ಕರ್ನಾಟಕ

karnataka

ETV Bharat / bharat

ಹೃದಯಾಘಾತಕ್ಕೂ ಮುನ್ನ ರಸ್ತೆ ಬದಿ ಬಸ್ ನಿಲ್ಲಿಸಿ 60 ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ - ಚಾಲಕನ ಸಮಯಪ್ರಜ್ಞೆ

ಎದೆನೋವು ಕಾಣಿಸಿಕೊಂಡ ತಕ್ಷಣ ಚಾಲಕ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿ, ಸಾಯುವ ಮುನ್ನ 60 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿರುವ ಘಟನೆ ಒಡಿಶಾದ ಬಾಲಸೋರ್​ನಲ್ಲಿ ನಡೆದಿದೆ.

Bus driver suffers heart attack, saves 60 passengers before death in Balasore
ಬಸ್​ ಚಾಲಕ ಹೃದಯಾಘಾತದಿಂದ ಸಾವು: ಡ್ರೈವರ್​ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

By ETV Bharat Karnataka Team

Published : Jan 30, 2024, 2:13 PM IST

ಬಾಲಸೋರ್​(ಒಡಿಶಾ): ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ ಚಾಲಕ ಹಠಾತ್​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದಾಗಿ 60 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂಥದ್ದೊಂದು ಘಟನೆ ಬಾಲಸೋರ್​ ಜಿಲ್ಲೆಯ ನೀಲಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯ ಪಟಾಪುರ ರಸ್ತೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ನಾಸ್ಕರ್​ ಟ್ರಾವೆಲ್ಸ್​ ಹೆಸರಿನ ವೋಲ್ವೋ ಬಸ್​ ಕೊಲ್ಕತ್ತಾದಿಂದ ಬಾಲಸೋರ್​ ಜಿಲ್ಲೆಯ ಪಂಚಲಿಂಗೇಶ್ವರ್​ಗೆ ತೆರಳುತ್ತಿತ್ತು. ಗಮ್ಯಸ್ಥಾನ ತಲುಪಲು ಕೆಲವೇ ಕಿಲೋಮೀಟರ್​ ದೂರದಲ್ಲಿದ್ದಾಗ ಪಟಾಪುರ ರಸ್ತೆಯ ಬಳಿ ಬಸ್​ ಚಾಲಕನ ಆರೋಗ್ಯ ಹಠಾತ್​ ಹದಗೆಟ್ಟಿದೆ. ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪುವ ಮೊದಲು ಚಾಲಕ ಬಸ್​ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ.

ಪ್ರಜ್ಞೆ ತಪ್ಪಿದ ಚಾಲಕನನ್ನು ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ನೀಲಗಿರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು, ಚಾಲಕ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಸಾವಿಗೂ ಮುನ್ನವೇ ಸಕಾಲದಲ್ಲಿ ಬಸ್​ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕನ ಸಮಯಪ್ರಜ್ಞೆಗೆ ಸ್ಥಳೀಯರು ಹಾಗೂ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಟ್ರಕ್​ಗಳ ಮಧ್ಯೆ ಸಿಲುಕಿ ಪ್ರಾಣ ಬಿಟ್ಟ ದಂಪತಿ; ಪವಾಡದಂತೆ ಬದುಕುಳಿದ ಮಕ್ಕಳು!

ABOUT THE AUTHOR

...view details