ಕರ್ನಾಟಕ

karnataka

ETV Bharat / bharat

ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಲೈಂಗಿಕ ಕಿರುಕುಳಕ್ಕೆ ಸಮ : ಹೈಕೋರ್ಟ್​ - COMMENTING ON WOMANS BODY STRUCTURE

ಲೈಂಗಿಕ ಕಿರುಕುಳ ಪ್ರಕರಣ ಕುರಿತಂತೆ ಕೇರಳ ಹೈಕೋರ್ಟ್​ ನೀಡಿದ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಲೈಂಗಿಕ ಕಿರುಕುಳಕ್ಕೆ ಸಮ
ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಲೈಂಗಿಕ ಕಿರುಕುಳಕ್ಕೆ ಸಮ (ETV Bharat)

By ETV Bharat Karnataka Team

Published : 18 hours ago

ತಿರುವನಂತಪುರಂ (ಕೇರಳ) :ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್​ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಹೆಣ್ಣಿನ ದೇಹವನ್ನು ಅನುಚಿತವಾಗಿ ಬಣ್ಣಿಸುವುದೂ ಲೈಂಗಿಕ ಕಿರುಕುಳ ಎಂದು ಪರಿಗಣಿಸಬೇಕು ಎಂದಿದೆ.

ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಮಹಿಳೆ ಮಾಡಿರುವ ಆರೋಪದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೆಣ್ಣುಮಕ್ಕಳ ದೇಹದ ಬಗ್ಗೆ ಮಾತನಾಡುವುದು, ಉದ್ದೇಶಪೂರ್ವಕವಾಗಿ ಅವರ ಘನತೆಯ ಉಲ್ಲಂಘನೆಯಾಗಿದೆ. ಇದನ್ನು ಲೈಂಗಿಕ ಕಿರುಕುಳದ ಅಪರಾಧ ಎಂದೇ ಪರಿಗಣಿಸಬೇಕು. ಸ್ತ್ರೀಯರ ಬಗ್ಗೆ ಮಾತನಾಡುವಾಗ ಪುರುಷರು ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್​ ಹೇಳಿದೆ.

ಮಹಿಳೆಯ ಆರೋಪವೇನು?ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯ ವಿರುದ್ಧ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಗುರುತರ ಆರೋಪ ಮಾಡಿದ್ದಾರೆ. ಆತ ಕರ್ತವ್ಯದಲ್ಲಿರುವಾಗ ತನಗೆ ಕಿರುಕುಳ ನೀಡಿದ್ದಾನೆ. 2013ರಿಂದ ತನ್ನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾನೆ. ಆಕ್ಷೇಪಾರ್ಹ ಸಂದೇಶ ಹಾಗೂ ಕರೆಗಳನ್ನು ಮಾಡುತ್ತಿದ್ದ. ನನ್ನ ದೇಹಾಕಾರದ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದಾನೆ ಎಂದು ದೂರಿದ್ದಾರೆ. ಪೊಲೀಸರು ಆತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು.

'ಸುಂದರಿ' ಎನ್ನುವುದು ತಪ್ಪೇ?ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ, ತಾನು ಮಹಿಳೆಯನ್ನು ಸುಂದರವಾಗಿ ಇದ್ದೀಯಾ ಎಂದು ಹೊಗಳಿದ್ದೆ. ಆಕೆಯ ಮೈಮಾಟವನ್ನು ಬಣ್ಣಿಸಿದ್ದು ತಪ್ಪೇ?. ಇದನ್ನು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಬಾರದು. ತನ್ನ ವಿರುದ್ಧದ ಪ್ರಕರಣವನ್ನು ರದ್ದು ಮಾಡಬೇಕು ಎಂದು ಆತ ನ್ಯಾಯಾಲಯಕ್ಕೆ ಕೋರಿದ್ದ.

ಆದರೆ, ಆರೋಪಿಯ ಮನವಿಯನ್ನು ಕೋರ್ಟ್​ ಅಮಾನ್ಯಗೊಳಿಸಿತು. ಹೆಣ್ಣಿನ ದೇಹ ಸೌಂದರ್ಯವನ್ನು ಬಣ್ಣಿಸುವುದು ಅನುಚಿತ. ಇದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಬೌದ್ಧಿಕ ಅಂಗವಿಕಲ ಮಹಿಳೆಗೆ ತಾಯಿಯಾಗುವ ಹಕ್ಕಿಲ್ಲವೇ? ಬಾಂಬೆ ಹೈಕೋರ್ಟ್ ಪ್ರಶ್ನೆ

ABOUT THE AUTHOR

...view details