ತಿರುವನಂತಪುರ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಬಂಪರ್ ಕೇರಳ ಲಾಟರಿಯ ಫಲಿತಾಂಶ ಪ್ರಕಟವಾಗಿದೆ. ಮೊದಲ ಬಹುಮಾನ 20 ಕೋಟಿ ರೂಪಾಯಿ ಆಗಿದ್ದು, ತಿರುವನಂತಪುರಂ ನಿವಾರಿ ದುರೈರಾಜ್ ಗೆದ್ದಿದ್ದಾರೆ. ಇವರ ಲಾಟರಿ ಟಿಕೆಟ್ ನಂಬರ್ X 224091 ಆಗಿದೆ. ಈ ಟಿಕೆಟ್ ಅನ್ನು ತಿರುವನಂತಪುರನ ಈಸ್ಟ್ ಫೋರ್ಟ್ ಲಕ್ಷ್ಮಿ ಲಕ್ಕಿ ಸೆಂಟರ್ನಲ್ಲಿ ಮಾರಾಟ ಮಾಡಲಾಗಿತ್ತು. ದುರೈರಾಜ್ ಪಲ್ಲಕ್ಕಡ್ನ ಸ್ಥಳೀಯ ಶಹಜಹಾನ್ ಎಂಬ ಎಜೆಂಟರಿಂದ ಟಿಕೆಟ್ ಪಡೆದಿದ್ದರು. ಆದರೆ, ಇಷ್ಟು ದೊಡ್ಡ ಮೊತ್ತದ ಬಹುಮಾನ ಗೆದ್ದ ಅದೃಷ್ಟಶಾಲಿ ವಿಜೇತ ಪತ್ತೆಯಾಗಿಲ್ಲ. ಎರಡನೇ ಬಹುಮಾನ ಒಂದು ಕೋಟಿ ರೂಪಾಯಿ ಆಗಿದ್ದು, 20 ಅದೃಷ್ಟಶಾಲಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಬಂಪರ್ ಡ್ರಾ: ಭಾರಿ ಮೊತ್ತದ ಬಂಪರ್ ಲಾಟರಿ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಈ ಮೂಲಕ ಕಳೆದ ವರ್ಷದ ದಾಖಲೆಯೂ ಮುರಿದಿತ್ತು. ರಾಜ್ಯದ ಇತರೆ ಲಾಟರಿಗಳಿಗೆ ಹೋಲಿಸಿದರೆ, ರಾಜ್ಯ ಸರ್ಕಾರದಿಂದಲೇ ಸಂಪೂರ್ಣವಾಗಿ ಈ ಲಾಟರಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ. ಟಿಕೆಟ್ ಪ್ರಿಂಟ್ ಮಾಡುವುದರಿಂದ ಡ್ರಾವರೆಗೆ ಎಲ್ಲಾ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕೇರಳ ಲಾಟರಿ ನಿರ್ದೇಶನಾಲಯ ನಿರ್ದೇಶಕ ಐಆರ್ಎಸ್ ಅಧಿಕಾರಿ ಅಬ್ರಹಾಂ ರೆನ್ ತಿಳಿಸಿದರು.
ಇದೀಗ ಕೇರಳದ ಲಾಟರಿಯನ್ನು ಹೆಚ್ಚಾಗಿ ಕೇರಳೇತ್ತರ ಜನರೂ ಕೊಳ್ಳುತ್ತಿದ್ದಾರೆ. ಶಬರಿಮಲೆಯ ಯಾತ್ರಾ ಸಮಯವೂ ಕೂಡ ಟಿಕೆಟ್ ಮಾರಾಟಕ್ಕೆ ಸಹಾಯ ಮಾಡಿದೆ. ಈ ವರ್ಷ 45 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ. ಅದರಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದರೆ, ಎರಡನೇ ಸ್ಥಾನದಲ್ಲಿ ಎರ್ನಾಕುಲಂ ಮತ್ತು ಮೂರನೇ ಸ್ಥಾನದಲ್ಲಿ ತ್ರಿಶೂರ್ ಇದೆ ಎಂದು ಮಾಹಿತಿ ನೀಡಿದರು.