ಕರ್ನಾಟಕ

karnataka

ETV Bharat / bharat

ಬಿಹಾರ: ಹಿಂದಿಯಲ್ಲೂ ಎಂಬಿಬಿಎಸ್​​ ಪದವಿ ನೀಡಲು ನಿರ್ಧಾರ - MBBS Course In Hindi - MBBS COURSE IN HINDI

ವಿಶೇಷ ಸಮಿತಿಯ ಶಿಫಾರಸಿನ ಅನ್ವಯ ಇದೀಗ ಹಿಂದಿ ಭಾಷೆಯಲ್ಲೂ ಎಂಬಿಬಿಎಸ್​ ಪದವಿ ಆರಂಭಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ.

Bihar government has decided to offer MBBS course to students in Hindi
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 3, 2024, 11:22 AM IST

ಪಾಟ್ನಾ: ಮುಂದಿನ ಶೈಕ್ಷಣಿಕ ವರ್ಷದಿಂದ ಬಿಹಾರದಲ್ಲಿ ಹಿಂದಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್​ ಕೋರ್ಸ್​ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಮಂಗಲ್​ ಪಾಂಡೆ ತಿಳಿಸಿದ್ದಾರೆ. ಈ ಮೊದಲು ಮಧ್ಯ ಪ್ರದೇಶದಲ್ಲಿ ಎಂಬಿಬಿಎಸ್​ ಅನ್ನು ಹಿಂದಿಯಲ್ಲಿ ಕಲಿಯುವ ಅವಕಾಶ ನೀಡಲಾಗಿತ್ತು. ಇದೀಗ ಬಿಹಾರ ಕೂಡ ಇದೇ ಹಾದಿಯಲ್ಲಿ ಸಾಗಿದೆ.

ಏಮ್ಸ್​ ನವದೆಹಲಿ ಶಿಫಾರಸು ಮಾಡಿದ ವೈದ್ಯಕೀಯ ಶಿಕ್ಷಣದ ಪಠ್ಯವನ್ನು ಹಿಂದಿಯಲ್ಲಿ ಅಳವಡಿಸಲಾಗುವುದು. ಇದರಿಂದ ಇಂಗ್ಲಿಷ್​ ಬದಲಾಗಿ ಪಠ್ಯವನ್ನು ಹಿಂದಿಯಲ್ಲಿ ಸುಲಭವಾಗಿ ಕಲಿಯಬಹುದಾಗಿದೆ. 2024ರ ನೀಟ್​ ಯುಜಿ ಪರೀಕ್ಷೆ ಪಾಸ್​ ಮಾಡಿರುವ ವಿದ್ಯಾರ್ಥಿಗಳು ಹಿಂದಿಯಲ್ಲಿ ಎಂಬಿಬಿಎಸ್​ ಕಲಿಯುವ ಅವಕಾಶ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಎಂಬಿಬಿಎಸ್ ಕೋರ್ಸ್‌ಗೆ ಹಿಂದಿ ಪಠ್ಯಪುಸ್ತಕಗಳ ಲಭ್ಯತೆ ಸೇರಿದಂತೆ ಅಗತ್ಯ ಅಂಶಗಳ ಕುರಿತು ಚರ್ಚಿಸಿದ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಮೂಲಕ ಹಿಂದಿಯನ್ನು ಉತ್ತೇಜಿಸುವ ಹಾಗೂ ಜಾಗತಿಕ ಭಾಷೆಯಾಗಿ ಮಾಡುವ ಸರ್ಕಾರದ ಗುರಿ ಈಡೇರುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಎಂಬಿಬಿಎಸ್​ ಅನ್ನು ಹಿಂದಿ ಭಾಷೆಯಲ್ಲಿ ಪರಿಚಯಿಸಲು 9 ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಸದಸ್ಯರ ಶಿಫಾರಸಿನನ್ವಯ ಏಮ್ಸ್​ ದೆಹಲಿ ಪಠ್ಯವನ್ನು ಹಿಂದಿ ಭಾಷೆಯಲ್ಲಿ ಅಳವಡಿಸಲಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಯುಪಿಎಸ್​ಸಿ ಪ್ರಯತ್ನಿಸುವುದು ಆಕಾಂಕ್ಷೆಯ ಬಡತನವಲ್ಲ, ಅದು ಆಕಾಂಕ್ಷೆಯ ಉದಾತ್ತತೆ: ಪ್ರೊ. ಮಿಲಿಂದ್​ ಕುಮಾರ್​ ಶರ್ಮಾ

ABOUT THE AUTHOR

...view details