ಕರ್ನಾಟಕ

karnataka

ETV Bharat / bharat

ಆಟೋಗೆ ಸರ್ಕಾರಿ ಬಸ್​ ಡಿಕ್ಕಿ: 7 ಮಂದಿ ಕೂಲಿ ಕಾರ್ಮಿಕರು ಸಾವು, ₹5 ಲಕ್ಷ ಪರಿಹಾರ ಘೋಷಣೆ - BUS COLLIDED WITH AUTO

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 7 ಮಂದಿ ಸಾವಿಗೀಡಾಗಿದ್ದು, ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

ಆಟೋಗೆ ಸರ್ಕಾರಿ ಬಸ್​ ಡಿಕ್ಕಿ
ಆಟೋಗೆ ಸರ್ಕಾರಿ ಬಸ್​ ಡಿಕ್ಕಿ (ETV Bharat)

By ETV Bharat Karnataka Team

Published : Nov 23, 2024, 10:27 PM IST

ಅನಂತಪುರ (ಆಂಧ್ರಪ್ರದೇಶ) :ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಘೋರ ದುರಂತ ನಡೆದಿದೆ. ಕೃಷಿ ಕೂಲಿಕಾರರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಎಪಿಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದು, ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಕುತ್ಲೂರು ಮಂಡಲದ ನೆಲ್ಲುಟ್ಲ ಗ್ರಾಮದ 12 ಕೃಷಿ ಕೂಲಿ ಕಾರ್ಮಿಕರು ಗಾರ್ಲದಿನ್ನೆಗೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್​ ಆಗುತ್ತಿದ್ದಾಗ ಎದುರಿನಿಂದ ಬಂದ ಆರ್​ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಇನ್ನಿಬ್ಬರು ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಅನಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ತಾತಯ್ಯ (55), ಚಿನ್ನ ನಾಗಮ್ಮ (48), ರಾಮಾಂಜನಮ್ಮ (48), ಪೆದ್ದ ನಾಗಮ್ಮ (60), ಕೊಂಡಮ್ಮ, ಜಯರಾಮುಡು ಮತ್ತು ಚಿನ್ನ ನಾಗಣ್ಣ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್​​ಪಿ ಜಗದೀಶ್, ಡಿಎಸ್​ಪಿ ವೆಂಕಟೇಶ್ವರಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಸ್​​ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ವಿನೋದ್ ಕುಮಾರ್ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಬೇಸರ:ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದಕ್ಕೆ ಸಿಎಂ ಚಂದ್ರಬಾಬು ಆಘಾತ ವ್ಯಕ್ತಪಡಿಸಿದ್ದಾರೆ. ಕೆಲಸ ಮುಗಿಸಿ ಬರುವಾದ ರಸ್ತೆ ಅಪಘಾತ ಸಂಭವಿಸಿರುವುದು ದುಖಃಕರ ಎಂದು ಹೇಳಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಬೆಂಬಲ ನೀಡಲಿದ್ದು ಎಂದು ಹೇಳಿರುವ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.

ಇದನ್ನೂ ಓದಿ:ನಕಾರಾತ್ಮಕ ಚಿಂತನೆ, ಪರಿವಾರ ವಾದಕ್ಕೆ ಸೋಲು: ಪ್ರಧಾನಿ ಮೋದಿ, ಬಿಜೆಪಿ ಹೆಡ್​​​​ಕ್ವಾಟರ್ಸ್​​​​​​ನಲ್ಲಿ 'ಮಹಾ' ಸಂಭ್ರಮ

ABOUT THE AUTHOR

...view details