ಕರ್ನಾಟಕ

karnataka

ETV Bharat / bharat

ಶವವಾಗಿ ಪತ್ತೆಯಾದ ಬಿಜೆಪಿ ನಾಯಕನ ಪುತ್ರ; ಕೊಲೆಯೋ ಅಥವಾ? - BJP LEADER SON BODY FOUND DRAIN

ಗಂಗಾನಗರ ಪ್ರದೇಶದ ರಕ್ಷಾಪುರಂ ನಿವಾಸಿ ಯಶ್ಪಾಲ್ ಸಿಂಗ್ ಪುತ್ರ ಅಮನ್​ ತೋಮರ್​ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.

bjp-leader-son-body-found-drain-in-meerut-murder-or-accident-police-confused
ಬಿಜೆಪಿ ನಾಯಕನ ಮಗ ವಾಸವಾಗಿದ್ದ ಪ್ಲಾಟ್​ (ಈಟಿವಿ ಭಾರತ್​​)

By ETV Bharat Karnataka Team

Published : Dec 16, 2024, 11:32 AM IST

ಮೀರತ್​, ಉತ್ತರಪ್ರದೇಶ: ಬಿಜೆಪಿ ನಾಯಕನ ಮಗ ಶವವಾಗಿ ಪತ್ತೆಯಾಗಿದ್ದು, ಚರಂಡಿಯಲ್ಲಿ ಮೃತದೇಹ ಕಂಡು ಬಂದಿದೆ. ಶನಿವಾರ ರಾತ್ರಿ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದರು, ಹೆಂಡತಿ ಮತ್ತು ಮಗುವನ್ನು ಮನೆಗೆ ಬಿಟ್ಟಿದ್ದಾರೆ. ಕೆಳಗೆ ಹೋಗಿ ಕಾರಿನಲ್ಲಿ ಕುಳಿತಿದ್ದು, ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ಭಾನುವಾರ ಚರಂಡಿಯಲ್ಲಿ ಅವರ ಮೃತದೇಹ ಸಿಕ್ಕಿದೆ. ಅವರ ಪ್ಯಾಂಟ್​ ಜೇಬಿನಲ್ಲಿ ಕೀ ಮತ್ತು ಮೊಬೈಲ್​ಗಳು ಪತ್ತೆಯಾಗಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುತ್ತಮುತ್ತಲ ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಮೀರತ್​ನ ಗಂಗಾನಗರ ಪ್ರದೇಶದ ರಕ್ಷಾಪುರಂ ನಿವಾಸಿ ಯಶ್ಪಾಲ್ ಸಿಂಗ್ ಪುತ್ರ ಅಮನ್​ ತೋಮರ್​ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಮಹಾನಗರ ಪಾಲಿಕೆಯ ಕಾರ್ಯಕಾರಿಣಿ ಸದಸ್ಯರಾಗಿರುವ ಯಶ್ಪಾಲ್​ ಸಿಂಗ್​​ ಮಗ ತೋಮರ್​ ಗಂಗಾನಗರದ ಗಂಗಾಧಮ್​ ಕಾಲೋನಿಯ ಫ್ಲಾಟ್​ನಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಅವರು, ಶನಿವಾರ ಕುಟುಂಬ ಸದಸ್ಯರೊಂದಿಗೆ ಮದುವೆಗೆ ತೆರಳಿದ್ದರು.

ಶನಿವಾರ ರಾತ್ರಿ ಮದುವೆ ಮಗಿಸಿ ತಂದೆಯನ್ನು ರಕ್ಷಾಪುರಂ ನಿವಾಸಕ್ಕೆ ಬಿಟ್ಟಿದ್ದಾರೆ. ಇದಾದ ಬಳಿಕ ತಮ್ಮ ಫ್ಲಾಟ್​ಗೆ ಮರಳಿದ್ದಾರೆ. ಹೆಂಡತಿ ಮತ್ತು ಮಗುವನ್ನು ಬಿಟ್ಟು ಕಾರಿನಲ್ಲಿಯೇ ಅವರು ಕುಳಿತಿದ್ದಾರೆ. ರಾತ್ರಿ ಇಡೀ ದಿನ ಮನೆಗೆ ಮರಳದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು, ಹುಡುಕಾಟ ನಡೆಸಿದ್ದರು.

ಆತನ ಮೊಬೈಲ್​ಗೂ ಕೂಡ ಕರೆ ಮಾಡಲಾಗಿತ್ತು. ಈ ವೇಳೆ, ಕಾರನ್ನು ಫ್ಲಾಟ್​ ಕಳೆಗೆ ನಿಲ್ಲಿಸಲಾಗಿತ್ತು. ಅದು ಲಾಕ್​ ಆಗಿತ್ತು. ಎಷ್ಟು ಹುಡುಕಿದರೂ​ ಅಮನ್​ ಪತ್ತೆಯಾಗಿರಲಿಲ್ಲ. ಮಧ್ಯಾಹ್ನ ಅವರ ಮೃತ ದೇಹವೂ ಫ್ಲಾಟ್​ನ ಸಮೀಪದ ಚರಂಡಿಯಲ್ಲಿ ಕಂಡು ಬಂದಿದೆ.

ಸುತ್ತಮುತ್ತಲ ಗದ್ದಲ ವಾತಾವರಣ ಕಂಡು ಬಂದ ಬಳಿಕ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದಾಗ ಅಮನ್​ ಮೃತ ದೇಹ ಇರುವುದು ಗೊತ್ತಾಗಿದೆ. ಘಟನೆ ತಿಳಿದು ಗಂಗಾನಗರ ಪೊಲೀಸ್​ ಠಾಣೆ ಗ್ರಾಮೀಣ ಎಸ್​ಪಿ ರಾಕೇಶ್​ ಕುಮಾರ್​ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಘಟನೆ ಕುರಿತು ಮಾತನಾಡಿರುವ ಗ್ರಾಮೀಣ ಎಸ್​ಪಿ, ಅಮನ್​ ಯಾರ ಜತೆಗೂ ಕೂಡಾ ದ್ವೇಷ ಹೊಂದಿರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಪೊಲೀಸರು ಸದ್ಯ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ​

ಇದನ್ನೂ ಓದಿ: ಮಣಿಪುರದಲ್ಲಿ ಬಿಹಾರದ ಬಾಲಕರ ಹತ್ಯೆ: ಒಮ್ಮೆ ನನ್ನ ಮಗನ ಮುಖ ನೋಡಬೇಕೆಂದು ಪೋಷಕರ ಆಕ್ರಂದನ

ABOUT THE AUTHOR

...view details