ನವದೆಹಲಿ: ಹತ ಪಂಜಾಬಿ ಗಾಯಕ ಸಿಧು ಮೂಸೆವಾಲ ತಾಯಿ ಚರಣ್ ಸಿಂಗ್ ಕೌರ್ ತಮ್ಮ 58ನೇ ವಯಸ್ಸಿನಲ್ಲಿ ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೆಷನ್) ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿವರವಾದ ಮಾಹಿತಿ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಂಜಾಬ್ ಸರ್ಕಾರವನ್ನು ಕೋರಿದೆ.
ಪಂಜಾಬ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪಂಜಾಬಿ ಗಾಯಕ ಸಿಧು ಮೂಸೆವಾಲ ತಾಯಿ 58ನೇ ವಯಸ್ಸಿಗೆ ಐವಿಎಫ್ ಮೂಲಕ ಮಗುವನ್ನು ಪಡೆದಿರುವ ವರದಿಗಳನ್ನು ಉಲ್ಲೇಖಿಸಿದೆ.
ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಎಆರ್ಟಿ) (ರೆಗ್ಯೂಲೇಷನ್) ಕಾಯ್ದೆ 2021ರ ಪ್ರಕಾರ, ಎಆರ್ಟಿ ಸೇವೆ ಅಂದರೆ, ಐವಿಎಫ್ನಂತಹ ಚಿಕಿತ್ಸೆಗಳನ್ನು ಪಡೆಯಲು ಮಹಿಳೆಯರ ವಯೋಮಿತಿ 21- 50 ವರ್ಷ ಎಂದು ನಿಗದಿ ಮಾಡಲಾಗಿದೆ. ಈ ಸಂಬಂಧ ಲಗತ್ತಿಸಲಾದ ವರದಿ ಅನುಸಾರ ಈ ಪ್ರಕರಣ ಕುರಿತು ನೋಡಲು ಮನವಿ ಮಾಡಲಾಗಿದ್ದು, ಆಆರ್ಟಿ (ರೆಗ್ಯೂಲೇಷನ್ಸ್) ಕಾಯ್ದೆ 2021 ಪ್ರಕಾರ ಕ್ರಮ ನಡೆಸುವಂತೆ ಕೋರಿದೆ. ಈ ಪತ್ರಕ್ಕೆ ಆರೋಗ್ಯ ಸಚಿವಾಲಯದ ಪರವಾಗಿ ಎಸ್ಕೆ ರಂಜನ್ ಸಹಿ ಮಾಡಿದ್ದಾರೆ.
ಪಂಜಾಬ್ನ ಮಾನ್ಸಾದಲ್ಲಿ ಮೂಸೆವಾಲ ಗುಂಡಿಕ್ಕಿ ಹತ್ಯೆಗೊಂಡು ಎರಡು ವರ್ಷದ ಬಳಿಕ ಅವರ ಪೋಷಕರು ಭಾನುವಾರ ಗಂಡು ಮಗುವಿನ ಪೋಷಕರಾಗಿದ್ದಾರೆ. ಬಲ್ಕೌರ್ ಸಿಂಗ್, ಈ ಸಂಬಂಧ ಫೇಸ್ಬುಕ್ ಪೇಜ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.
ಎಆರ್ಟಿ (ರೆಗ್ಯೂಲೇಷನ್) ಕಾಯ್ದೆ:ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಉದ್ದೇಶ ಮತ್ತು ಭಾರತದಲ್ಲಿ ಎಆರ್ಟಿ ಸುರಕ್ಷಿತ ಮತ್ತು ನೈತಿಕ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಲು 2021 ಡಿಸೆಂಬರ್ 10 ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ರೆಗ್ಯೂಲೇಷನ್) ಕಾಯ್ದೆ 2021 ಪಾಸ್ ಮಾಡಲಾಯಿತು. ಇದು 2022 ಜನವರಿ 25ರಂದು ಜಾರಿಗೆ ತರಲಾಯಿತು. ಈ ಕಾಯ್ದೆಯ ಸೆಕ್ಷನ್ 2(ಸಿ) ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿ ನೋಂದಾಯಿತ ವೈದ್ಯರುಗಳು ಎಆರ್ಟಿ ಕ್ಲಿನಿಕ್‌ಗಳು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸ್ಥಳ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯ ವಿಧಾನ ಎಂದರು.
ಇನ್- ವಿಟ್ರೊ ಫರ್ಟಿಲೈಸಷನ್ (ಐವಿಎಫ್):ಅನೇಕ ಕಾರ್ಯವಿಧಾನವನ್ನು ಹೊಂದಿರುವ ಕ್ಲಿಷ್ಟಕರ ಸಂತಾನೋತ್ಪತ್ತಿ ಚಿಕಿತ್ಸೆ ಈ ಇನ್ ವಿಟ್ರೋ ಫರ್ಟಿಲೈಸಷನ್ ಆಗಿದೆ. ಈ ಕಾರ್ಯಾಚರಣೆಯೂ ಅಂಡಾಣು ಪ್ರಚೋದನೆಯೊಂದಿಗೆ ಆರಂಭವಾಗುತ್ತದೆ. ಈ ವೇಳೆ, ಹಾರ್ಮೋನಲ್ ಥೆರಪಿ ಬಳಕೆ ಮೂಲಕ ಅಂಡಾಶಯಗಳು ಒಂದು ಅಂಡಾಣು ಬದಲಾಗಿ ಹಲವಾರು ಅಂಡಾಣು ಉತ್ಪಾದನೆ ಮಾಡುವಂತೆ ಮಾಡಲಾಗುವುದು. ಈ ವೇಳೆ ಮಹಿಳೆಯನ್ನು ನಿಯಮಿತ ರಕ್ತ ಪರೀಕ್ಷೆ ಮತ್ತು ಅಲ್ಟ್ರಾ ಸೌಂಡ್ ಇಮೇಜ್ ಮೂಲಕ ಕೋಶಕ ಅಭಿವೃದ್ಧಿ ಮತ್ತು ಹಾರ್ಮೋನ್ ಮಟ್ಟದ ಮೇಲ್ವಿಚಾರಣೆ ನಡೆಸಲಾಗುವುದು. ಈ ಕೋಶಕಗಳು ನಿರ್ದಿಷ್ಟ ಗಾತ್ರ ತಲುಪಿದ ಬಳಿಕ ಅಂಡಾಣುಗಳ ಅಂತಿಮ ಪಕ್ವತೆ ಪ್ರಚೋದಿಸಲು ಪ್ರಚೋದಕ ಹೊಡೆತವನ್ನು ನೀಡಲಾಗುತ್ತದೆ. ಇದಾದ ಬಳಿಕ ಟ್ರಾನ್ಸ್‌ವಾಜಿನಲ್ ಅಲ್ಟ್ರಾಸೌಂಡ್ ಗೈಡೆಡ್ ಫಾಲಿಕಲ್ ಆಸ್ಪಿರೇಶನ್ ವಿಧಾನದ ಮೂಲಕ ಈ ಅಂಡಾಣುಗಳನ್ನು ಹಿಂಪಡೆಯಲಾಗುತ್ತದೆ. ಬಳಿಕ ಈ ಅಂಡಾಣುಗಳನ್ನು ವೀರ್ಯಗಳೊಂದಿಗೆ ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಮಾಡುವಂತೆ ಸಂಯೋಜಿಸಲಾಗುತ್ತದೆ.