ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ವಾಲ್ಮೀಕಿ ಜಯಂತಿ ನಿಮಿತ್ತ ಇಂದು ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂತ ವಾಲ್ಮೀಕಿ ಹಿಂದೂ ಮಹಾಕಾವ್ಯ ರಾಮಾಯಣದ ಲೇಖಕರಾಗಿದ್ದಾರೆ. ವಿಶೇಷವಾಗಿ ದಲಿತರಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ಮಹರ್ಷಿ ವಾಲ್ಮೀಕಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ದೇಶದ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
Lok Sabha LoP and Congress MP Rahul Gandhi offered prayers at the Valmiki Temple in Delhi on the occasion of Maharishi Valmiki Jayanti today
— ANI (@ANI) October 17, 2024
(Source: AICC) pic.twitter.com/5YWyPyVwAI
ಈ ನಡುವೆ ರಾಷ್ಟ್ರೀಯ ಕಾಂಗ್ರೆಸ್ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರ ದೇವಸ್ಥಾನದ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಅವರು ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿರುವ ನೋಟಗಳು ಕಂಡುಬಂದಿವೆ.
200 ದಿನಗಳಿಗೂ ಹೆಚ್ಚು ಕಾಲ ಮಹಾತ್ಮ ಗಾಂಧಿ ವಾಸವಾಗಿದ್ದ ದೇವಾಲಯದ ಆವರಣದಲ್ಲಿರುವ ಕೋಣೆಗೂ ಅವರು ಇದೇವೇಳೆ ಭೇಟಿ ನೀಡಿದ್ದರು.
ಇದನ್ನು ಓದಿ:ಉತ್ತರ ಪ್ರದೇಶ: ತಂದೂರಿ ರೋಟಿ ಮೇಲೆ ಎಂಜಲು ಉಗಿದಿದ್ದ ಕೀಚಕ, ಮಾಲೀಕನ ಬಂಧನ
ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ನಯಾಬ್ ಸಿಂಗ್ ಸೈನಿ ಆಯ್ಕೆ; ನಾಳೆ ಸಿಎಂ ಆಗಿ ಪ್ರಮಾಣ