ಅಯೋಧ್ಯೆ (ಉತ್ತರ ಪ್ರದೇಶ): ಮಿಲ್ಕಿಪುರ ಉಪ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಅಭ್ಯರ್ಥಿ ಚಂದ್ರಬಾನು ಪಾಸ್ವಾನ್ 61,710 ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ಪಾಸ್ವಾನ್ 1.46 ಲಕ್ಷ ಮತಗಳನ್ನು ಪಡೆದಿದ್ದರು. ಅವರ ಸಮೀಪದ ಎದುರಾಳಿ ಸಮಾಜವಾದಿ ಪಕ್ಷದ ಅಜಿತ್ ಪ್ರಸಾದ್ 84,687 ಮತಗಳನ್ನು ಪಡೆದಿದ್ದಾರೆ.
ಆರಂಭದಿಂದಲೂ ಪಾಸ್ವಾನ್ ಎಸ್ಪಿ ಅಭ್ಯರ್ಥಿ ಪ್ರಸಾದ್ ವಿರುದ್ಧ ನಿರ್ಣಾಯಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. 29 ಸುತ್ತಿನ ಮತ ಎಣಿಕೆ ಬಳಿಕ ಅವರು 61,000 ಮತಗಳಿಂದ ಜಯ ಗಳಿಸಿದ್ದಾರೆ. 29ನೇ ಸುತ್ತಿನಲ್ಲಿ ಪಾಸ್ವಾನ್ 1,45,685 ಮತಗಳನ್ನು ಪಡೆದರೆ, ಪ್ರಸಾದ್ 84,266 ಮತಗಳನ್ನು ಗಳಿಸಿದರು. ಅಜಾದ್ ಸಮಾಜ್ ಪಕ್ಷದ (ಕಾನ್ಷಿ ರಾಮ್) ಅಭ್ಯರ್ಥಿ ಸಂತೋಷ್ ಕುಮಾರ್ ಕೇವಲ 5,158 ಮತಗಳನ್ನು ಪಡೆದರು.
ಲೋಕಸಭಾ ಚುನಾಣೆಯಲ್ಲಿ ಮಿಲ್ಕಿಪುರ ಕ್ಷೇತ್ರದ ಶಾಸಕರಾಗಿದ್ದ ಎಸ್ಪಿ ಅಭ್ಯರ್ಥಿ ಅವದೇಶ್ ಪ್ರಸಾದ್ ಪೈಜಾಬಾದ್ ಕ್ಷೇತ್ರದಿಂದ ಗೆಲುವು ಕಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಕ್ಷೇತ್ರ ಉಪ ಚುನಾವಣೆ ಎದುರಿಸಿತು. ಫೆ. 5ರಂದೇ ಕ್ಷೇತ್ರದಲ್ಲಿ ಮತದಾನ ನಡೆದಿತ್ತು.