ಕರ್ನಾಟಕ

karnataka

ETV Bharat / bharat

ವೀಣಾ - ವಾಣಿ ಸಯಾಮಿಗಳ 22ನೇ ಹುಟ್ಟುಹಬ್ಬದ ಸಂಭ್ರಮ: ಹುಟ್ಟೂರಿನಲ್ಲಿ ಹರ್ಷದ ಹೊನಲು

ಅವಳಿ ಮಕ್ಕಳಾದ ವೀಣಾ-ವಾಣಿಗೆ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಿಕೊಂಡರು.

By ETV Bharat Karnataka Team

Published : 5 hours ago

conjoined-twins-veena-vani-birthday-celebrations-in-mahabubabad-district
ವೀಣಾ - ವನಿಲಾ ಸಯಾಮಿಗಳಿಗೆ ಹುಟ್ಟುಹಬ್ಬದ ಸಂಭ್ರಮ: ಹುಟ್ಟೂರಿನಲ್ಲಿ ಸಂಭ್ರಮದ ಹೊನಲು (ETV Bharat)

ಹೈದರಾಬಾದ್​:ಸಂಯೋಜಿತ ಅವಳಿಗಳಾದ ವೀಣಾ - ವಾಣಿ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇದೆ ಅಂದುಕೊಂಡಿದ್ದೇವೆ. ಹುಟ್ಟುವಾಗಲೇ ತಲೆ ಜೋಡಿಸಿಕೊಂಡೇ ಭೂಮಿಗೆ ಬಂದ ಇವರು, ಹೊಸ ತಾಂತ್ರಿಕ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ನಿಂತರು. ಬುಧವಾರ, ಈ ಅವಳಿಗಳು 21 ವರ್ಷಗಳನ್ನು ಪೂರೈಸಿ 22ನೇ ವಸಂತಕ್ಕೆ ಕಾಲಿರಿಸಿದರು. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಹೈದರಾಬಾದ್‌ನ ಶಿಶುವಿಹಾರದಲ್ಲಿ ಆಚರಿಸಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಇವರು ತಮ್ಮ ಹುಟ್ಟೂರಿನಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರ ನಡುವೆ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಿಕೊಂಡರು.

ಈ ಅಪರೂಪದ ಸಯಾಮಿಗಳ ಹುಟ್ಟೂರು ಅಥವಾ ಮೂಲ ತೆಲಂಗಾಣದ ಮಹಬೂಬಾಬಾದ್​ ಜಿಲ್ಲೆಯ ದಿಲತ್ಪಲ್ಲಿ ಮಂಡಲಂನ ಬಿರಿಶೆಟ್ಟಿಗುಡೆಂ ಗ್ರಾಮ. ಅಕ್ಟೋಬರ್ 16, 2003 ರಂದು ಸೂರ್ಯಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಗಣಿ ಮುರಳಿ - ನಾಗಲಕ್ಷ್ಮಿ ಎಂಬ ದಂಪತಿಗೆ ಜನಿಸಿದ ಮಕ್ಕಳಾಗಿದ್ದಾರೆ. ಹುಟ್ಟುವಾಗಲೇ ಎರಡು ತಲೆಗಳನ್ನು ಜೋಡಿಸಿಕೊಂಡೇ ಜನಿಸಿದ್ದರು ಈ ಇಬ್ಬರು. ಗುಂಟೂರಿನ ಖ್ಯಾತ ವೈದ್ಯೆ ನಾಯುಡಮ್ಮ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದರು. ದೇಶ, ವಿದೇಶಗಳ ವೈದ್ಯರು ಬಂದು ಶಸ್ತ್ರ ಚಿಕಿತ್ಸೆ ಮಾಡಿ ಬೇರ್ಪಡಿಸಿದರೂ ಯಾವುದೇ ಫಲ ಸಿಕ್ಕಿಲ್ಲ. ಅವರ ಅವಿನಾಭಾವ ಸಂಬಂಧ ಇಂದು 21 ವರ್ಷಗಳನ್ನು ಪೂರೈಸಿದೆ.

13 ವರ್ಷಗಳ ಕಾಲ ನಿಲೋಫರ್ ಆಸ್ಪತ್ರೆಯಲ್ಲಿದ್ದರು. ನಂತರ ಹೈದರಾಬಾದ್‌ನಲ್ಲಿರುವ ಸ್ಟೇಟ್ ಹೋಮ್ ಅವರ ನಿವಾಸವಾಯಿತು. ಕಳೆದ 21 ವರ್ಷಗಳಿಂದ ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡ ಈ ಅವಳಿ ಮಕ್ಕಳು ಮೊದಲ ಬಾರಿಗೆ ತಮ್ಮ ಹುಟ್ಟೂರು ಬೀರಶೆಟ್ಟಿ ಗುಡೇಂ ಗ್ರಾಮಕ್ಕೆ ಆಗಮಿಸಿದ್ದರು.

ಕ್ಲಿಷ್ಟಕರ ಶಸ್ತ್ರಚಿಕಿತ್ಸೆ: ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಲಂಡನ್ ಮುಂತಾದ ದೇಶಗಳ ವೈದ್ಯರು ಬಂದು ವೀಣಾ - ವಾಣಿಗೆ ಶಸ್ತ್ರ ಚಿಕಿತ್ಸೆ ಮಾಡಲು ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಿದರು. ಆದರೆ, ಶಸ್ತ್ರಚಿಕಿತ್ಸೆ ಜಟಿಲವಾದ ಕಾರಣ ಸರಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಆಪರೇಷನ್ ನಿಲ್ಲಿಸಿ ವರ್ಷಗಳೇ ಕಳೆದಿವೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಪ್ರಸ್ತುತ ಅವರನ್ನು ಯೂಸಫ್‌ಗುಡಾದಲ್ಲಿರುವ ಸ್ಟೇಟ್‌ ಹೋಮ್‌ನಲ್ಲಿ ಇರಿಸಲಾಗಿದೆ. ಇಬ್ಬರೂ ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.

ಸರ್ಕಾರದ ಆಸರೆಯಲ್ಲಿ ಬದುಕು:ಎಲ್ಲಾ ರೀತಿಯ ಸೇವೆಗಳನ್ನು ರಾಜ್ಯ ಸರ್ಕಾರದಿಂದಲೇ ಒದಗಿಸಲಾಗುತ್ತಿದೆ. ಕಳೆದ ವರ್ಷ ವೀಣಾವಾಣಿ ತಮ್ಮ ಹುಟ್ಟೂರು ಬೀರಶೆಟ್ಟಿಗುಡೆಂಗೆ ಬಂದು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದರು. ತಮ್ಮ ಮಕ್ಕಳಿಗೆ ಆಪರೇಷನ್ ಮಾಡುವಂತೆ ಎಲ್ಲ ಸರಕಾರ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕನಿಷ್ಠ ಮಕ್ಕಳೊಂದಿಗಾದರೂ ಇರಲು ಅವಕಾಶ ಕೊಡಿ ಎಂದು ಸರಕಾರವನ್ನು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಪೋಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ಪೋಷಕರ ಸಂತಸಕ್ಕೆ ಪಾರವೇ ಇರಲಿಲ್ಲ:22 ವರ್ಷಗಳ ನಂತರ ವೀಣಾ-ವಾಣಿ ತಮ್ಮ ಬಳಿಗೆ ಬಂದಿದ್ದನ್ನು ನೋಡಿದ ಪಾಲಕರ ಸಂತಸಕ್ಕೆ ಪಾರವೇ ಇರಲಿಲ್ಲ. ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ಶುಭ ಹಾರೈಸಿದರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು. ಸ್ವಂತ ಗ್ರಾಮಕ್ಕೆ ಬಂದು ಕುಟುಂಬಸ್ಥರು, ಬಂಧುಮಿತ್ರರ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಅವಳಿ ಮಕ್ಕಳಾದ ವೀಣಾ-ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಎನ್​​ಸಿ-ಕಾಂಗ್ರೆಸ್​ ಸರ್ಕಾರದ 'ಏಕೈಕ ಹಿಂದು ಶಾಸಕ'ನಿಗೆ ಡಿಸಿಎಂ ಪಟ್ಟ: ಯಾರು ಈ ಸುರೀಂದರ್​​ ಚೌಧರಿ?

ABOUT THE AUTHOR

...view details