ಸ್ನಾನಗೃಹದ ಸ್ವಚ್ಛಗೊಳಿಸುವಿಕೆ ಅನೇಕರಿಗೆ ದೊಡ್ಡ ತಲೆನೋವಿನ ಕೆಲಸ. ಏಕೆಂದರೆ ಎಷ್ಟೇ ಉಜ್ಜಿದರೂ ಬಾತ್ ರೂಂ ಸ್ವಚ್ಛವಾಗಿ ಕಾಣೋಲ್ಲ. ಇದರಿಂದಾಗಿ ಬಾತ್ ರೂಂ ಕೆಟ್ಟ ವಾಸನೆ ಬೀರುತ್ತದೆ. ಬಾತ್ ರೂಂನಲ್ಲಿ ಸ್ವಚ್ಛತೆಯ ಕೊರತೆಯಿಂದ ಬ್ಯಾಕ್ಟೀರಿಯಾ, ಧೂಳು, ಕೊಳೆಯಿಂದ ಹಲವು ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ.
ಕೆಲವರು ಬಾತ್ ರೂಂ ಕ್ಲೀನ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಕ್ಲೀನರ್ಗಳನ್ನು ಬಳಸುತ್ತಾರೆ. ಕೆಲವು ಹಾನಿಕಾರಕ ರಾಸಾಯನಿಕಗಳಿರುವ ಕಾರಣ ಇವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಆದರೂ ಕೆಲವು ಗೃಹೋಪಯೋಗಿ ವಸ್ತುಗಳಿಂದ ನೀವು ಸುಲಭವಾಗಿ ಸ್ನಾನಗೃಹವನ್ನು ಹೊಳೆಯುವಂತೆ ಮಾಡಬಹುದು.
ಶವರ್ ಹೆಡ್:ಕೆಲವೊಮ್ಮೆ ಶವರ್ ಹೆಡ್‌ನಲ್ಲಿ ಕೊಳೆ ಸಂಗ್ರಹವಾಗುತ್ತದೆ. ಇದರಿಂದಾಗಿ ರಂಧ್ರಗಳಿಂದ ನೀರು ಸರಿಯಾಗಿ ಬರುವುದಿಲ್ಲ. ಈ ಸಂದರ್ಭದಲ್ಲಿ ಸ್ಕ್ರಬ್ಬರ್ ತೆಗೆದುಕೊಂಡು ಶವರ್ ಹೆಡ್ ಅನ್ನು ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ. ನಂತರ ಒಂದು ಚಮಚ ಅಡುಗೆ ಸೋಡಾ ಮತ್ತು ಎರಡು ಚಮಚ ಬಿಳಿ ವಿನೆಗರ್ ಅನ್ನು ಕವರ್‌ನಲ್ಲಿ ಹಾಕಿ ಶವರ್‌ಹೆಡ್‌ಗೆ ಕಟ್ಟಿ. ಒಂದು ಗಂಟೆಯ ನಂತರ, ಕವರ್ ತೆಗೆದುಹಾಕಿ. ಆಗ ಶವರ್‌ಹೆಡ್‌ಗೆ ಅಂಟಿಕೊಂಡಿದ್ದ ಎಲ್ಲಾ ಕೊಳೆ ಬಿಡಲಾರಂಭಿಸುತ್ತದೆ. ಆಗ ಶವರ್ ಹೆಡ್ ಅನ್ನು ಮತ್ತೊಮ್ಮೆ ಉಜ್ಜಿ ಶುಚಿಗೊಳಿಸಿದಾಗ ಪಳಪಳ ಹೊಳೆಯುತ್ತದೆ.
ಟೈಲ್ಸ್:ಕೆಲವರು ಸ್ನಾನಗೃಹವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ನೆಲಕ್ಕೆ ಹಾಕಿರುವ ಟೈಲ್ಸ್ ಮುಟ್ಟುವುದೇ ಇಲ್ಲ. ಹೀಗಾಗಿ ಟೈಲ್ಸ್ ತುಂಬಾ ಕೊಳಕುಗಳಿಂದ ಕೂಡಿರುತ್ತದೆ. ಟೈಲ್ಸ್‌ನಿಂದ ಕೊಳೆ ತೆಗೆದುಹಾಕಲು ಒಂದು ಮಗ್ನಲ್ಲಿ ನೀರು ತೆಗೆದುಕೊಂಡು ಸ್ವಲ್ಪ ಅಡುಗೆ ಸೋಡಾ ಮಿಕ್ಸ್ ಮಾಡಿ. ನಂತರ ಅಡುಗೆ ಸೋಡಾ ಮಿಶ್ರಣವನ್ನು ಟೈಲ್ಸ್ ಮೇಲೆ ಸುರಿದು ಸ್ವಲ್ಪ ಸಮಯದವರೆಗೆ ಸ್ಕ್ರಬ್ ಮಾಡಿ. ಹೀಗೆ ಮಾಡಿದರೆ ಟೈಲ್ಸ್ ಎಷ್ಟೇ ಕೊಳಕಾಗಿದ್ದರೂ ಹೊಳೆಯುವುದು ಖಚಿತ!.