ಕರ್ನಾಟಕ

karnataka

ETV Bharat / bharat

ರೋಗಿಯನ್ನು ಸಾಗುತ್ತಿದ್ದ ಆಂಬ್ಯುಲೆನ್ಸ್​ - ಲಾರಿ ಮಧ್ಯೆ ಭೀಕರ ಅಪಘಾತ: 6 ಜನ ಸಾವು - AMBULANCE LORRY ACCIDENT - AMBULANCE LORRY ACCIDENT

Road Accident: ಪಶ್ಚಿಮ ಬಂಗಾಳದ ಕೇಶ್‌ಪುರದ ಪಂಚಮಿ ಪ್ರದೇಶದಲ್ಲಿ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದ್ದು, 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

COLLISION BETWEEN VEHICLES  AMBULANCE AND LORRY ACCIDENT  DIED AND INJURED IN ACCIDENT  WEST BENGAL ROAD ACCIDENT
ಭೀಕರ ರಸ್ತೆ ಅಪಘಾತ (ETV Bharat)

By ETV Bharat Karnataka Team

Published : Jul 13, 2024, 4:07 PM IST

ಕೇಶ​ಪುರ (ಪಶ್ಚಿಮ ಬಂಗಾಳ):ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ - ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದ ಕೇಶ್‌ಪುರದ ಪಂಚಮಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿದರು. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆದಿನಿಪುರ ಮೆಡಿಕಲ್ ಕಾಲೇಜಿಗೆ ಘಟಾಲ್‌ನ ರೋಗಿಯೊಂದಿಗೆ ಆಂಬ್ಯುಲೆನ್ಸ್ ಬರುತ್ತಿತ್ತು. ಸಿಮೆಂಟ್ ತುಂಬಿದ ಲಾರಿಯೊಂದು ಮೇದಿನಿಪುರದಿಂದ ಕೇಶಪುರ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಆ ವೇಳೆ ಕೇಶಪುರ ವಿಧಾನಸೌಧದ ಪಂಚಮಿ ಬಳಿ ಲಾರಿ ಮತ್ತು ಆಂಬ್ಯುಲೆನ್ಸ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ. ಕೇಶಪುರದ ಆಚೆ ಪಂಚಮಿ ಬಳಿಯ ಬಾರಾ ಪೋಲ್ ಬಳಿ ಈ ಅಪಘಾತ ಸಂಭವಿಸಿದೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ಮಾತನಾಡಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರು ಚಂದ್ರಕೋಣದ ಕ್ಷೀರಪೈ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಹೊಟ್ಟೆ ನೋವಿನಿಂದ ಘಾಟಲ್ ಆಸ್ಪತ್ರೆಗೆ ರೋಗಿಯೊಬ್ಬರು ದಾಖಲಾಗಿದ್ದರು. ಅಲ್ಲಿಂದ ಮೇದಿನಿಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ರೋಗಿಯೊಂದಿಗೆ ಕುಟುಂಬಸ್ಥರು ಮೇದಿನಿಪುರಕ್ಕೆ ಬರುತ್ತಿದ್ದರು. ಆಗ ಸಿಮೆಂಟ್ ಲಾರಿಯೊಂದು ಕೇಶ್‌ಪುರ ಕಡೆಗೆ ಹೋಗುತ್ತಿತ್ತು. ಈ ವೇಳೆ ಕೇಶ್‌ಪುರ ಕಡೆಯಿಂದ ಬರುತ್ತಿದ್ದ ಆಂಬ್ಯುಲೆನ್ಸ್‌ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಓದಿ:ತುಮಕೂರು: ಸಾಲ ತೀರಿಸಲಾಗದೇ ಸಂಬಂಧಿಕರ ಮಗಳನ್ನೇ ಜೀತಕ್ಕಿಟ್ಟ ದಂಪತಿ - Bondage Labour

ABOUT THE AUTHOR

...view details