ಡೆಹರಾಡೂನ್( ಉತ್ತರಾಖಂಡ): ಕೋವಿಡ್ ಬಳಿಕ ಚಾರ್ಧಾಮ್ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ವರ್ಷದ ಕೂಡ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಧಾಮ್ ಯಾತ್ರೆ ನಡೆಸಿದ್ದಾರೆ. ಕಳೆದ 13 ದಿನಗಳ ಹಿಂದೆ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಈ ವೇಳೆ 42 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೇ 10ರಿಂದ ಗಂಗೋತ್ರಿ - ಯಮುನೋತ್ರಿ ಮತ್ತು ಕೇದಾರನಾಥ ಧಾಮ ಭಕ್ತರಿಗೆ ಬಾಗಿಲು ತೆರೆದರೆ, ಮೇ 12ರಿಂದ ಬದರಿನಾಥದಲ್ಲಿ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ 13 ದಿನದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ದರ್ಶನ ನಡೆಸಿದ್ದು, ಇದರಲ್ಲಿ 42 ಮಂದಿ ಅಕಾಲಿಕ ಸಾವನ್ನಪ್ಪಿದ್ದಾರೆ ಎಂದು ಬುಧವಾರದ ಅಂಕಿ - ಅಂಶದ ವರದಿಯಲ್ಲಿ ಪತ್ತೆಯಾಗಿದೆ.
ಕೇದರನಾಥದಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣ ದಾಖಲಾಗಿದೆ. ಇಲ್ಲಿ 19 ಯಾತ್ರಾರ್ಥಿಗಳು ಸಾವನ್ನಪ್ಪಿದರೆ, ಯಮುನೋತ್ರಿ ಧಾಮದಲ್ಲಿ 12 ಮಂದಿ ಮರಣ ಹೊಂದಿದ್ದಾರೆ. ಇನ್ನು ಬದ್ರಿನಾಥ್ ಮತ್ತು ಗಂಗೋತ್ರಿಯಲ್ಲಿ ತಲಾ 9 ಮತ್ತು 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸಾವನ್ನಪ್ಪಿದ ಯಾತ್ರಾರ್ಥಿಗಳು 55 ವರ್ಷ ಮೇಲ್ಪಟ್ಟ ವಯಸ್ಸಿನರಾಗಿದ್ದು, ಹೃದಯಾಘಾತ ಮತ್ತಿತ್ತರ ಕಾರಣಗಳಿಂದ ಇಹಲೋಹ ತ್ಯಜಿಸಿದ್ದಾರೆ.