ಚೆನ್ನೈ (ತಮಿಳುನಾಡು):ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡು ಮತಬೇಟೆ ಆರಂಭಿಸಿದ್ದಾರೆ. ಆದ್ರೆ ಇದರ ಮಧ್ಯೆ ಬಿಜೆಪಿ ಆಭ್ಯರ್ಥಿ ಒಡೆತನದ ಮೆಡಿಕಲ್ ಕಾಲೇಜ್ಗೆ ಬೆದರಿಕೆ ಪತ್ರ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ತಿರುವೆಕಾಡು ಪಕ್ಕದ ವೇಲಪ್ಪಂಚವಾಡಿಯಲ್ಲಿ ಪ್ರಸಿದ್ಧ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ನಿನ್ನೆ ಸಂಜೆ ಕಾಲೇಜು ಆವರಣದಲ್ಲಿರುವ ಕಚೇರಿಗೆ ಪತ್ರ ಬಂದಿದೆ. ಪತ್ರದಲ್ಲಿ 1 ಕೋಟಿ ರೂ. ಕೊಡದಿದ್ದರೆ 24 ಗಂಟೆಯೊಳಗೆ ಕಾಲೇಜಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡ ನೌಕರರು ತಕ್ಷಣ ತಿರುವೆಕಾಡು ಪೊಲೀಸ್ ಠಾಣೆಗೆ ತೆರಳಿ ಬಾಂಬ್ ಬೆದರಿಕೆ ಬಗ್ಗೆ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಬಾಂಬ್ ಸ್ಕ್ವಾಡ್ಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಸ್ಕ್ವಾಡ್ ಸ್ನಿಫರ್ ಡಾಗ್ ಸಹಾಯದಿಂದ ವೈದ್ಯಕೀಯ ಕಾಲೇಜು ಕಚೇರಿ, ಪಾರ್ಕಿಂಗ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದರು. ಸುದೀರ್ಘ ಶೋಧದ ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಕಂಡು ಬಂದಿಲ್ಲ ಎಂದು ಖಚಿತಪಡಿಸಿದ್ದು, ಇದು ಹುಸಿ ಬಾಂಬ್ ಬೆದರಿಕೆ ಪತ್ರ ಎಂದು ಬಾಂಬ್ ಸ್ಥಳದಿಂದ ತೆರಳಿದ್ದಾರೆ. ಇದಲ್ಲದೇ, ತಿರುವೆಕಾಡು ಪೊಲೀಸರು ನಡೆಸಿದ ತನಿಖೆಯಲ್ಲಿ ವೆಲ್ಲೂರು ಜಿಲ್ಲೆಯಿಂದ ಅಂಚೆ ಮೂಲಕ ವೈದ್ಯಕೀಯ ಕಾಲೇಜಿಗೆ ಈ ಪತ್ರ ರವಾನೆಯಾಗಿದ್ದು, ಲಕ್ಷ್ಮಣನ್ ಹೆಸರಿನಲ್ಲಿ ಪತ್ರ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.
ಕಾಲೇಜಿನ ಸಂಸ್ಥಾಪಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಎಂಬ ಕಾರಣಕ್ಕೆ ಪತ್ರ ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಕರ್ತರೊಂದಿಗೆ ಯಾರೋ ವೈಯಕ್ತಿಕ ದ್ವೇಷ ಹೊಂದಿರಬಹುದು ಎಂಬ ಕಾರಣಕ್ಕಾಗಿ ಚುನಾವಣಾ ಅಭ್ಯರ್ಥಿಗೆ ಬೆದರಿಕೆ ಹಾಕಲು ಪತ್ರ ಕಳುಹಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆದರಿಕೆ ಪತ್ರಕ್ಕೆ ಬೇರೆ ಯಾವುದಾದ್ರೂ ಕಾರಣಗಳಿವೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಸಂಚು - RAMESHWARAM CAFE BLAST CASE