ಔರಂಗಬಾದ್ (ಬಿಹಾರ):ಮೇಕೆ ಕಳ್ಳತನ ಪ್ರಕರಣವೊಂದು ಬರೋಬ್ಬರಿ 36 ವರ್ಷಗಳ ಬಳಿಕ ಇತ್ಯರ್ಥಗೊಂಡಿದ್ದು, ಈ ಸಂಬಂಧ ಔರಂಗಬಾದ್ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ. 1988ರ ಪ್ರಕರಣದ 5 ಆರೋಪಿಗಳನ್ನು ಖುಲಾಸೆ ಮಾಡಿ ಕೋರ್ಟ್ ಆದೇಶ ನೀಡಿದೆ.
ಏನಿದು ಘಟನೆ:1988ರ ಜೂನ್ 25ರಂದು ಬೆಳ್ಳೆ 5 ಗಂಟೆ ಸುಮಾರಿಗೆ ಔರಂಗಬಾದ್ನ ಅಸ್ಲೇಂಪುರ್ ಗ್ರಾಮದ ರಾಜನ್ ರೈ ಅವರ ಮನೆ ಬಾಗಿಲಿಗೆ ಕಟ್ಟಿ ಹಾಕಿದ್ದ ಮೇಕೆ ಕಳ್ಳತನಕ್ಕೆ 12 ಮಂದಿ ನುಗ್ಗಿದ್ದರು. ಅಂದಿಗೆ 600ರೂ ಮೌಲ್ಯದ ಮೊತ್ತದ ಮೇಕೆ ಕಳ್ಳತನಕ್ಕೆ ಮುಂದಾಗಿದ್ದನ್ನು ರಾಜನ್ ರೈ, ವಿರೋಧಿಸಿದ್ದಾರೆ.
ಈ ವೇಳೆ, 12 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮನೆಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದರು. ಈ ಘಟನೆಯಲ್ಲಿ ರಾಜನ್ ರೈ ಬಚಾವ್ ಆಗಿದ್ದು, ದುರುದೃಷ್ಟವಶಾತ್ ಮನೆ ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಈ ಘಟನೆ ಬಳಿಕ ರಾಜಯ್ ದೌದ್ನಗರ್ ಪೊಲೀಸ್ ಠಾಣೆಯಲ್ಲಿ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
36 ವರ್ಷ ವಿಚಾರಣೆ: ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿದ್ದರು. ಆ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ತೀರ್ಪು ನೀಡಿರಲಿಲ್ಲ. ಈ ಪ್ರಕರಣ ತೀರ್ಪು ನೀಡಲು 36 ವರ್ಷ ಸಮಯ ಹಿಡಿಯಿತು. 2024ರಂದು ಸೆಪ್ಟೆಂಬರ್ 9ರಂದು ಕೋರ್ಟ್ ಐತಿಹಾಸಿಕ ತೀರ್ಪು ನೀಡಿ 5 ಆರೋಪಿಗಳನ್ನು ಖುಲಾಸೆ ಮಾಡಿದೆ. ಖುಲಾಸೆಗೊಂಡ ಆರೋಪಿಗಳು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಕ್ಷ್ಯ ಕೊರತೆ: ಎಡಿಜೆ ಸೌರಬ್ ಸಿಂಗ್ ಈ ತೀರ್ಪು ನೀಡಿದ್ದಾರೆ. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಐದು ಆರೋಪಿಗಳಾದ ಮನೋಜ್ ರೈ, ದೀನ್ದಯಾಳ್ ರೈಮ ವಿಷ್ಣುದಯಳ್ ರೈಮ ಮದನ್ ರೈ, ಲಖನ್ ರೈರನ್ನು ಖುಲಾಸೆ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು 5 ಆರೋಪಿಗಳು ಸಾವನ್ನಪ್ಪಿದ್ದು, 2 ಆರೋಪಿಗಳನ್ನು ಪ್ರಕರಣದಿಂದ ಪ್ರತ್ಯೇಕಗೊಳಿಸಲಾಗಿದೆ ಎಂದು ವಕೀಲ ಸತೀಶ್ ಕುಮಾರ್ ಸ್ನೇಹಿ ತಿಳಿಸಿದ್ದಾರೆ.
36ವರ್ಷದ ಬಳಿಕ ಈ ಮೇಕೆ ಕಳ್ಳತನದ ಪ್ರಕರಣದ ತೀರ್ಪು ಹೊರ ಬಿದ್ದಿರುವುದು, ಇದೀಗ ಜಿಲ್ಲೆಯಲ್ಲಿ ಬಹಳ ಚರ್ಚೆಗೆ ಗುರಿಯಾಗಿದೆ.
ಇದನ್ನೂ ಓದಿ: ಯುಪಿ: ಜನರಲ್ಲಿ ಆತಂಕ ಮೂಡಿಸಿದ್ದ 5ನೇ ತೋಳ ಸೆರೆ; ಮುಂದುವರೆದ ಕಾರ್ಯಾಚರಣೆ