ರಾಯ್ಪುರ:ಛತ್ತೀಸ್‌ಗಢದ ಬಿಜಾಪುರ್ ಎಂಬಲ್ಲಿನ ಪತ್ರಕರ್ತ ಸುರೇಶ್ ಚಂದ್ರಾಕರ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಹೈದರಾಬಾದ್ನಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿದ್ದು, ಜನವರಿ 3ರಂದು ಕೊಲೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಈ ಕುರಿತು ತನಿಖೆ ಕೈಗೆತ್ತಿಕೊಂಡ ಎಸ್ಐಟಿ ಭಾನುವಾರ ತಡರಾತ್ರಿವರೆಗೆ ಹೈದರಾಬಾದ್ನಲ್ಲಿ ಶೋಧ ಕೈಗೊಂಡಿತ್ತು.
ಈಗಾಗಲೇ ಮೃತನ ಸಹೋದರರಾದ ರಿತೇಶ್ ಚಂದ್ರಾಕರ್, ದಿನೇಶ್ ಚಂದ್ರಾಕರ್ ಮತ್ತು ಸೂಪರ್‌ವೈಸರ್ ಮಹೇಂದ್ರ ರಾಮ್ಟೆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
33 ವರ್ಷದ ಮುಖೇಶ್ ಚಂದ್ರಾಕರ್ ಸ್ವತಂತ್ರ ಪತ್ರಕರ್ತರಾಗಿದ್ದು, ಜನವರಿ 1ರಿಂದ ಕಾಣೆಯಾಗಿದ್ದರು. ಜನವರಿ 3ರಂದು ಬಿಜಾಪುರ್ ನಗರದಲ್ಲಿನ ಛತ್ತಂಪರ ಬಸ್ತಿಯ ಅವರ ಮಾಲೀಕತ್ವದ ಮನೆಯ ಸೆಪ್ಟಿಕ್ ಟ್ಯಾಂಕ್ನಲ್ಲಿ ಮೃತದೇಹ ಪತ್ತೆಯಾಗಿತ್ತು.
ರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರದ ಕುರಿತು ಚಂದ್ರಾಕರ್ ವರದಿ: ಬಿಜಾಪುರ್ನಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಚಂದ್ರಾಕರ್ ವರದಿ ಮಾಡಿದ್ದರು. ಈ ವರದಿಯನ್ನು ಡಿಸೆಂಬರ್ 25ರಂದು ರಾಷ್ಟ್ರೀಯ ಮಾಧ್ಯಮ ಕೂಡಾ ಪ್ರಸಾರ ಮಾಡಿತ್ತು. ಇದೇ ವರದಿ ಮುಖೇಶ್ ಚಂದ್ರಾಕರ್ ಕೊಲೆಗೆ ಪ್ರಮುಖ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಈ ಕಾಮಗಾರಿ ಕಂಟ್ರಾಕ್ಟರ್ ಸುರೇಶ್ ಚಂದ್ರಾಕರ್ಗೆ ಸಂಬಂಧಿಸಿತ್ತು.
ರಾಜಕೀಯ ಕೆಸರೆರಚಾಟ: ಛತ್ತೀಸ್‌ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಸುರೇಶ್ ಚಂದ್ರಾಕರ್ ಕಾಂಗ್ರೆಸ್ ನಾಯಕ ಎಂದಿದ್ದು, ಆರೋಪಿಗಳು ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ಸೇರಿದ್ದರು ಎಂದು ವಿರೋಧ ಪಕ್ಷ ಹೇಳಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಕೊರೆಯುವ ಚಳಿ: ಉಸಿರುಗಟ್ಟಿ ದಂಪತಿ, ಮೂವರು ಮಕ್ಕಳು ದುರ್ಮರಣ