ಕರ್ನಾಟಕ

karnataka

ETV Bharat / bharat

ಅಮೃತಸರದ ಇಸ್ಲಾಮಾಬಾದ್​​​ ಏರಿಯಾದಲ್ಲಿ ಮತ್ತೆ ಸ್ಫೋಟ; ಹೊಣೆ ಹೊತ್ತ ಗ್ಯಾಂಗ್​​ಸ್ಟರ್​ ಗುಂಪು - BLAST NEAR OF ISLAMABAD

ಅಮೃತಸರದ ಇಸ್ಲಾಮಾಬಾದ್​ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಸ್ಫೋಟ ಸಂಭವಿಸಿದೆ.

blast-near-of-islamabad-police-station-amritsar
ಅಮೃತ್​ಸರ ಪೊಲೀಸ್​ ಆಯುಕ್ತ ಗುರುಪ್ರೀತ್​ ಸಿಂಗ್​ ಭುಲ್ಲಾರ್​ (ಈಟಿವಿ ಭಾರತ್​)

By ETV Bharat Karnataka Team

Published : Dec 17, 2024, 11:13 AM IST

ಅಮೃತ್​ಸರ, ಪಂಜಾಬ್​ :ಅಮೃತಸರದ ಇಸ್ಲಾಮಾಬಾದ್​​ ಪೊಲೀಸ್​ ಠಾಣೆ ಸಮೀಪದಲ್ಲಿ ನಡು ರಾತ್ರಿ ಸ್ಫೋಟ ಪ್ರಕರಣವೊಂದು ಸಂಭವಿಸಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದು, ಇದರಿಂದ ಸುತ್ತಮುತ್ತಲಿನ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ, ಭೀಕರ ಸ್ಫೋಟದ ಸದ್ಧಿಗೆ ಹತ್ತಿರದಲ್ಲಿದ್ದ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಅಮೃತಸರ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ಅವರು ಪೊಲೀಸ್ ಠಾಣೆಗೆ ಆಗಮಿಸಿ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಇಸ್ಲಾಮಾಬಾದ್​ ಠಾಣೆಯ ಬಳಿ ಸ್ಫೋಟ:ಇಸ್ಲಾಮಾಬಾದ್​ ಪೊಲೀಸ್​ ಠಾಣೆಯ ಪ್ರದೇಶದಲ್ಲಿ ನಡೆದ ಸ್ಪೋಟ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಸ್ಥಳೀಯರು ಮಧ್ಯರಾತ್ರಿ 3 ಗಂಟೆಗೆ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ಧ ಕೇಳಿ ಎಲ್ಲ ಜನರು ಮನೆಯಿಂದ ಹೊರ ಬಂದರು. ನಾವು ಕೂಡ ಹೊರ ಬಂದು ನೋಡಿದಾಗ ಏನಾಗುತ್ತಿದೆ ಎಂಬುದು ತಿಳಿಯದಾಯಿತು. ದೊಡ್ಡ ಬಾಂಬ್​​ ಬ್ಲಾಸ್ಟ್​​ ಆದ ಶಬ್ಧ ಪ್ರದೇಶದಲ್ಲಿನ ಜನರಲ್ಲಿ ಆತಂಕವನ್ನುಂಟು ಮಾಡಿತು ಎಂದರು.

ಕೃತ್ಯದ ಹೊಣೆ ಹೊತ್ತ ಗ್ಯಾಂಗ್​ಸ್ಟರ್​​: ಇಸ್ಲಾಮಾಬಾದ್​ ಪೊಲೀಸ್​ ಠಾಣೆ ಸಮೀಪದಲ್ಲಿ ನಡೆದ ಈ ಘಟನೆಯ ಹೊಣೆಯಲ್ಲಿ ಗ್ಯಾಂಗ್​ಸ್ಟರ್​ ಜೀವನ್​ ಫೌಜಿ ಗುಂಪು ಹೊತ್ತುಕೊಂಡಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಕೂಡ ಈ ಗುಂಪು ಮಾಡಿದೆ.

ಅಮೃತ್​ಸರದಲ್ಲಿನ ಇಸ್ಲಾಮಾಬಾದ್​ ಪೊಲೀಸ್​ ಠಾಣೆಯ ಮೇಲೆ ಗ್ರೇನೇಡ್​​ ಎಸೆದ ಪ್ರಕರಣದ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ. 1984 ರಿಂದ ಸಿಖ್ಖರು ಮತ್ತು ಅವರ ಕುಟುಂಬಗಳಿಗೆ ಸರ್ಕಾರದ ಸಹಯೋಗದೊಂದಿಗೆ ಏನು ಮಾಡಿದ್ದಾರೆ ಮತ್ತು ಅವರು ಮುಂದೆ ಏನು ಮಾಡುತ್ತಾರೆ ಎಂಬುದನ್ನು ತಿಳಿಸಲು ಇದೆಲ್ಲವನ್ನೂ ಮಾಡಲಾಗಿದೆ. ಸಿಖ್ಖರ​​​​​ ಟರ್ಬನ್​ (ತಲೆಗೆ ಕಟ್ಟುವ ಪೇಟಾ) ತೆಗೆಯುವುದು ಒಂದೇ ಬಾಕಿ. ಪೊಲೀಸರು ಸಿಖ್ಖರ ಟರ್ಬನ್​ ಮುಟ್ಟುತ್ತಾರಾ ಎಂಬ ಕಡೆಗೆ ವಿಶೇಷ ಗಮನ ಕೊಡಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಮುಂದುವರೆದ ತನಿಖೆ:ಅಮೃತ್​ಸರ ಪೊಲೀಸ್​ ಆಯುಕ್ತ ಗುರುಪ್ರೀತ್​ ಸಿಂಗ್​ ಭುಲ್ಲರ್​ ​ಮಾತನಾಡಿ, ದೊಡ್ಡ ಸ್ಫೋಟದ ಶಬ್ಧ ಕೇಳಿ ಬಂದ ಸ್ಥಳದಲ್ಲಿ ಪತ್ತೆ ಕಾರ್ಯದ ಜೊತೆಗೆ ತನಿಖೆ ನಡೆಯುತ್ತಿದೆ. ಸ್ಫೋಟ ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ. ಸದ್ಯ ಘಟನೆ ಸಂಬಂಧ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ರೀತಿ ಉಗ್ರ ಚಟುವಟಿಕೆ ನಡೆಸುತ್ತಿರುವ ಗ್ಯಾಂಗ್​ಸ್ಟರ್​​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ಸಾಗುತ್ತಿದ್ದು, ಮಾಧ್ಯಮಗಳ ಮುಂದೆ ಏನೂ ಹೇಳಲು ಸಾಧ್ಯವಿಲ್ಲ.

ಸ್ಪೋಟ ಪ್ರಕರಣಗಳು: ಕಳೆದ ಕೆಲವು ದಿನಗಳಿಂದ ಇಲ್ಲಿನ ಪೊಲೀಸ್​ ಠಾಣೆ ಸಮೀಪ ನಿರಂತರ ಸ್ಫೋಟಗಳು ಸಂಭವಿಸುತ್ತಿವೆ. ಈ ಮೊದಲು ಅಜ್ನಲ ಪೊಲೀಸ್​ ಠಾಣೆ ಹೊರಗೆ ಸ್ಫೋಟ ಸಂಭವಿಸಿತ್ತು. ಬಳಿಕ ಗುರ್ಬಕ್ಷ ಶಂಕರ್​ ಪೊಲೀಸ್​ ಠಾಣೆ ಹತ್ತಿರ ಬಳಿಕ ಮಜಿತಾ ಪೊಲೀಸ್​ ಠಾಣೆ ಹೊರಗೆ ಸ್ಪೋಟ ಸಂಭವಿಸಿತು. ಇದೀಗ ಇಸ್ಲಾಮಾಬಾದ್​ ಪೊಲೀಸ್​ ಠಾಣೆಯ ಹೊರಗೆ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: ಪಾಕ್​​​ನಲ್ಲಿ ನಿಲ್ಲದ ಉಗ್ರರ ಹಾವಳಿ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಭಯೋತ್ಪಾದಕರ ಎನ್​​​ಕೌಂಟರ್

ABOUT THE AUTHOR

...view details