ಚೆನ್ನೈ, ತಮಿಳುನಾಡು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತವೂ ನವೆಂಬರ್ 29 ರ ಶನಿವಾರ ಮಧ್ಯಾಹ್ನ ಪುದುಚೇರಿ ಸಮೀಪದಲ್ಲಿ ಕರೈಕಲ್ ಮತ್ತು ಮಹಾಬಲಿಪುರಂ ನಡುವೆ ಅಪ್ಪಳಿಸಲಿದೆ ಎಂದು ಚೆನ್ನೈ ಹವಾಮಾನ ಕೇಂದ್ರದ ನಿರ್ದೇಶಕರಾದ ಡಾ ಬಾಲಚಂದ್ರನ್ ತಿಳಿಸಿದರು.
ಈ ಕುರಿತು ಮಾತನಾಡಿರುವ ಅವರು, ಸದ್ಯ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಅದು ವಾಯುವ್ಯ ದಿಕ್ಕಿನೆಡೆಗೆ ಸಾಗುವ ನಿರೀಕ್ಷೆ ಇದೆ. ಇದು ಶೀಘ್ರದಲ್ಲೇ ಚಂಡಮಾರುತವಾಗಿ ತೀವ್ರಗೊಳ್ಳಲಿದೆ. ಇದು ನಾಳೆ ಮಧ್ಯಾಹ್ನ ಪುದುಚೇರಿ ಸಮೀಪ ಕರೈಕಲ್ ಮತ್ತು ಮಹಾಬಲಿಪುರಂ ನಡುವೆ ಅಪ್ಪಳಿಸಲಿದೆ. ಇದರ ಫಲಿತಾಂಶವಾಗಿ ತಮಿಳುನಾಡು ಉತ್ತರ ಕರಾವಳಿಯ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಮತ್ತೆ ಕೆಲವು ಪ್ರದೇಶದಲ್ಲಿ ಭಾರಿಯಿಂದ ಕೂಡಿದ ಭಾರಿ ಮಳೆಯಾಗಲಿದೆ ಎಂದರು.
ಸಮುದ್ರಕ್ಕೆ ಇಳಿಯದಂತೆ ಸೂಚನೆ:ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ಗಾಳಿಯ ವೇಳೆ ಗಂಟೆಗೆ 70 ರಿಂದ 80 ಕಿ.ಮೀ ಇದ್ದು, ಕೆಲವು ಸಂದರ್ಭದಲ್ಲಿ ತೀವ್ರಗೊಂಡು ಗಂಟೆಗೆ 90 ಕಿ.ಮೀ ಆಗಬಹುದು. ಈ ಮುನ್ಸೂಚನೆ ಹಿನ್ನೆಲೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿದ್ದೇವೆ. ಚಂಡಮಾರುತ ಮತ್ತು ಮಳೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ವ್ಯವಸ್ಥೆ ಮೂಲಕ ಅಪ್ಡೇಟ್ ಮಾಡಲಾಗುವುದು ಎಂದರು.
ಬಂಗಾಳ ಕೊಲ್ಲಿಯಲ್ಲಿನ ನಿನ್ನೆಯ ಹವಾಮಾನ ವ್ಯವಸ್ಥೆ ಅನುಸಾರ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಎರಡು ದಿನದಲ್ಲಿ ಸೈಕ್ಲೋನ್ ತೀವ್ರಗೊಳ್ಳಲಿದ್ದು, ಭಾರಿ ಮಳೆಯಾಗಲಿದೆ.