ಪ್ರಯಾಗರಾಜ್ (ಉತ್ತರ ಪ್ರದೇಶ) :ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಪುಣ್ಯಸ್ನಾನಕ್ಕಾಗಿ ದೇಶಾದ್ಯಂತ ಅನೇಕ ಸಾಧುಗಳು ಮತ್ತು ಅಘೋರರು ಈಗಾಗಲೇ ಪ್ರಯಾಗ್ರಾಜ್ ತಲುಪಿದ್ದಾರೆ. ಇವರಲ್ಲಿ 32 ವರ್ಷಗಳಿಂದ ಸ್ನಾನ ಮಾಡದ ಬಾಬಾ ಅವರ ತಲೆಯ ಮೇಲೆ ಬಾರ್ಲಿ ಬೆಳೆಯನ್ನ ಬೆಳೆಸುತ್ತಿರುವ ಧನವಾಲೆ ಬಾಬಾ ವಿಶೇಷ ಆಕರ್ಷಣೆಯಾಗಿದ್ದಾರೆ.
ಬಾಬಾ ತಲೆ ಮೇಲೆ ಬಾರ್ಲಿ ಬೆಳೆ:ಪ್ರಯಾಗ್ರಾಜ್ಗೆ ಬಂದಿರುವ ಧನವಾಲೆ ಬಾಬಾ ತಮ್ಮ ವಿಶೇಷ ಕಾರ್ಯದಿಂದ ಕುಂಭಮೇಳದ ಸ್ಥಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ತಲೆಯ ಮೇಲೆ ಬಾರ್ಲಿ ಬೆಳೆಯನ್ನು ಕೊಯ್ಲು ಮಾಡುತ್ತಿದ್ದಾರೆ. ಇದನ್ನು ಅವರು ಖ್ಯಾತಿಗೋ ಅಥವಾ ಹಣಕ್ಕಾಗಿಯೋ ಮಾಡುತ್ತಿಲ್ಲ. ಇದರ ಹಿಂದೆ ಸದುದ್ದೇಶವಿದೆ.
ಧನವಾಲೆ ಬಾಬಾ ಅವರ ನಿಜವಾದ ಹೆಸರು ಅಮರ್ ಜೀತ್. ಅವರು ಕಳೆದ ಐದು ವರ್ಷಗಳಿಂದ ತಲೆಯ ಮೇಲೆ ಬಾರ್ಲಿಯನ್ನು ಬೆಳೆಯುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದು ಸಾಮಾನ್ಯ. ಇದಿಲ್ಲದೆ, ಯಾವುದೇ ಬೆಳೆ ಕೊಯ್ಲು ಮಾಡಲು ಸಾಧ್ಯವಿಲ್ಲ. ಇಂತಹ ಆಹಾರ ಪದಾರ್ಥಗಳಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಬೆಳೆಗಳನ್ನು ಸೇವಿಸುವ ಬಗ್ಗೆ ಜಾಗೃತಿ ಮೂಡಿಸಲು ಬಾಬಾ ಈ ರೀತಿ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ.
"ಇದು 22 ದಿನಗಳ ಸಸ್ಯ. ನಮ್ಮ ಜಗತ್ತು ಹಸಿರಾಗಲಿ ಮತ್ತು ನಮ್ಮ ದೇಶದ ತ್ರಿವರ್ಣ ಧ್ವಜದ ವೈಭವವು ಇನ್ನೂ ಎತ್ತರಕ್ಕೆ ಏರಲಿ ಎಂದು ಬಯಸಿ ನಾನು ಇದನ್ನು ಮಾಡುತ್ತಿದ್ದೇನೆ. ಈ ರೀತಿ ನಾನು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಹಸಿರಿಗಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ. ಹಸುವಿನ ಸಗಣಿ ಮತ್ತು ಎಲೆಯಿಂದ ನಿರ್ಮಿತವಾದ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಎಂದು ಧನವಾಲೆ ಬಾಬಾ ಸಲಹೆ ನೀಡುತ್ತಾರೆ.