ಗ್ಯಾಂಗ್ಟಕ್(ಅಸ್ಸಾಂ): ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿಕ್ಕಿಂ ರಾಜ್ಯದ ಮಾಜಿ ಸಚಿವ ಆರ್.ಸಿ.ಪೌಡ್ಯಾಲ್(80) ಅವರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪದ ಕಾಲುವೆಯಲ್ಲಿ ಸಿಕ್ಕಿದೆ.
ಪೌಡ್ಯಾಲ್ ಮೃತದೇಹ ಮಂಗಳವಾರ ಫುಲ್ಬರಿಯಲ್ಲಿರುವ ತೀಸ್ತಾ ಕಾಲುವೆಯಲ್ಲಿ ತೇಲುತ್ತಿತ್ತು ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
ಕೈ ಗಡಿಯಾರ ಮತ್ತು ಅವರು ಧರಿಸಿದ್ದ ಬಟ್ಟೆಗಳಿಂದ ಮೃತದೇಹದ ಗುರುತು ಕಂಡುಹಿಡಿಯಲಾಗಿದೆ. ಜುಲೈ 7ರಂದು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‌ನಿಂದ ಪೌಡ್ಯಾಲ್ ನಾಪತ್ತೆಯಾಗಿದ್ದರು. ಶೋಧಕ್ಕಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.