ನವದೆಹಲಿ: ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯು ಸುಧಾರಿತ ತಂತ್ರಜ್ಞಾನದ ಪ್ರವೇಶವನ್ನು ಹೊಂದಿರುವವರಿಗೆ ಅನುಕೂಲವಾಗುವ ಮೂಲಕ ಅಸಮಾನತೆಯನ್ನು ಹೆಚ್ಚಿಸಬಹುದು. ಆದರೆ, ಇದು ಹೊಸಬರಿಗೆ ಮತ್ತು ಸೇವೆಗಳಿಗೆ ಅವಕಾಶ ನೀಡಬಹುದು ಹಾಗೂ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳಿಗೆ ಅಡ್ಡಿಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಭಾರತ ಮತ್ತು ಸಿಂಗಾಪುರದ ಸುಪ್ರೀಂ ಕೋರ್ಟ್‌ಗಳ ನಡುವಿನ ತಂತ್ರಜ್ಞಾನ ಮತ್ತು ಸಂವಾದದ ಕುರಿತು ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಸಿಜೆಐ, ನಾವು ಕಾನೂನು ಕ್ಷೇತ್ರಕ್ಕೆ ಎಐಯ ಅಳವಡಿಕೆ ಬಗ್ಗೆ ಆಯೋಜಿಸುವ ಮಾಡುವಾಗ ವ್ಯವಸ್ಥಿತ ಸವಾಲುಗಳನ್ನು ಎದುರಿಸುವಲ್ಲಿ ಜಾಗರೂಕರಾಗಿರಲು ಮತ್ತು ಎಐ ತಂತ್ರಜ್ಞಾನಗಳು ದುರ್ಬಲಗೊಳಿಸುವ ಬದಲು ಎಲ್ಲರಿಗೂ ನ್ಯಾಯದ ಅನ್ವೇಷಣೆಯನ್ನು ವರ್ಧಿಸಲು ಸೇವೆ ಸಲ್ಲಿಸುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನ್ಯಾಯಾಲಯದ ಪ್ರಕ್ರಿಯೆಗಳು ಸೇರಿದಂತೆ ಆಧುನಿಕ ಪ್ರಕ್ರಿಯೆಗಳಲ್ಲಿ ಎಐ ಸಂಕೀರ್ಣವಾದ ನೈತಿಕ, ಕಾನೂನು ಮತ್ತು ಪ್ರಾಯೋಗಿಕ ಪರಿಗಣನೆಗಳನ್ನು ಹುಟ್ಟುಹಾಕುತ್ತದೆ ಎಂದು ಒತ್ತಿ ಹೇಳಿದರು.
ನ್ಯಾಯಾಲಯದ ತೀರ್ಪಿನಲ್ಲಿ ಎಐ ಬಳಕೆಯು ಸೂಕ್ಷ್ಮವಾದ ಚರ್ಚೆಯನ್ನು ಸಮರ್ಥಿಸುವ ಅವಕಾಶಗಳು ಮತ್ತು ಸವಾಲುಗಳು ಬರುತ್ತವೆ. ಜಾಮೀನು ಅರ್ಜಿಯ ದೃಷ್ಟಿಕೋನವನ್ನು ವಿಸ್ತರಿಸಲು ಚಾಟ್‌ಜಿಪಿಟಿಯಿಂದ ಇನ್‌ಪುಟ್ ಕೇಳುವ ಪರಿಸ್ಥಿತಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎದುರಿಸಿದೆ ಎಂದು ಸಿಜೆಐ ತಿಳಿಸಿದರು.
ನ್ಯಾಯಾಲಯದ ತೀರ್ಪಿನಲ್ಲಿ ಎಐಅನ್ನು ಬಳಸುವ ಪ್ರಶ್ನೆಯನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಎಐ ಅಭೂತಪೂರ್ವ ಅವಕಾಶಗಳನ್ನು ಒದಗಿಸುತ್ತದೆ. ಇದು ವಿಶೇಷವಾಗಿ ನೈತಿಕತೆ, ಹೊಣೆಗಾರಿಕೆ ಮತ್ತು ಪಕ್ಷಪಾತಕ್ಕೆ ಸಂಬಂಧಿಸಿದಂತೆ ಸಂಕೀರ್ಣ ಸವಾಲುಗಳನ್ನು ಹುಟ್ಟುಹಾಕುತ್ತದೆ. ಈ ಸವಾಲುಗಳನ್ನು ಎದುರಿಸಲು ಭೌಗೋಳಿಕ ಮತ್ತು ಸಾಂಸ್ಥಿಕ ಗಡಿಗಳನ್ನು ಮೀರಿ ವಿಶ್ವಾದ್ಯಂತ ಮಧ್ಯಸ್ಥಗಾರರಿಂದ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದರು.
ಎಐನ ಸಾಮರ್ಥ್ಯಗಳ ಸುತ್ತಲಿನ ಉತ್ಸಾಹದ ನಡುವೆ ಸಂಭಾವ್ಯ ದೋಷಗಳು ಮತ್ತು ತಪ್ಪು ವ್ಯಾಖ್ಯಾನಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ದೃಢವಾದ ಆಡಿಟಿಂಗ್ ಕಾರ್ಯವಿಧಾನಗಳಿಲ್ಲಿದೆ. ಭ್ರಮೆಗಳ ನಿದರ್ಶನಗಳ ಮೂಲಕ ಎಐ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಮತ್ತು ಈ ರೀತಿ ಸಂಭವಿಸಬಹುದು. ಇದು ಅಸಮರ್ಪಕ ಸಲಹೆಗೆ ಮತ್ತು ಕೊನೆಯ ಸಂದರ್ಭಗಳಲ್ಲಿ ನ್ಯಾಯದ ವಿಫಲತೆಗೆ ಕಾರಣವಾಗುತ್ತದೆ ಎಂದು ಸಿಜೆಐ ಚಂದ್ರಚೂಡ್ ಎಚ್ಚರಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ಖುದ್ದಾಗಿ ಮತ್ತು ವರ್ಚುವಲ್ ಸೇರಿ ಹೈಬ್ರೀಡ್ ಮೋಡ್ ವಿಚಾರಣೆಗಳ ಅಳವಡಿಕೆಯು ದೇಶದ ನ್ಯಾಯಾಂಗದಲ್ಲಿ ಮಹತ್ವದ ಬದಲಾವಣೆಯಾಗಿದೆ. ನ್ಯಾಯ ಮತ್ತು ಕಾನೂನು ವೃತ್ತಿಯ ಪ್ರವೇಶಕ್ಕೆ ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ವರ್ಚುವಲ್ ಭಾಗವಹಿಸುವಿಕೆ ಅನುಮತಿಸುವ ವಿಚಾರಣೆಗಳನ್ನು ಸ್ವೀಕರಿಸುವ ಮೂಲಕ, ಸುಪ್ರೀಂ ಕೋರ್ಟ್ ಭೌಗೋಳಿಕ ಅಡೆತಡೆಗಳನ್ನು ತೆಗೆದುಹಾಕಿದೆ ಎಂದು ವಿವರಿಸಿದರು.
ಎಐ ವ್ಯವಸ್ಥೆಗಳಲ್ಲಿ ಪಕ್ಷಪಾತದ ಪ್ರಭಾವವು ಸಂಕೀರ್ಣವಾದ ಸವಾಲನ್ನು ಒದಗಿಸುತ್ತದೆ. ವಿಶೇಷವಾಗಿ ಪರೋಕ್ಷ ತಾರತಮ್ಯಕ್ಕೆ ಬಂದಾಗ ಮತ್ತು ಈ ರೀತಿಯ ತಾರತಮ್ಯವು ತಟಸ್ಥ ನೀತಿಗಳು ಅಥವಾ ವ್ಯವಸ್ಥೆಯು ಕೆಲವು ಗುಂಪುಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಿದಾಗ ಉಂಟಾಗಿದೆ. ಇದರಿಂದಾಗಿ ಒಬ್ಬರ ಹಕ್ಕುಗಳು ಮತ್ತು ರಕ್ಷಣೆಗಳನ್ನು ದುರ್ಬಲಗೊಳಿಸುತ್ತದೆ. ಎಐ ಕ್ಷೇತ್ರದಲ್ಲಿ ಪರೋಕ್ಷ ತಾರತಮ್ಯವು ಎರಡು ನಿರ್ಣಾಯಕ ಹಂತಗಳಲ್ಲಿ ಸಂಭವಿಸಬಹುದು ಎಂದ ಸಿಜೆಐ, ಮೊದಲನೆಯದಾಗಿ ತರಬೇತಿ ಹಂತದಲ್ಲಿ ಅಪೂರ್ಣ ಅಥವಾ ತಪ್ಪಾದ ಮಾಹಿತಿಯು ಪಕ್ಷಪಾತದ ಫಲಿತಾಂಶಗಳಿಗೆ ಕಾರಣವಾಗಬಹುದು. ಎರಡನೇಯದಾಗಿ ಮಾಹಿತಿ ಸಂಸ್ಕರಣೆಯ ಸಮಯದಲ್ಲಿ ತಾರತಮ್ಯ ಉಂಟಾಗಬಹುದು ಎಂದರು.
ಅಲ್ಲದೇ, ಬಡವರನ್ನು ಕೆಳಮಟ್ಟದ ಎಐ ಚಾಲಿತ ಸಹಾಯಕ್ಕೆ ತಳ್ಳಬಹುದು. ಶ್ರೀಮಂತ ವ್ಯಕ್ತಿಗಳು ಅಥವಾ ಉನ್ನತ ಮಟ್ಟದ ಕಾನೂನು ಸಂಸ್ಥೆಗಳು ಮಾತ್ರ ಎಐಯ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಅಂತಹ ಸನ್ನಿವೇಶವು ನ್ಯಾಯದ ಅಂತರವನ್ನು ಹೆಚ್ಚಿಸುವ ಅಪಾಯವನ್ನು ಉಂಟುಮಾಡುತ್ತದೆ ಮತ್ತು ಕಾನೂನು ವ್ಯವಸ್ಥೆಯೊಳಗೆ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಶಾಶ್ವತಗೊಳಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಸಿಂಗಾಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಮತ್ತು ಹಲವಾರು ನ್ಯಾಯಮೂರ್ತಿಗಳು ಮತ್ತು ತಜ್ಞರು ಉಪಸ್ಥಿತರಿದ್ದರು.
ಇದನ್ನೂ ಓದಿ:ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 105 ವರ್ಷ: ಹುತಾತ್ಮರಿಗೆ ರಾಷ್ಟ್ರಪತಿ, ಪ್ರಧಾನಿ ನಮನ - jallianwala bagh