ನವದೆಹಲಿ:ಶನಿವಾರ ಬೆಳಗ್ಗೆಯಿಂದ ದೆಹಲಿಯ ಕೆಲವು ಭಾಗಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಭಾರಿ ಮಳೆ ಮತ್ತು ರಭಸದ ಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿವೆ.
ಸೆಕ್ಟರ್-9, ಆರ್‌ಕೆ ಪುರಂನಲ್ಲಿ, ರಸ್ತೆಯ ಒಂದು ಭಾಗ ಧ್ವಂಸಗೊಂಡಿದ್ದು, ಒಂದು ಮೋಟಾರ್ ಸೈಕಲ್ ಮತ್ತು ಕಾರು ಪೀಡಿತ ಪ್ರದೇಶಕ್ಕೆ ಬಿದ್ದಿದೆ. ಭಾರತೀಯ ಹವಾಮಾನ ಇಲಾಖೆ IMD ದೆಹಲಿ ಮತ್ತು ಎನ್‌ಸಿಆರ್‌ನಾದ್ಯಂತ ಹಲವಾರು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಇಂದು ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಇದು ಪಾಲಂ, ಸಫ್ದರ್‌ಜಂಗ್, ಲೋಡಿ ರಸ್ತೆ, ಐಜಿಐ ವಿಮಾನ ನಿಲ್ದಾಣ, ಮೆಹ್ರೌಲಿ, ಛತ್ತರ್‌ಪುರ, ಅಯನಗರ್, ದೇರಮಂಡಿ, ಗುರುಗ್ರಾಮ್, ಫರಿದಾಬಾದ್ ಮತ್ತು ಮನೇಸರ್‌ನಂತಹ ಪ್ರದೇಶಗಳನ್ನು ಒಳಗೊಂಡಿದೆ. ನೋಯ್ಡಾ ಮತ್ತು ಮನೇಸರ್ ನಲ್ಲಿ ಸಹ ಸಾಧಾರಣದಿಂದ ಭಾರೀ ಮಳೆ ಮತ್ತು ಮಿಂಚುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಗುಡುಗು ಸಹಿತ ಮಳೆ ಸಾಧ್ಯತೆ: ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಲಘುವಾಗಿ ಸಾಧಾರಣ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಮುನ್ಸೂಚನೆ ನೀಡಿದೆ. ಇದರಲ್ಲಿ ಯಮುನಾನಗರ, ಝಜ್ಜರ್, ಫರುಖ್‌ನಗರ, ಮತ್ತು ಹರಿಯಾಣದ ಹೊಡಲ್ ಸೇರಿವೆ. ಉತ್ತರ ಪ್ರದೇಶದ ಸಹರಾನ್‌ಪುರ, ಗಂಗೋಹ್, ದಿಯೋಬಂದ್, ಮುಜಾಫರ್‌ನಗರ, ಸಕೋಟಿ ತಾಂಡಾ, ಬರೌತ್, ದೌರಾಲಾ, ಬಾಗ್‌ಪತ್, ಮೀರತ್, ಮೋದಿನಗರ, ಕಿಥೋರ್ ಮತ್ತು ನಂದಗಾಂವ್ ಮತ್ತು ರಾಜಸ್ಥಾನದಲ್ಲಿ ತಿಜಾರಾ ಮತ್ತು ಅಲ್ವಾರ್ ಗಳಲ್ಲಿ ಮಳೆ ಆಗಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಏತನ್ಮಧ್ಯೆ, ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಮಥುರಾ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.