ETV Bharat / state

ರೈತ ಉತ್ಪಾದಕ ಸಂಸ್ಥೆಯಿಂದ ಅನ್ನದಾತರಿಗೆ ಮಿಶ್ರ ಬೇಸಾಯದ ತರಬೇತಿ ; ನಿತ್ಯ ಆದಾಯಕ್ಕೆ ಆಸರೆ - MIXED FARMING

ರೈತ ಉತ್ಪಾದಕ ಸಂಸ್ಥೆಯಿಂದ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಹಸು ಸಾಕಾಣಿಕೆಯ ಕುರಿತು ತರಬೇತಿ ನೀಡಲಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ಶಿವಕುಮಾರ್ ಹುಬ್ಬಳ್ಳಿ ಅವರ ವಿಶೇಷ ವರದಿ ಇಲ್ಲಿದೆ..

Poultry farming
ನಾಟಿ ಕೋಳಿಗಳು (ETV Bharat)
author img

By ETV Bharat Karnataka Team

Published : Dec 30, 2024, 5:02 AM IST

ಹಾವೇರಿ : ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗುತ್ತಿವೆ. ಸರಿಯಾದ ಬೆಲೆ, ಸರಿಯಾದ ಇಳುವರಿ, ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿಯಾದ ಮಳೆ, ಬರ ಸೇರಿದಂತೆ ಪ್ರಕೃತಿಯ ಹಲವು ವಿಕೋಪಗಳಿಂದ ಸಹ ರೈತರು ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಆದರೆ ರೈತರು ಪರ್ಯಾಯ ಕೃಷಿಯಾದ ಮಿಶ್ರ ಬೇಸಾಯದ ಮೂಲಕ ಈ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು ಎನ್ನುತ್ತಿದೆ ಹಾವೇರಿಯ ಗ್ರೀನ್​ಚಿಕ್​ ರೈತರ ಉತ್ಪಾದಕರ ಕಂಪನಿ.

ಈ ಕಂಪನಿ ರೈತರಿಗೆ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ಹಸುಸಾಕಾಣಿಕೆ ಕುರಿತಂತೆ ತರಬೇತಿ ನೀಡುತ್ತಿದೆ. ಅಲ್ಲದೆ ತನ್ನ ಸದಸ್ಯರಿಗೆ ನಾಟಿ ಮತ್ತು ಬಿವಿ380 ತಳಿಯ ಕೋಳಿಗಳ ಸಾಕಾಣಿಕೆ ಬಗ್ಗೆ ಮಾಹಿತಿ ನೀಡುತ್ತೆ. ಸಾವಿರಕ್ಕೂ ಅಧಿಕ ಖಡಕನಾಥ್, ಬಿವಿ380, ಸ್ವರ್ಣದಾರಾ, ಕಾವೇರಿ, ಹಸೀಲ್ ಸೇರಿದಂತೆ ವಿವಿಧ ನಾಟಿ ತಳಿಯ ಕೋಳಿಗಳ ಸಾಕಾಣಿಕೆ ಮಾಡಿದೆ. ಈ ಕೋಳಿ ತಳಿಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದೆ.

ಕಂಪನಿ ಡೈರಕ್ಟರ್ ಇಮ್ತಿಯಾಜ್ ಮಾತನಾಡಿದರು (ETV Bharat)

ಸರ್ಕಾರಿ ಸ್ವಾಮ್ಯದ ಈ ಕಂಪನಿ ತಾನೇ ಕೋಳಿ ಮೊಟ್ಟೆಗಳಿಂದ ಮರಿಮಾಡಿ ರೈತರಿಗೆ ನೀಡುತ್ತಿದೆ. ಇದಕ್ಕಾಗಿ ಮೊಟ್ಟೆಗಳಿಂದ ಮರಿಮಾಡುವ ಹೈಟೆಕ್ನಾಲಜಿಯ ಇನ್​ಕ್ಯುಬೇಟರ್ ತರಿಸಿದೆ. ಅಲ್ಲದೆ ಸಂಘದ ಸದಸ್ಯರೇ ಇನ್​​ಕ್ಯುಬೇಟರ್​ ತಯಾರಿಸಿ ರೈತರಿಗೆ ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಈ ಕಂಪನಿಯಲ್ಲಿ ಸುಮಾರು 400 ರೈತರು ಸದಸ್ಯರಾಗಿದ್ದಾರೆ. ಕಂಪನಿ ತಾನು ಗಳಿಸುವ ಲಾಭವನ್ನು ಸದಸ್ಯರಿಗೆ ನೀಡುತ್ತಿದೆ. ಈ ಕಂಪನಿಯ ಸದಸ್ಯರು, ಆಡಳಿತ ಮಂಡಳಿ ಎಲ್ಲರೂ ರೈತರಾಗಿದ್ದಾರೆ. ರೈತರ ಶ್ರೇಯೋಭಿಲಾಷೆಗಾಗಿ ದುಡಿಯುತ್ತಿದ್ದಾರೆ. ಕಂಪನಿ ಸಹಕಾರದಿಂದ ಲಾಭದಲ್ಲಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವು ನೀಡುವಂತೆ ಮನವಿ ಮಾಡಿದೆ.

hens
ನಾಟಿ ಕೋಳಿ (ETV Bharat)

ಈ ಬಗ್ಗೆ ಕಂಪನಿ ಡೈರೆಕ್ಟರ್​ ಕಲ್ಮೇಶ್ ಅವರು ಮಾತನಾಡಿ, 'ಮೊದಲು ನಾವು ಕೋಳಿ ಸಾಕಿದೆವು. ಕೋಳಿ, ಕುರಿ, ಎಮ್ಮೆ ಹೀಗೆ ನಾನಾ ರೀತಿಯ ಪ್ರಾಣಿಗಳಿಗೆ ಬೇಕಾದ ಆಹಾರವನ್ನು ಉತ್ಪಾದಿಸಿ ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಮಾರ್ಕೆಟ್​ಗಿಂತ ಕಡಿಮೆ ದರದಲ್ಲಿ ನಾವು ಆಹಾರ ಉತ್ಪನ್ನಗಳನ್ನ ನೀಡುತ್ತಿದ್ದೇವೆ' ಎಂದರು.

Poultry farming
ಕೋಳಿ ಸಾಕಾಣಿಕೆ (ETV Bharat)

ಕಂಪನಿ ಡೈರಕ್ಟರ್ ಇಮ್ತಿಯಾಜ್ ಅವರು ಮಾತನಾಡಿ, 'ನಮ್ಮ ಕಂಪನಿಯಿಂದ ರೈತರಿಗೆ ಕೃಷಿಯ ಜೊತೆಗೆ ಪೂರಕವಾಗಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯ ತರಬೇತಿ ನೀಡುತ್ತಿದ್ದೇವೆ. ಇಲ್ಲಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವೂ ಇರುತ್ತದೆ. ಅಲ್ಲದೇ, ರೈತರ ಉತ್ಪನ್ನವನ್ನ ನಾವು ಖರೀದಿಸಿ ಮಾರುಕಟ್ಟೆಗೆ ರವಾನಿಸುತ್ತೇವೆ. ನಮ್ಮ ಕಂಪನಿಯಲ್ಲಿ ಸದಸ್ಯರಾದವರಿಗೆ ರಿಯಾಯಿತಿ ದರದಲ್ಲಿ ಆಹಾರವನ್ನ ಕೊಡುತ್ತೇವೆ. ಸದ್ಯ ನಾಟಿ ಕೋಳಿಗೆ ಬಾರಿ ಬೇಡಿಕೆ ಇದೆ. ಇಲ್ಲಿ ಉತ್ಪಾದಿಸುವ ಉತ್ಪನ್ನಗಳಿಗೆ ಸರ್ಕಾರ ಒಂದು ಔಟ್​​ಲೇಟ್ ನೀಡಿದರೆ ಅಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುತ್ತೆ' ಎಂದಿದ್ದಾರೆ.

Poultry farming
ನಾಟಿ ಕೋಳಿಗಳು (ETV Bharat)

ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ರೈತರು ಸ್ವಾವಲಂಬಿಗಳಾಗುತ್ತಾರೆ. ಸಾಲದಿಂದ ಮುಕ್ತಿಪಡೆಯುವ ರೈತರು ಲಾಭ ಕಾಣುವಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ರಯತ್ನ ಮಾಡಿದರೆ ಜಿಲ್ಲೆಯ ಇನ್ನಷ್ಟು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಕಂಪನಿಯ ಈ ಕಾರ್ಯ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಮಿಶ್ರ ಬೇಸಾಯದ ಮೂಲಕ ರೈತರು ಸ್ವಲ್ಪ ಅದಾಯ ಪಡೆಯಬಹುದು. ಕೋಳಿ ಸಾಕಾಣಿಕೆ, ಕುರಿಸಾಕಾಣಿಕೆ, ಹಸುಸಾಕಾಣಿಕೆಯಿಂದ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಬಹುದು. ಜಮೀನಿನಲ್ಲಿ ಬೆಳೆಯುವ ಆರು ತಿಂಗಳು ಮೂರು ತಿಂಗಳ ಬೆಳೆಯ ಆದಾಯದ ಜೊತೆಗೆ ಈ ರೀತಿಯ ದಿನನಿತ್ಯ ಆದಾಯದ ಮೂಲ ತಿಳಿದುಕೊಂಡರೆ ರೈತರು ಇದ್ದುದರಲ್ಲಿ ಉತ್ತಮ ಜೀವನ ಸಾಗಿಸಬಹುದು ಎನ್ನುತ್ತಾರೆ ಈ ಕಂಪನಿಯ ರೈತ ಸದಸ್ಯರು.

ಇದನ್ನೂ ಓದಿ : ಟ್ರೌಟ್ ಮೀನು ಕೃಷಿ: ಸಂಪ್ರದಾಯ ಮತ್ತು ಉತ್ಪಾದನೆಯ ಯಶೋಗಾಥೆ - STORY OF TROUT FISH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.