ಹೈದರಾಬಾದ್: ಯಾವುದೇ ಬ್ಯಾಂಕಿನಲ್ಲಿ ಕಳ್ಳತನ ಅಥವಾ ಅಗ್ನಿ ಅನಾಹುತ ಆದ ಸಂದರ್ಭದಲ್ಲಿ ಗ್ರಾಹಕರು ಅಡಮಾನ ಇಟ್ಟ ಚಿನ್ನವನ್ನು ಕಳೆದುಕೊಳ್ಳುತ್ತಾರಾ? ಹಾಗೆಯೇ ಲಾಕರ್‌ನಲ್ಲಿ ಇಟ್ಟಿರುವ ಚಿನ್ನ ಮತ್ತು ಹಣ ಏನಾಗುತ್ತದೆ. ಬ್ಯಾಂಕುಗಳು ಯಾವುದಕ್ಕೆ ಜವಾಬ್ದಾರರಾಗಿರುತ್ತವೆ. ಲಾಕರ್‌ನಲ್ಲಿರುವ ವಸ್ತುಗಳು ಕಳೆದು ಹೋದರೆ ಪರಿಹಾರ ಏನು ಎಂಬ ಬಗ್ಗೆ ಈಗ ತಿಳಿದುಕೊಳ್ಳೋಣ
ಆರ್‌ಬಿಐ ನಿಯಮಾವಳಿಗಳು ಏನು ಹೇಳುತ್ತವೆ?: ಯಾವುದೇ ಬ್ಯಾಂಕ್‌ನಲ್ಲಿ ಕಳ್ಳತನ ಅಥವಾ ಅಗ್ನಿ ಅನಾಹುತ ಸಂಭವಿಸಿದರೆ, ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಹಾನಿಯಾದರೆ, ಬ್ಯಾಂಕ್ ನೀಡಿದ ದಾಖಲೆಗಳ ಅನ್ವಯ ನೂರು ಪ್ರತಿಶತ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಅವರಿಗೆ ಪರಿಹಾರ ನೀಡುತ್ತವೆ.
ಉದಾಹರಣೆಗೆಒಬ್ಬ ವ್ಯಕ್ತಿ ಬ್ಯಾಂಕ್‌ನಲ್ಲಿ ಇಟ್ಟಿರುವ 40 ಗ್ರಾಂ ಚಿನ್ನ ಕಳ್ಳತನವಾಗಿದ್ದರೆ ಆತನ ಬಳಿ ಇರುವ ದಾಖಲೆಗಳ ಆಧಾರದ ಮೇಲೆ ಪ್ರಸ್ತುತ ಮಾರುಕಟ್ಟೆ ಬೆಲೆಯ ಪ್ರಕಾರ ಒಟ್ಟು 40 ಗ್ರಾಂ ಚಿನ್ನದ ಮೌಲ್ಯವನ್ನು ಬ್ಯಾಂಕ್ ಪಾವತಿಸುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ ಪ್ರತಿ ಇಲಾಖೆಗೆ ವರ್ಷಕ್ಕೊಮ್ಮೆ ವಿಮಾ ಸೌಲಭ್ಯ ನೀಡಲಾಗುತ್ತದೆ. ಇದು ವರ್ಷದಲ್ಲಿ ಬ್ಯಾಂಕಿನ ಸಾಲದ ವಹಿವಾಟುಗಳು ಮತ್ತು ನಗದು ಹರಿವಿನ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮಗಳ ಪ್ರಕಾರ ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎನ್ನುತ್ತಾರೆ ಬ್ಯಾಂಕರ್‌ಗಳು.
ವೈಯಕ್ತಿಕ ಲಾಕರ್‌ಗಳಲ್ಲಿನ ಹಣಕ್ಕೆ ಗ್ರಾಹಕರೇ ಜವಾಬ್ದಾರರಾಗಿರುತ್ತಾರೆ: ಗ್ರಾಹಕರು ವೈಯಕ್ತಿಕ ಲಾಕರ್‌ಗಳಲ್ಲಿ ಇರಿಸಲಾಗಿರುವ ಬೆಲೆಬಾಳುವ ಆಭರಣಗಳು, ದಾಖಲೆಗಳು ಮತ್ತು ನಗದಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಗ್ರಾಹಕರು ಲಾಕರ್‌ಗಳಲ್ಲಿ ಏನನ್ನು ಇಡುತ್ತಾರೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ನೋಡುವುದಿಲ್ಲ. ಯಾವುದೇ ಅವಘಡ ಸಂಭವಿಸಿ ಲಾಕರ್ ಗಳಲ್ಲಿದ್ದ ಬೆಲೆಬಾಳುವ ನಗದು ಹಾಗೂ ಚಿನ್ನಾಭರಣ ನಷ್ಟವಾದರೆ ಬ್ಯಾಂಕ್ ಜವಾಬ್ದಾರ ಆಗಿರುವುದಿಲ್ಲ. ವೈಯಕ್ತಿಕ ಲಾಕರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ನಗದು ಮತ್ತು ಆಭರಣಗಳನ್ನು ಇಡದೇ ಇರುವುದು ಉತ್ತಮ. ಯಾವುದೇ ಅವಘಡ ಸಂಭವಿಸಿದರೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಬ್ಯಾಂಕ್‌ಗಳು ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.