ಮುಂಬೈ:ಕೊಳಗೇರಿ ಪುನರ್ವಸತಿ ಪ್ರಾಧಿಕಾರ (ಎಸ್ಆರ್ಎ) ಉಪಕ್ರಮದಲ್ಲಿ ಧಾರಾವಿ ಪುನಾರಾಭಿವೃದ್ಧಿ ಯೋಜನೆಯಲ್ಲಿ ಹೊಸ ರೀತಿಯ ವಿಶಿಷ್ಟ ನೀತಿಯೊಂದನ್ನು ಪರಿಚಯಿಸಿದೆ. ಅದರ ಅನುಸಾರ, ಕೊಳಗೇರಿಯಲ್ಲಿನ ಮೊದಲ ಮಹಡಿಯಲ್ಲಿ ವಾಸಿಸುತ್ತಿರುವ ಬಾಡಿಗೆದಾರರನ್ನು ಪುನರ್ವಸತಿ ಯೋಜನೆಗೆ ಸೇರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ, ಕೊಳಗೇರಿಗಳಲ್ಲಿ ಮೇಲ್ಮಹಡಿ ಬಾಡಿಗೆದಾರರನ್ನು ಅಕ್ರಮ ಎಂದು ಗುರುತಿಸಿ, ಅವರನ್ನು ಕೊಳಗೇರಿ ಪುನರ್ವಸತಿ ಯೋಜನೆಯಿಂದ ಹೊರಗೆ ಇಡಲಾಗುವುದು. ಇವರಿಗೆ ಯಾವುದೇ ಪರ್ಯಾಯ ಇಲ್ಲದಿರುವುದರಿಂದ ಇದು ಅನೇಕ ನಿವಾಸಿಗಳ ಸ್ಥಳಾಂತರದ ಆಕ್ರೋಶಕ್ಕೆ ಗುರಿಯಾಗುತ್ತದೆ. ಈ ಮೇಲ್ಮಹಡಿಯ ಬಾಡಿಗೆದಾರರು ಮತ್ತೊಂದು ಕೊಳಗೇರಿಗೆ ಸ್ಥಳಾಂತರವಾಗುವುದರ ಜೊತೆಗೆ ಮತ್ತೊಂದು ಹೊಸ ಸಮಸ್ಯೆಗೆ ಕಾರಣವಾಗುತ್ತಾರೆ. ಈ ವಿಷಯವನ್ನು ಗುರಿಯಾಗಿಸಿಕೊಂಡು ಕೊಳಗೇರಿ ಮುಕ್ತ ಮುಂಬೈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಈ ಯೋಜನಾಬದ್ದ ತಂತ್ರಗಾರಿಕೆ ರೂಪಿಸಿದ್ದು, ಮೊದಲ ಮಹಡಿ ನಿವಾಸಿಗಳಿಗೂ ಕೂಡ ಮನೆ ಭರವಸೆ ನೀಡಿದೆ.
2024ರ ಅಕ್ಟೋಬರ್ 4ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ, 2022ರ ನವೆಂಬರ್ 15ರವರೆಗೆ ಧಾರಾವಿಯಲ್ಲಿನ ಎಲ್ಲಾ ಮೇಲಿನ ಮಹಡಿಯ ಬಾಡಿಗೆದಾರರು ಬಾಡಿಗೆ ಖರೀದಿ ಯೋಜನೆಯಲ್ಲಿ ಪುನರ್ವಸತಿಗೆ ಅರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಹೀಗಿರುತ್ತೆ ನಿಯಮ:ಈ ಯೋಜನೆ ಅಡಿ ಬಾಡಿಗೆದಾರರು ಮುಂಬೈನಲ್ಲಿ 300 ಚ.ಮೀ ಮನೆಯನ್ನು ಧಾರಾವಿ ಹೊರವಲಯದಲ್ಲಿ 25 ವರ್ಷಗಳ ನಾಮಮಾತ್ರ ಬಾಡಿಗೆ ಪಡೆಯುತ್ತಾರೆ. ಇದಾದ ಬಳಿಕ ಅವರು ಮಾಲೀಕತ್ವ ಹೊಂದುತ್ತಾರೆ. ಈ ಯೋಜನೆಯು ಸರಳೀಕೃತ ಮತ್ತು ಮಾಲೀಕತ್ವವನ್ನು ಪಡೆಯಲೂ 25 ವರ್ಷಗಳೊಳಗೆ ಹಣವನ್ನು ಪಾವತಿ ಮಾಡಲು ಸಹಾಯ ಮಾಡುತ್ತದೆ. ಇವರು ವಾಸಿಸುವ ಮನೆಯ ಬಾಡಿಗೆ ಮತ್ತು ಮಾಲೀಕತ್ವದ ಹಣವನ್ನು ಡಿಆರ್ಪಿ ಅಥವಾ ರಾಜ್ಯ ಸರ್ಕಾರ ಸಂಗ್ರಹಿಸಲಿದೆ.