ಚೆನ್ನೈ: ವಾಂಟೆಡ್ ಕ್ರಿಮಿನಲ್ 'ಬಾಂಬ್' ಸರವಣನ್ನನ್ನು ಗುರುವಾರ ಚೆನ್ನೈನಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಸರವಣನ್ನನ್ನು ಬಂಧಿಸಲು ಮುಂದಾದಾಗ ಆತ ಸಬ್ ಇನ್ ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದ. ತದನಂತರ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಸರವಣನ್ನ್ನು ಬಂಧಿಸಿ ಚಿಕಿತ್ಸೆಗಾಗಿ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
33 ಪ್ರಕರಣಗಳು ದಾಖಲು:ಎ-ಕೆಟಗರಿ ರೌಡಿ ಎಂದು ವರ್ಗೀಕರಿಸಲ್ಪಟ್ಟ ಸರವಣನ್ ವಿರುದ್ಧ ಆರು ಕೊಲೆ ಪ್ರಕರಣ ಸೇರಿದಂತೆ 33 ಪ್ರಕರಣಗಳು ದಾಖಲಾಗಿವೆ. ಆದರೆ ಸರವಣನ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಹಲ್ಲೆಕೋರನ ಪತ್ನಿ, ವಕೀಲೆಯೂ ಆಗಿರುವ ಮಹಾಲಕ್ಷ್ಮಿ ಆರೋಪಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಆತನ ವಿರುದ್ಧ ಯಾವುದೇ ನೈಜ ಪ್ರಕರಣ ದಾಖಲಾಗಿಲ್ಲ ಮತ್ತು ಸುಳ್ಳು ಆರೋಪಗಳ ಮೇಲೆ ಬಂಧನ ವಾರಂಟ್ಗಳನ್ನು ಮಾತ್ರ ಹೊರಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಸರವಣನ್ನನ್ನು ಬಂಧಿಸಲಾಗಿದ್ದು, ಬಂಧಿಸಿ ಒಂದು ದಿನ ಮುಗಿದು ಹೋದರೂ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೇ ಪೊಲೀಸರು ಅವರನ್ನು ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದಾರೆ. ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲಿ ತನ್ನ ಪತಿಯ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅವರು ದೂರಿದ್ದಾರೆ.