ಹೈದರಾಬಾದ್:ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದ, ದೈಹಿಕವಾಗಿ ಸದೃಢವಾಗಿದ್ದ ಗೋವಾದ ದಂತ ವೈದ್ಯರೊಬ್ಬರು ಹಾಫ್ ಮ್ಯಾರಥಾನ್ನಲ್ಲಿ ಭಾಗಿಯಾದ ಒಂದೇ ಗಂಟೆಯಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ವರದಿಯಾಗಿದೆ.
ಗೋವಾದ ಬೊಗಮಲೊದ ಡಾ ಮಿಥುನ್ ಕುಡಲ್ಕರ್ ಸಾವ್ನಪ್ಪಿದ ವೈದ್ಯ. ಭಾನುವಾರ ಡಿಸೆಂಬರ್ 8ರಂದು ದಕ್ಷಿಣ ಗೋವಾದ ಚಿಕಲಿಮ್ ಗ್ರಾಮದಲ್ಲಿ ಪ್ರತಿವರ್ಷ ನಡೆಸುತ್ತಿರುವ 32.2 ಕಿಮೀ ವಿಭಾಗದ ಮ್ಯಾರಥಾನ್ನಲ್ಲಿ ಅವರು ಭಾಗಿಯಾಗಿದ್ದರು.
ಈ ಮ್ಯಾರಥಾನ್ ಓಟ ಮುಗಿಸಿ ಮನೆಗೆ ಬಂದ ಅವರು ಭುಜ ಮತ್ತು ಹೊಟ್ಟೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದರು ಎಂದು ಅವರ ತಂದೆ ವೈದ್ಯರಾದ ಧ್ಯಾನೆಶ್ವರ್ ಕುಡಲ್ಕರ್ ತಿಳಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಆಗಿದ್ದೇನು?; ಮೊದಲುವಾಂತಿ ಮಾಡಿದ್ದ ದಂತವೈದ್ಯ, ಬಳಿಕ ಕೊಂಚ ನೀರು ಕುಡಿದ ಬಳಿಕ ಹಾಸಿಗೆ ಮೇಲೆ ಕುಸಿದು ಬಿದ್ದರು. ಈ ವೇಳೆ ವೈದ್ಯರಾಗಿದ್ದ ಮೃತರ ತಂದೆ ತಕ್ಷಣಕ್ಕೆ ಸಿಪಿಆರ್ ನೀಡುವ ಪ್ರಯತ್ನ ಮಾಡಿದರು. ಆದರೆ ಇದು ಯಾವುದೇ ಪ್ರಯೋಜವನ್ನು ನೀಡಲಿಲ್ಲ. ತಕ್ಷಣವೇ ಅವರನ್ನು ಚಿಕಲಿಮ್ ಆಸ್ಪತ್ರೆಗೆ ದಾಲಿಸಲಾಯಿತು. ಆದರೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀವ್ರ ಹೃದಯಾಘಾತವೇ ಈ ಸಾವಿಗೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಮೃತ ವೈದ್ಯ, ಹೆಂಡತಿ ಮತ್ತು 8 ವರ್ಷದ ಮಗನನ್ನು ಅಗಲಿದ್ದಾರೆ. ಇವರ ಇನ್ಸ್ಟಾಟಾಗ್ರಾಂ ಪೇಜ್ನಲ್ಲಿ ಇರುವಂತೆ ಇವರು ಹಾಫ್ ಮ್ಯಾರಥಾನರ್, ಸೈಕಲಿಸ್ಟ್ ಮತ್ತು ಕ್ಲಬ್ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ. ದಂತ ವೈದ್ಯ ಮಿಥುನ್ ಅನೇಕ ಹಾಫ್ ಮ್ಯಾರಥಾನ್, ಸೈಕಲಿಂಗ್ ಮತ್ತು ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾಗಿಯಾಗಿದ್ದರು. ಈ ಕುರಿತು ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾದಲ್ಲಿ ಕಾಣಬಹುದಾಗಿದೆ.
ಮೃತ ಮಗನ ಕುರಿತು ಮಾತನಾಡಿರುವ ತಂದೆ, ಆತ ತುಂಬಾನೇ ಸದೃಢವಾಗಿದ್ದು, ದೈಹಿಕ ಚಟುವಟಿಕೆಯಿಂದಲೇ ದಿನವನ್ನು ಆರಂಭಿಸುತ್ತಿದ್ದರು. ಓಟ ಮತ್ತು ಸೈಕಲ್ ಸ್ಪರ್ಧೆಯಲ್ಲಿ ಪದಕಗಳನ್ನು ಕೂಡಾ ಮಿಥುನ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ವೈದ್ಯನ ಸ್ನೇಹಿತ ಜಿತೇಂದ್ರ ಧ್ಯಾನಿ ಮಾತನಾಡಿ, ನಾನು 42.2 ಕಿ.ಮೀ ವರ್ಗದ ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದೆ. ಓಟದಲ್ಲಿ ಕುಡಲ್ಕರ್ ಸದೃಢವಾಗಿದ್ದ. ಅಸಿಡಿಟಿ ಎಂದು ಹೇಳಿದ ಕಾರಣಕ್ಕೆ ಅಲ್ಲಿಯೇ ಆತನನ್ನು ಪರೀಕ್ಷಿಸಲಾಯಿತು. ಆಗ ಆತ ಫಿಟ್ ಆಗಿದ್ದಾನೆ ಎಂದು ಘೋಷಿಸಿದ ಬಳಿಕವೇ ಆತ ತನ್ನ ಮನೆಗೆ ಮರಳಿದ್ದ, ಆದರೆ ಆತ ದಿಢೀರ್ ಮೃತಪಟ್ಟಿರುವುದು ಆಘಾತ ತಂದಿದೆ ಎಂದು ಹೇಳಿದ್ದಾರೆ. ವೈದ್ಯನ ಸಾವಿಗೆ ಗೋವಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೂಡ ಸಂತಾಪ ವ್ಯಕ್ತಪಡಿಸಿದೆ.
ಹೆಚ್ಚುತ್ತಿರುವ ಹೃದಯಾಘಾತದ ಟ್ರೆಂಡ್: ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಪೇಪರ್ ಪ್ರಕಾರ ಕ್ರೀಡಾ ಸಂಬಂಧಿತ ಹಠಾತ್ ಹೃದಯ ಸ್ತಂಭನ (ಎಸ್ಸಿಎ) ಅನೇಕರಲ್ಲಿ ಗೊಂದಲ ಮೂಡಿಸುತ್ತದೆ. ಕಾರಣ ಅಥ್ಲೆಟಿಕ್ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಜನರಿಗಿಂತ ಇವರಲ್ಲಿ ಹೃದಯ ಸ್ತಂಭನ ಸಾಧ್ಯತೆ ಕಡಿಮೆ ಇರುತ್ತದೆ. ಕ್ರೀಡಾ ಸಂಬಂಧಿತ ಎಸ್ಸಿಎ ಕಡಿಮೆ ಇರುತ್ತದೆ. ಆದರೆ, ಇದು 35ನೇ ವರ್ಷದವರಲ್ಲೇ ಸಂಭವಿಸುತ್ತಿರುವುದು ತುಸು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಕ್ಕಳೊಂದಿಗೆ ಮಕ್ಕಳಾದ ಸಚಿನ್: ಮಗಳು ಸಾರಾ ಜತೆಗೂಡಿ ಹಗ್ಗಜಗ್ಗಾಟ ಆಡಿದ ಮಾಸ್ಟರ್ ಬ್ಲಾಸ್ಟರ್