ರೇವಾ (ಮಧ್ಯಪ್ರದೇಶ):ಅಶ್ಲೀಲ ವಿಡಿಯೋ ನೋಡಿ ಉದ್ರೇಕಿತನಾದ ಬಾಲಕ ತನ್ನ ತಂಗಿಯನ್ನೇ ರೇಪ್ ಮಾಡಿದ್ದಾನೆ. ತಂದೆಗೆ ತಿಳಿಸುವುದಾಗಿ ಸಂತ್ರಸ್ತೆ ಹೇಳಿದಾಗ, ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಈ ಬಗ್ಗೆ ಪುತ್ರ ಮಹಾಶಯ ತಾಯಿಗೆ ತಿಳಿಸಿದ್ದು, ಆಕೆ ಹೆತ್ತ ಮಗುವನ್ನು ಮತ್ತೆ ಕತ್ತು ಹಿಸುಕಿ ಪ್ರಾಣ ಹೋಗುವಂತೆ ಮಾಡಿದ್ದಾಳೆ. ಇದನ್ನು ಪಕ್ಕದಲ್ಲೇ ಇದ್ದ ಇಬ್ಬರು ಅಕ್ಕಂದಿರು ಇದನ್ನು ಕಂಡಿದ್ದರೂ ಪ್ರಕರಣ ಬಯಲಾಗದಂತೆ ತಮ್ಮನಿಗೆ ನೆರವು ನೀಡಿದ್ದಾರೆ.
ಮಧ್ಯಪ್ರದೇಶದ ರೇವಾ ನಗರದಲ್ಲಿ ಏಪ್ರಿಲ್ 24 ರಂದು ಈ ಹೇಯ ಕೃತ್ಯ ನಡೆದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ, ಪೊಲೀಸರು ಇದೀಗ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬಾಲಕಿ ವಿಷಯುಕ್ತ ಪದಾರ್ಥ ತಿಂದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿತವಾಗಿದ್ದ ಕೇಸ್, ರೇಪ್ ಅಂಡ್ ಮರ್ಡರ್ ಎಂಬುದು ಬಯಲಾಗಿದೆ. ಸಂತ್ರಸ್ತೆಯ 13 ವರ್ಷದ ಸಹೋದರ, ಆತನ ತಾಯಿ, 17 ಮತ್ತು 18 ವರ್ಷದ ಸಹೋದರಿಯರನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ:ಏಪ್ರಿಲ್ 24 ರಂದು ರಾತ್ರಿ ವೇಳೆ ಮಲಗಿದ್ದಾಗ 13 ವರ್ಷದ ಬಾಲಕ ಮೊಬೈಲ್ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾನೆ. ಬಳಿಕ ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಬಾಲಕಿ ಈ ಬಗ್ಗೆ ತಂದೆಗೆ ತಿಳಿಸುವುದಾಗಿ ಹೇಳಿದಾಗ, ಆರೋಪಿ ಬಾಲಕ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಮೂರ್ಛೆ ಹೋದ ಬಳಿಕ ಅಲ್ಲಿಯೇ ಇದ್ದ ತಾಯಿಗೆ ವಿಷಯ ತಿಳಿಸಿದ್ದಾನೆ. ಮಗುವನ್ನು ಪರಿಶೀಲಿಸಿದಾಗ ಆಕೆ ಇನ್ನೂ ಉಸಿರಾಡುತ್ತಿರುವುದು ಕಂಡು ಬಂದಿದೆ.