ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ ಫಲಿತಾಂಶ: ಆಪ್​ ನಾಯಕರಿಗೆ ಸೋಲಿನ ಭೀತಿ:​ ನಿಜವಾಗುತ್ತಾ ಎಕ್ಸಿಟ್​ ಪೋಲ್​ ಸಮೀಕ್ಷಾ ರಿಸಲ್ಟ್​​ - DELHI ELECTION RESULT UPDATE

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶದಲ್ಲಿ ಸದ್ಯ ಬಿಜೆಪಿ 43 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆರಂಭದಲ್ಲಿ ಮುಂದಿದ್ದ ಆಪ್​ ಪಕ್ಷ ಹಿನ್ನೆಡೆ ಸಾಧಿಸಿದೆ.

DELHI ASSEMBLY ELECTION 2025 RESULT UPDATE: DELHI ELECTION RESULT
ದೆಹಲಿ ಚುನಾವಣೆ ಫಲಿತಾಂಶ: ಬಹುಮತದತ್ತ ಬಿಜೆಪಿಗೆ; ಆಪ್​ಗೆ ಹಿನ್ನೆಡೆ (ETV Bharat)

By ETV Bharat Karnataka Team

Published : Feb 8, 2025, 9:00 AM IST

Updated : Feb 8, 2025, 9:07 AM IST

ನವದೆಹಲಿ: 8 ಗಂಟೆಗೆ ಆರಂಭವಾಗಿರುವ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶದ ಆರಂಭಿಕ ಹಂತದಲ್ಲಿ ಬಿಜೆಪಿ​ ಮುನ್ನಡೆ ಸಾಧಿಸಿದ್ದು ಭಾರೀ ಲೀಡ್​ನಲ್ಲಿದೆ. ಆಪ್​ ಹೀನಾಯ ಹಿನ್ನೆಡೆ ಕಂಡಿದೆ. ಇನ್ನು ಕಾಂಗ್ರೆಸ್​ ಪಕ್ಷ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಈ ಎಲ್ಲ ನಾಯಕರಿಗೆ ಆರಂಭಿಕ ಹಿನ್ನಡೆ:ಬಿಜೆಪಿ ಆರಂಭಿಕ ಮುನ್ನಡೆ ಪ್ರಕಾರ ಮ್ಯಾಜಿಕ್ ನಂಬರ್​ ದಾಟಿ ಮುನ್ನಡೆದಿದೆ. ಆಪ್​ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರಂಭಿಕ ಮತ ಎಣಿಕೆಯಲ್ಲಿ ಸಿಎಂ ಅತಿಶಿ ರಮೇಶ್ ಬಿಧುರಿ ವಿರುದ್ಧ ಹಿನ್ನಡೆಯಲ್ಲಿದ್ದಾರೆ. ಇನ್ನು ಅರವಿಂದ್ ಕೇಜ್ರಿವಾಲ್​ ಪ್ರವೇಶ್​ ವರ್ಮಾ ವಿರುದ್ಧ ಮೊದಲ ಹಂತಗಳಲ್ಲಿ ಹಿನ್ನಡೆ ಅನುಭವಿಸಿದ್ದರು, ಆದರೆ ಈಗ ಅವರು ಮುನ್ನಡೆ ಕಾಪಾಡಿಕೊಂಡಿದ್ದಾರೆ.

ಲೈವ್​ ಅಪ್​​ಡೇಟ್​:ಲೈವ್ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭ: ಕ್ಷಣ ಕ್ಷಣದ ಮಾಹಿತಿ

  • ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಸದಿಲ್ಲಿ ಸೀಟ್​ನಿಂದ 4ನೇ ಭಾರಿಗೆ ಚುನಾವಣೆಗೆ ಸ್ಫರ್ಧಿಸಿದ್ದಾರೆ. ಇವರ ವಿರುದ್ಧ ಈ ಕ್ಷೇತ್ರದಿಂದ ಬಿಜೆಪಿ ನಾಯಕ ಪ್ರವೇಶ್ ವರ್ಮಾ ಕಣಕ್ಕಿಳಿದಿದ್ದಾರೆ.
  • ಇನ್ನು ಪ್ರಮುಖವಾಗಿ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇವರಿಗೆ ಬಿಜೆಪಿಯಿಂದ ಸಂಸದ ಹಾಗೂ ಶಾಸಕರಾಗಿದ್ದ ರಮೇಶ್ ಬಿಧುರಿ ಅವರು ಫೈಟ್​​ ನೀಡುತ್ತಿದ್ದಾರೆ.
  • ಹಾಗೇ ಮತ್ತೊಂದು ಪವರ್​ಫುಲ್​ ಕ್ಷೇತ್ರ ಜಂಗ್‌ಪುರದಿಂದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸ್ಪರ್ಧಿಸಿದ್ದು ಈ ಕ್ಷೇತ್ರವೂ ಹಾಟ್​ ಸೀಟಾಗಿದೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ತರ್ವಿಂದರ್ ಸಿಂಗ್ ಮರ್ವಾ ಮತ್ತು ಕಾಂಗ್ರೆಸ್‌ನ ಫರ್ಹಾದ್ ಸೂರಿ ಸ್ಪರ್ಧಿಸುತ್ತಿದ್ದಾರೆ.

ಫೆಬ್ರವರಿ 5ಕ್ಕೆ ದೆಹಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಆರಂಭವಾಗಿದ್ದು ಫಲಿತಾಂಶ ಹೊರಬೀಳಲಿದೆ. ಮತ್ತೆ ರಾಜಧಾನಿಯನ್ನು ಆಪ್​ ಪಕ್ಷವೇ ಮುನ್ನಡೆಸಲಿದೆಯಾ ಅಥವಾ ಬಿಜೆಪಿ ಐತಿಹಾಸಿಕ ಗೆಲುವಿನ ಮೂಲಕ ರಾಷ್ಟ್ರ ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿಯಲಿದೆಯಾ ಕಾಯಬೇಕಿದೆ.

ಚುನಾವಣಾ ಸಮೀಕ್ಷೆಗಳು ಬಿಜೆಪಿ ಈ ಭಾರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಸಮೀಕ್ಷೆಯನ್ನು ಆಪ್​ ಪಕ್ಷ ಸುಳ್ಳಾಗಿಸುತ್ತಾ ಎಂಬುದಕ್ಕೆ ಮಧ್ಯಾಹ್ನ ತೆರ ಬೀಳಲಿದೆ.

ಇದನ್ನೂ ಓದಿ:ದೆಹಲಿ ಚುನಾವಣೆ; ಈ ಎಲ್ಲ ವಿವಿಐಪಿಗಳ ಭವಿಷ್ಯವೇನು?: ಇಂದಿನ ಫಲಿತಾಂಶದ ಮೇಲಿದೆ ಎಲ್ಲರ ಚಿತ್ತ

ಇದನ್ನೂ ಓದಿ:ಬಿಜೆಪಿಗೆ ಬಹುಮತ ಬಂದರೆ ಸಿಎಂ ಯಾರು?: ರೇಸ್‌ನಲ್ಲಿ ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ, ದುಷ್ಯಂತ್ ಗೌತಮ್

Last Updated : Feb 8, 2025, 9:07 AM IST

ABOUT THE AUTHOR

...view details