ಕರ್ನಾಟಕ

karnataka

ETV Bharat / bharat

ದಿನಕ್ಕೆ ಸರಾಸರಿ 109 ಪ್ರಕರಣಗಳ ಇತ್ಯರ್ಥ: ವಂಡರ್ ಬುಕ್ ಆಫ್ ಇಂಟರ್​ನ್ಯಾಷನಲ್​ ದಾಖಲೆ ಬರೆದ ಜಸ್ಟಿಸ್ - JUSTICE AMARNATH GOUD

ತ್ರಿಪುರಾ ಹೈಕೋರ್ಟ್ ನ್ಯಾಯಮೂರ್ತಿ ಅಮರನಾಥ್ ಗೌಡ ಅವರು ವಂಡರ್ ಬುಕ್ ಆಫ್​ ರೆಕಾರ್ಡ್ಸ್​​​​​ನಲ್ಲಿ ಸ್ಥಾನ ಪಡೆದಿದ್ದಾರೆ.

Justice Amarnath Gowda
ನ್ಯಾಯಮೂರ್ತಿ ಅಮರನಾಥ್ ಗೌಡ (ETV Bharat)

By ETV Bharat Karnataka Team

Published : Nov 16, 2024, 9:28 PM IST

ಹೈದರಾಬಾದ್​ ( ತೆಲಂಗಾಣ ): ತ್ರಿಪುರಾ ಹೈಕೋರ್ಟ್ ನ್ಯಾಯಮೂರ್ತಿ ಅಮರನಾಥ್ ಗೌಡ ಅವರಿಗೆ ಅಪರೂಪದ ಗೌರವ ಲಭಿಸಿದೆ. ನ್ಯಾಯಮೂರ್ತಿಗಳಾಗಿ ಅತಿ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿದ ಜಸ್ಟೀಸ್​ ಅಮರನಾಥ್ ಗೌಡ್ ಅವರು ವಂಡರ್ ಬುಕ್ ಆಫ್ ಇಂಟರ್​ನ್ಯಾಷನಲ್​ ದಾಖಲೆಗಳನ್ನು ಪ್ರವೇಶಿಸಿದ್ದಾರೆ.

ತೆಲಂಗಾಣ ರಾಜ್ಯಪಾಲ ಜಿಷ್ಣುದೇವ್ ವರ್ಮಾ ಅವರು ಇಂದು ರಾಜಭವನದಲ್ಲಿ ನ್ಯಾಯಮೂರ್ತಿ ಅಮರನಾಥ್ ಗೌಡ ಅವರಿಗೆ ವಂಡರ್ ಬುಕ್ ಆಫ್ ರೆಕಾರ್ಡ್ಸ್ ಅಂತಾರಾಷ್ಟ್ರೀಯ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.

ನ್ಯಾಯಮೂರ್ತಿ ಅಮರನಾಥ್ ಗೌಡ ಅವರು 2017 ರಿಂದ 91,157 ಪ್ರಕರಣಗಳನ್ನು ಪರಿಹರಿಸಿದ್ದಾರೆ. ಸರಾಸರಿ 109 ದೈನಂದಿನ ಪ್ರಕರಣಗಳನ್ನು ಪರಿಹರಿಸಿ, ದಾಖಲೆಯನ್ನು ನಿರ್ಮಿಸಿದ್ದಾರೆ. ನ್ಯಾ. ಅಮರನಾಥ್ ಗೌಡ್ ಅವರು 2017 ರಲ್ಲಿ ತೆಲಂಗಾಣ ಮತ್ತು ಎಪಿ ಜಂಟಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ರಾಜ್ಯಪಾಲ ಜಿಷ್ಣುದೇವ್ ವರ್ಮಾ ಅವರು ನ್ಯಾಯಮೂರ್ತಿ ಅಮರನಾಥ್ ಗೌಡ ಅವರಿಗೆ ಪ್ರಮಾಣಪತ್ರ ನೀಡಿದರು (ETV Bharat)

ನಂತರ 28 ಅಕ್ಟೋಬರ್ 2021 ರಂದು ಅವರನ್ನು ತ್ರಿಪುರಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ವರ್ಗಾವಣೆ ಮಾಡಲಾಗಿತ್ತು. ನ್ಯಾಯಮೂರ್ತಿ ಅಮರನಾಥ್ ಗೌಡ್ ಅವರು 11 ನವೆಂಬರ್ 2022 ರಿಂದ 16 ಏಪ್ರಿಲ್ 2023 ರವರೆಗೆ ತ್ರಿಪುರಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ತೆಲಂಗಾಣ ಹೈಕೋರ್ಟ್‌ನಲ್ಲಿ 40 ಪ್ರತಿಶತ ಬಾಕಿ ಉಳಿದಿರುವ ಪ್ರಕರಣಗಳು ಮತ್ತು ತ್ರಿಪುರಾ ಹೈಕೋರ್ಟ್‌ನಲ್ಲಿ 60 ಪ್ರತಿಶತ ಬಾಕಿ ಪ್ರಕರಣಗಳನ್ನು ಅವರು ಬಗೆ ಹರಿಸಿದ್ದಾರೆ.

"ಇದು ನ್ಯಾಯಮೂರ್ತಿ ಅಮರನಾಥ್ ಗೌಡ ಅವರ ಶ್ರೇಷ್ಠ ದಾಖಲೆಗೆ ಸಾಕ್ಷಿಯಾಗಿದೆ. ಹೈದರಾಬಾದ್ ಮತ್ತು ತ್ರಿಪುರಾ ಹೈಕೋರ್ಟ್‌ಗಳಲ್ಲಿ 2017 ರಿಂದ 2024 ರವರೆಗೆ ಪ್ರತಿದಿನ ಸರಾಸರಿ 109 ಪ್ರಕರಣಗಳನ್ನು ಹಾಗೂ 91,157 ವೈಯಕ್ತಿಕ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅವರ ಅಸಾಧಾರಣ ಸಾಧನೆಯನ್ನು ನಾವು ಗುರುತಿಸಿದ್ದೇವೆ. ನ್ಯಾಯವನ್ನು ಎತ್ತಿಹಿಡಿಯುವ ಈ ಮಹೋನ್ನತ ಬದ್ಧತೆ ನ್ಯಾಯದ ಆಚರಣೆಯಲ್ಲಿ ಪ್ರಮುಖ ಮೈಲಿಗಲ್ಲು"- ವಂಡರ್ ಬುಕ್ ಆಫ್ ರೆಕಾರ್ಡ್ ಇಂಟರ್ನ್ಯಾಷನಲ್

ರಾಜಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವಂಡರ್ ಬುಕ್ ಆಫ್ ರೆಕಾರ್ಡ್ ಅಂತಾರಾಷ್ಟ್ರೀಯ ಸಂಯೋಜಕ ಬಿಂಗಿ ನರೇಂದರ್ ಗೌಡ್ ಮತ್ತು ಲಯನ್ ವಿಜಯಲಕ್ಷ್ಮಿ ಭಾಗವಹಿಸಿದ್ದರು.

ಇದನ್ನೂ ಓದಿ :17 ಭಾಷೆಗಳಲ್ಲಿ ಹಾಡುವ ಬಾಲಕಿ!.. ವಂಡರ್​ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ

ABOUT THE AUTHOR

...view details