat

ಆರ್ಥಿಕ ಸಮೀಕ್ಷೆ: 3.2ರಷ್ಟು ಕುಸಿದ ನಿರುದ್ಯೋಗ ದರ, ಉದ್ಯೋಗ ಮತ್ತು ಕೌಶಲ್ಯ ಸೃಷ್ಟಿಗೆ ಆದ್ಯತೆ - unemployment rate declining - UNEMPLOYMENT RATE DECLINING

ಸ್ವ ಉದ್ಯೋಗ ಮತ್ತು ಕಾರ್ಮಿಕ ಕಲ್ಯಾಣ ಉತ್ತೇಜನೆಯಂತಹ ಕ್ರಮಗಳ ಮೂಲಕ ಸರ್ಕಾರ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ಜಾರಿಗೆ ತಂದಿದೆ.

Economic Survey says unemployment rate declining to 3 2 per cent in 2022 23
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jul 22, 2024, 3:06 PM IST

Updated : Jul 22, 2024, 3:14 PM IST

ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಕಾರ್ಮಿಕ ಮಾರುಕಟ್ಟೆ ಸೂಚ್ಯಂಕಗಳು ಸುಧಾರಣೆಯಾಗಿದೆ. ಇದರ ಜೊತೆಗೆ 2022-23ರಲ್ಲಿ ನಿರುದ್ಯೋಗ ದರ 3.2ರಷ್ಟು ಇಳಿಕೆ ಕಂಡಿದೆ ಎಂದು ಆರ್ಧಿಕ ಸಮೀಕ್ಷೆ 2023-24ರ ವರದಿ ತಿಳಿಸಿದೆ.

ಭಾರತದ ಉದ್ಯೋಗ ಬಲ ಸರಿಸುಮಾರು 56.5 ಕೋಟಿ ಆಗಿದ್ದು, ಇದರಲ್ಲಿ ಶೇ 45ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದರೆ, ಶೇ 11ರಷ್ಟು ಜನ ಉತ್ಪಾದಕತೆ, ಶೇ 28.9ರಷ್ಟು ಮಂದಿ ಸೇವೆ ಹಾಗೂ ಶೇ 13ರಷ್ಟು ನಿರ್ಮಾಣದಲ್ಲಿ ತೊಡಗಿದ್ದಾರೆ. ಕೃಷಿಯೇತರ ವಲಯದಲ್ಲಿ ಸುಮಾರು 78.51 ಲಕ್ಷ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಸಮೀಕ್ಷೆ ಒತ್ತಿ ಹೇಳಿದೆ.

ಸ್ವ ಉದ್ಯೋಗ ಮತ್ತು ಕಾರ್ಮಿಕ ಕಲ್ಯಾಣ ಉತ್ತೇಜನೆಯಂತಹ ಕ್ರಮಗಳ ಮೂಲಕ ಸರ್ಕಾರ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ಜಾರಿಗೆ ತಂದಿದೆ. 2024- 25ರ ಕೇಂದ್ರ ಬಜೆಟ್​​ಗೆ ಮುನ್ನ ದಿನ ಮಂಡಿಸಲಾಗಿರುವ ಈ ಸಮೀಕ್ಷೆಯಲ್ಲಿ, ಉದ್ಯೋಗದಲ್ಲಿ ಹೆಚ್ಚುತ್ತಿರುವ ಯುವಜನತೆ ಮತ್ತು ಮಹಿಳಾ ಭಾಗವಹಿಸುವಿಕೆಯು ಜನಸಂಖ್ಯಾ ಮತ್ತು ಲಿಂಗ ವಿಭಜನೆಯನ್ನು ಹೋಗಲಾಡಿಸುವ ಅವಕಾಶವನ್ನು ಒದಗಿಸುತ್ತಿದೆ ಎಂದು ತಿಳಿಸಿದೆ.

ಸೇವಾ ವಲಯವೂ ಉದ್ಯೋಗ ಸೃಷ್ಟಿಯ ಪ್ರಮುಖ ವಲಯವಾಗಿದೆ. ಬಳಿಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಒತ್ತು ಮತ್ತು ನಿರ್ಮಾಣ ಸಂಸ್ಥೆಯು ಪ್ರಮುಖ ವಲಯವಾಗಿದೆ.

ಆದಾಗ್ಯೂ ನಿರ್ಮಾಣ ಉದ್ಯೋಗಗಳು ದೊಡ್ಡಮಟ್ಟದಲ್ಲಿ ಅನೌಪಚಾರಿಕ ಮತ್ತು ಕಡಿಮೆ ವೇತನದ ಉದ್ಯೋಗವಾಗಿ ಉಳಿದಿದೆ. ಕೃಷಿಯನ್ನು ತೊರೆಯುವ ಕಾರ್ಮಿಕರನ್ನು ಬಲಗೊಳಿಸುವ ಅವಶ್ಯಕತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ವಿಶ್ವಸಂಸ್ಥೆ ಜನಸಂಖ್ಯಾ ಪ್ರಕ್ಷೇಪಣೆ ಅನುಸಾರ, ಭಾರತದ ದುಡಿಯುವ ವರ್ಗದ ವಯೋಮಿತಿ (15- 59) 2044ರ ವರೆಗೆ ಮುಂದುವರೆಯಲಿದೆ. ಅಂದಾಜಿನಲ್ಲಿ ತೋರಿಸಿರುವಂತೆ 51.25ರಷ್ಟು ಯುವ ಜನತೆಯನ್ನು ಉದ್ಯೋಗಿಗಳು ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಕಾಲೇಜಿನಿಂದ ಹೊರಬಿದ್ದ ಇಬ್ಬರಲ್ಲಿ ಒಬ್ಬರು ಉದ್ಯೋಗ ಪಡೆಯುತ್ತಿಲ್ಲ. ಆದಾಗ್ಯೂ ಕಳೆದ ದಶಕಕ್ಕೆ ಹೋಲಿಕೆ ಮಾಡಿದರೆ, ಈ ದರವೂ ಶೇ 34ರಿಂದ 51.3ರಷ್ಟು ಸುಧಾರಣೆ ಕಂಡಿದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿ ಕಾರ್ಯಕ್ರಮಕ್ಕೆ ನೋಂದಣಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಸಮೀಕ್ಷೆ ಪ್ರಕಾರ, ಉದ್ಯೋಗ, ಕೌಶಲ್ಯ ಸೃಷ್ಟಿ, ಕೃಷಿ ವಲಯದಲ್ಲಿ ಸಂಪೂರ್ಣ ಸಾಮರ್ಥ್ಯ ಬಳಕೆ, ಎಂಎಸ್​ಎಂಇ ಅಡತಡೆಗಳನ್ನು ಪರಿಹರಿಸುವುದು. ಭಾರತದ ಹಸಿರು ಪರಿವರ್ತನೆ ನಿರ್ವಹಣೆ, ಕಾರ್ಪೊರೇಟ್​ ಬಾಂಡ್​ ಮಾರ್ಕೆಟ್​​ ಮತ್ತು ಅಸಮಾನತೆ ಹಾಗೂ ಯುವ ಜನತೆ ಆರೋಗ್ಯ ಸುಧಾರಣೆ ಸೇರಿದಂತೆ ಸಣ್ಣ ಮತ್ತು ಮಧ್ಯಮ ನೀತಿ ಪ್ರಮುಖ ಕ್ಷೇತ್ರಗಳಲ್ಲಿ ಗುರಿಯನ್ನು ಹೊಂದಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ:2024-25ರ ಆರ್ಥಿಕ ಸಮೀಕ್ಷೆ ಮಂಡನೆ: ಶೇ 6.5ರಿಂದ 7ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು

Last Updated : Jul 22, 2024, 3:14 PM IST

ABOUT THE AUTHOR

...view details