ಗೋರಖ್‌ಪುರ, ಉತ್ತರಪ್ರದೇಶ: ಇಂದು ದೇಶದ ಅತ್ಯಂತ ಪ್ರಕಾಶಮಾನವಾದ ರಾತ್ರಿ ಇರಲಿದೆ. ಶರದ್ ಪೂರ್ಣಿಮೆಯಂದು ಸೂಪರ್ ಮೂನ್ ತನ್ನ ಬೆಳಕಿನಿಂದ ಇಡೀ ದೇಶ ಮತ್ತು ಜಗತ್ತನ್ನು ಪ್ರಕಾಶಮಾನವಾಗಿ ಬೆಳಗಲಿದ್ದಾನೆ. ಇಂದು ಅಕ್ಟೋಬರ್ 17, 2024 ರಂದು ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ ಎಂದು ವೀರ್ ಬಹದ್ದೂರ್ ಸಿಂಗ್ ನಕ್ಷತ್ರ ಶಾಲೆಯ( ಪ್ಲಾನೆಟೋರಿಯಂನ) ಗೋರಖ್‌ಪುರದ ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಹೇಳಿದ್ದಾರೆ.
ಇಂದಿನ ಚಂದ್ರನನ್ನು ಸೂಪರ್ ಮೂನ್ ಎಂದು ಏಕೆ ಕರೆಯಲಾಗುತ್ತದೆ?: ಇಂದಿನ ದಿನದ ಪೌರ್ಣಿಮೆಗೆ ಅತಿದೊಡ್ಡ ಇತಿಹಾಸವಿದೆ ಅಂತಾರೆ ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್. ಭೂಮಿಗೆ ಹತ್ತಿರವಿರುವ ಹುಣ್ಣಿಮೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. 1979 ರಲ್ಲಿ ಪ್ರಸಿದ್ಧ ಖಗೋಳಶಾಸ್ತ್ರಜ್ಞ ಸರ್ ರಿಚರ್ಡ್ ನೊಲ್ಲೆ ಅವರು ಖಗೋಳದ ಪರಿಭಾಷೆಯಲ್ಲಿ ಸೂಪರ್‌ಮೂನ್ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ನೊಲ್ಲೆ ಅವರ ವ್ಯಾಖ್ಯಾನದ ಪ್ರಕಾರ, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ಸೂಪರ್ ಮೂನ್ ಸಂಭವಿಸಬಹುದಾಗಿದೆ.
ಹುಣ್ಣಿಮೆ ಮತ್ತು ಅಮಾವಾಸ್ಯೆಯು ಭೂಮಿಗೆ ಹತ್ತಿರವಿರುವ ಬಿಂದುವಿನ ಶೇ 90ರಷ್ಟು ಒಳಗೆ ಇರುವಾಗ ಸೂಪರ್‌ಮೂನ್‌ಗಳಾಗುತ್ತವೆ. ಅಂದರೆ, ಪೆರಿಜಿ. ಸೂಪರ್‌ಮೂನ್‌ನ ಸಂದರ್ಭದಲ್ಲಿ ಚಂದ್ರನು ಅದರ ಮೂಲ ಗಾತ್ರಕ್ಕಿಂತ ಸರಿಸುಮಾರು ಶೇ 14ರಷ್ಟು ದೊಡ್ಡದಾಗಿ ಮತ್ತು ಶೇ 30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಅಕ್ಟೋಬರ್ 17, 2024 ರ ರಾತ್ರಿ 11:55 ಕ್ಕೆ, ಚಂದ್ರನು ಭೂಮಿಯಿಂದ 3,51,519 ಕಿಲೋಮೀಟರ್ ದೂರದಲ್ಲಿರುತ್ತಾನೆ. ಮತ್ತು ಈ ದೂರವು 30 ಅಕ್ಟೋಬರ್ 2024 ರಂದು 4,06,161 ಕಿಲೋಮೀಟರ್ ಆಗುತ್ತದೆ.
ಇದನ್ನು ಓದಿ: ಚೀನಾ, ಪಾಕ್ ಸೇರಿ ವಿರೋಧಿಗಳ ಮೇಲೆ ಭಾರತದ 52 ಉಪಗ್ರಹಗಳ ಕಣ್ಗಾವಲು: ಏನಿದು ವ್ಯವಸ್ಥೆ?
ಸೂಪರ್ ಮೂನ್ ರೂಪುಗೊಳ್ಳುವುದು ಹೇಗೆ?: 2024 ರಲ್ಲಿ ನಾಲ್ಕು ಸಂಪೂರ್ಣ ಸೂಪರ್‌ಮೂನ್‌ಗಳಿವೆ ಎಂದಿರುವ ಖಗೋಳಶಾಸ್ತ್ರಜ್ಞ ಪಾಲ್, ಈ ನಾಲ್ಕರಲ್ಲಿ ಇದು ಮೂರನೇ ಸೂಪರ್‌ಮೂನ್ ಎಂದು ವಿವರಿಸಿದ್ದಾರೆ. ಹಂಟರ್ ಮೂನ್ ಈ ವರ್ಷದ ಅತ್ಯಂತ ಹತ್ತಿರದ ಸೂಪರ್‌ಮೂನ್ ಆಗಿದೆ. ಚಂದ್ರನು ಭೂಮಿಯ ಸುತ್ತ ದೀರ್ಘವೃತ್ತದ ಕಕ್ಷೆಯನ್ನು ಹೊಂದಿದ್ದಾನೆ. ಪರಿಣಾಮವಾಗಿ ಚಂದ್ರನು ಒಮ್ಮೆ ಭೂಮಿಗೆ ಹತ್ತಿರದಲ್ಲಿದ್ದರೆ ಮತ್ತೊಮ್ಮೆ ದೂರದಲ್ಲಿರುತ್ತಾನೆ. ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದಾಗ, ಈ ಸ್ಥಾನವನ್ನು ಪೆರಿಜಿ ಎಂದು ಕರೆಯಲಾಗುತ್ತದೆ. ಅದು ದೂರದಲ್ಲಿರುವಾಗ ಈ ಸ್ಥಾನವನ್ನು ಅಪೋಜಿ ಎಂದು ಕರೆಯಲಾಗುತ್ತದೆ. ಖಗೋಳಶಾಸ್ತ್ರದಲ್ಲಿ, ಸೂಪರ್ ಮೂನ್ ಎಂದರೆ ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದಾಗ ಮತ್ತು ಅದೇ ಸಮಯದಲ್ಲಿ ಹುಣ್ಣಿಮೆ ಇರುತ್ತದೆ.
ಏನಿದು Perigee-Syzygy ಮೂನ್ ?: ವಾಸ್ತವವಾಗಿ, ಖಗೋಳಶಾಸ್ತ್ರದಲ್ಲಿ ಸೂಪರ್ಮೂನ್ ಅನ್ನು Perigee-Syzygy ಮೂನ್ ಎಂದು ಕರೆಯಲಾಗುತ್ತದೆ. ಸಿಜಿಗಿ ಸ್ಥಾನದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರರು ಜೋಡಿಸಲ್ಪಟ್ಟಿರುತ್ತಾರೆ. ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯು ಸಿಜಿಗಿ ಸ್ಥಾನದಲ್ಲಿ ಸಂಭವಿಸುತ್ತದೆ. ಸೂಪರ್ ಮೂನ್ ತುಂಬಾ ಪ್ರಭಾವಶಾಲಿಯಾಗಿದೆ. ಸೂಪರ್ ಮೂನ್ ಸಂದರ್ಭದಲ್ಲಿ ಚಂದ್ರನು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ. ಚಂದ್ರನ ವ್ಯಾಸವು ಸರಿಸುಮಾರು 3,475 ಕಿಲೋಮೀಟರ್ ಆಗಿರುತ್ತದೆ.
ಪೆರಿಜಿಯಲ್ಲಿ ಚಂದ್ರನು ಭೂಮಿಯಿಂದ 351,000 ಕಿಮೀ (220,000 ಮೈಲುಗಳು) ಹತ್ತಿರ ಬರಬಹುದು. ಅಪೋಜಿಯ ಸಮಯದಲ್ಲಿ, ಚಂದ್ರನು ಭೂಮಿಯಿಂದ ಸುಮಾರು 4,10,000 ಕಿಮೀ (254,000 ಮೈಲುಗಳು) ದೂರದಲ್ಲಿರಬಹುದು. ಚಂದ್ರನು ನಿರಂತರವಾಗಿ ಭೂಮಿಯ ಸುತ್ತ ಸುತ್ತುವುದರಿಂದ, ಅದು ಪ್ರತಿ ತಿಂಗಳು ಎರಡು ಬಾರಿ ಈ ಸ್ಥಾನಗಳ ಮೂಲಕ ಹಾದು ಹೋಗುತ್ತದೆ.
ಇದನ್ನು ಓದಿ: 2035ಕ್ಕೆ ಮಂಗಳನ ಅಂಗಳಕ್ಕೆ ಮಾನವರನ್ನ ಕಳುಹಿಸಲು ನಾಸಾ ಸರ್ವ ಸನ್ನದ್ಧ
2024 ರ ಸೂಪರ್ ಮೂನ್
ಆಗಸ್ಟ್ 19: 224,917 ಮೈಲಿಗಳು (361,969 ಕಿಲೋಮೀಟರ್)
ಸೆಪ್ಟೆಂಬರ್ 18: 222,131 ಮೈಲಿಗಳು (357,485 ಕಿಲೋಮೀಟರ್)
ಅಕ್ಟೋಬರ್ 17: 222,055 ಮೈಲಿಗಳು (351,519 ಕಿಲೋಮೀಟರ್)
ನವೆಂಬರ್ 15: 224,853 ಮೈಲಿಗಳು (361,866 ಕಿಲೋಮೀಟರ್)
ಗೋರಖ್‌ಪುರದಲ್ಲಿ ವಿಶೇಷ ವ್ಯವಸ್ಥೆ: ವೀರ ಬಹದ್ದೂರ್ ಸಿಂಗ್ ನಕ್ಷತ್ರ ಶಾಲೆಯಲ್ಲಿ ಸಾರ್ವಜನಿಕರಿಗೆ ಸೂರ್ಯ ದರ್ಶನ ಮತ್ತು ರಾತ್ರಿ ಆಕಾಶ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಉಚಿತವಾಗಿರುತ್ತದೆ. ತಾರಾಲಯದಲ್ಲಿ ಟೆಲಿಸ್ಕೋಪ್‌ಗಳನ್ನು ಅಳವಡಿಸಿ ಜನರಿಗೆ ಸೂಪರ್‌ಮೂನ್‌ನ ದರ್ಶನ ಮಾಡಿಸಲಾಗುವುದು.
ಇದನ್ನು ಓದಿ:ಗುರುವಿನ ಚಂದ್ರನಲ್ಲಿ ಜೀವಿಗಳಿರುವ ಸಾಧ್ಯತೆ; ಪತ್ತೆಗೆ ಸಜ್ಜಾದ ನಾಸಾ - ಯಾವುದಾ ಉಪಗ್ರಹ?