ಅಯೋಧ್ಯೆ (ಉತ್ತರ ಪ್ರದೇಶ):ಭಗವಾನ್ ರಾಮನ ಜನ್ಮಸ್ಥಳ ಪರಿವರ್ತನೆಗೆ ಸಜ್ಜಾಗಿದೆ. ಅಯೋಧ್ಯೆಯೂ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಹಿಂದೂ ಯಾತ್ರಾರ್ಥಿಗಳಿಗೆ ಪ್ರಮುಖ ತೀರ್ಥಕ್ಷೇತ್ರವಾಗುವ ನಿರೀಕ್ಷೆ ಇದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಐತಿಹಾಸಿಕ ಘಟನೆಯು ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮ ಪಟ್ಟಿಗೆ ಸೇರಿಸಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಭವ್ಯ ರಾಮಮಂದಿರ ನಿರ್ಮಾಣ ಮತ್ತು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿಯೂ ಅಯೋಧ್ಯೆಯಲ್ಲಿ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗುವ ಸಾಧ್ಯತೆ ಇದೆ. ಸಂಪರ್ಕ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು 85,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೆಲವು ಅಭಿವೃದ್ಧಿಕಾರ್ಯಗಳು ಪೂರ್ಣಗೊಂಡಿವೆ.
ಒಂದು ಕಾಲದಲ್ಲಿ ಅತ್ಯಂತ ಸುಸಜ್ಜಿತ ನಗರವಾಗಿದ್ದ ಅಯೋಧ್ಯೆ ಈಗ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪುನರಾಭಿವೃದ್ಧಿ ಹೊಂದಿದ ರೈಲ್ವೆ ನಿಲ್ದಾಣ, ಸುಸಜ್ಜಿತ ರಸ್ತೆಗಳು, ಅಭಿವೃದ್ಧಿ ಹೊಂದಿದ ಟೌನ್‌ಶಿಪ್‌ಗಳು ಮತ್ತು ಸುಸಜ್ಜಿತ ನಾಗರಿಕ ಸೌಲಭ್ಯಗಳನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಪ್ರವಾಸಿಗರ ಬೇಡಿಕೆಗಳನ್ನು ಪೂರೈಸಲು ಹೋಟೆಲ್ಗಳು ಮತ್ತು ಶಾಪಿಂಗ್ ಮಾಲ್ಗಳು ತಲೆ ಎತ್ತಲು ಸಿದ್ಧವಾಗಿವೆ. ಇದು ಖಾಸಗಿ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.