ಕರ್ನಾಟಕ

karnataka

ETV Bharat / bharat

'ಸಂವಿಧಾನ ಹತ್ಯೆ ದಿನ' ಪ್ರಶ್ನಿಸಿದ್ದ ಪಿಐಎಲ್​ ವಜಾಗೊಳಿಸಿದ ದೆಹಲಿ ಹೈಕೋರ್ಟ್ - Samvidhan Hatya Diwas - SAMVIDHAN HATYA DIWAS

ಜೂನ್ 25ರಂದು ಸಂವಿಧಾನ ಹತ್ಯೆ ದಿನವಾಗಿ ಆಚರಿಸುವ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿದ್ದ ಪಿಐಎಲ್​ ಅನ್ನು ದೆಹಲಿ ಹೈಕೋರ್ಟ್​ ವಜಾಗೊಳಿಸಿದೆ.

ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ (IANS)

By PTI

Published : Jul 26, 2024, 1:29 PM IST

ನವದೆಹಲಿ: ಪ್ರತಿವರ್ಷ ಜೂನ್ 25ರಂದು ಸಂವಿಧಾನ ಹತ್ಯೆ ದಿನವನ್ನಾಗಿ ಆಚರಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಕೇಂದ್ರದ ಅಧಿಸೂಚನೆಯು ಯಾವುದೇ ರೀತಿಯಲ್ಲಿಯೂ ಸಂವಿಧಾನಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಇಲ್ಲ ಹಾಗೂ ಈ ವಿಷಯವು ರಾಷ್ಟ್ರಕ್ಕೆ ಅಪಮಾನದ ವರ್ಗದಲ್ಲಿಯೂ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಜೂನ್ 25, 1975 ರಂದು ಆಗಿನ ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸಲ್ಲಿಸಲು ಜೂನ್ 25 ರಂದು ಸಂವಿಧಾನ ಹತ್ಯೆ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಸದ್ಯ ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಶುಕ್ರವಾರ ವಜಾಗೊಳಿಸಲಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ನ್ಯಾಯಪೀಠ, ಜುಲೈ 13ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯು ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯ ವಿರುದ್ಧವಾಗಿಲ್ಲ, ಬದಲಾಗಿ ತುರ್ತು ಪರಿಸ್ಥಿತಿಯ ಘೋಷಣೆಯ ನಂತರ ಸಂಭವಿಸಿದ ಅಧಿಕಾರದ ದುರುಪಯೋಗ, ಸಾಂವಿಧಾನಿಕ ನಿಬಂಧನೆಗಳ ದುರುಪಯೋಗ ಮತ್ತು ನಂತರದ ಅತಿರೇಕಗಳ ವಿರುದ್ಧ ಮಾತ್ರವಾಗಿದೆ ಎಂದು ಹೇಳಿದೆ. "ಅಧಿಸೂಚನೆಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಅಥವಾ ಸಂವಿಧಾನಕ್ಕೆ ಅಗೌರವ ತೋರುವುದಿಲ್ಲ" ಎಂದು ನ್ಯಾಯಾಲಯವು ಮನವಿಯನ್ನು ವಜಾಗೊಳಿಸುವಾಗ ಹೇಳಿತು.

ಸಂವಿಧಾನದ 352ನೇ ವಿಧಿಯ ಅಡಿಯಲ್ಲಿಯೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು, ಹೀಗಾಗಿ ಸಂವಿಧಾನವನ್ನು ಕೊಂದು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು ಎಂದು ಹೇಳುವುದು ತಪ್ಪಾಗುತ್ತದೆ ಎಂದು ಆರೋಪಿಸಿ ಸಮೀರ್ ಮಲಿಕ್ ಎಂಬ ವ್ಯಕ್ತಿ ಪಿಐಎಲ್ ಸಲ್ಲಿಸಿದ್ದರು. ಸರ್ಕಾರದ ಅಧಿಸೂಚನೆಯು ಅತ್ಯಂತ ಮಾನಹಾನಿಕರ ಮತ್ತು ಆಕ್ರಮಣಕಾರಿಯಾಗಿದೆ ಎಂದು ಅವರು ವಾದಿಸಿದರು. ಆದರೆ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ ರಾಜಕಾರಣಿಗಳು 'ಪ್ರಜಾಪ್ರಭುತ್ವದ ಕೊಲೆ' ಎಂಬ ಪದವನ್ನು ಆಗಾಗ ಬಳಸುವುದನ್ನು ನ್ಯಾಯಪೀಠ ಈ ಸಂದರ್ಭದಲ್ಲಿ ಉಲ್ಲೇಖಿಸಿತು.

ಜೂನ್ 25, 1976ರಂದು, ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು ಮತ್ತು ಆಗ ಅನೇಕ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿತ್ತು. ಸುಮಾರು ಎರಡು ವರ್ಷಗಳ ನಂತರ 1977ರ ಮಾರ್ಚ್ 21ರಂದು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲಾಯಿತು. ಇದು ಭಾರತದಲ್ಲಿ ಮೂರನೇ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯಾಗಿತ್ತು. ಮೊದಲ ಎರಡು ಬಾರಿ ಕ್ರಮವಾಗಿ 1962 ಮತ್ತು 1971 ರಲ್ಲಿ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಯುದ್ಧಗಳ ಸಮಯದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು.

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​ - Deve Gowda meets Modi

ABOUT THE AUTHOR

...view details