ಕರ್ನಾಟಕ

karnataka

ETV Bharat / bharat

ಎಸ್​ಎಲ್​ಬಿಸಿ ಯೋಜನೆಯ ಟನಲ್​ ಮೇಲ್ಚಾವಣಿ ಕುಸಿತ; ಆರು ಕಾರ್ಮಿಕರು ಸಿಲುಕಿರುವ ಶಂಕೆ - SLBC TUNNEL COLLAPSES

ಶ್ರೀಶೈಲಂ ಎಡದಂಡೆ ಕಾಲುವೆ ನಿರ್ಮಾಣದ ಸುರಂಗದ ಮೇಲ್ಚಾವಣಿ ಕುಸಿದಿದ್ದು, ಆರು ಜನರು ಸಿಲುಕಿದ್ದು, ಅವರ ರಕ್ಷಣೆಗೆ ಸಿಎಂ ರೇವಂತ್​ ರೆಡ್ಡಿ ಸೂಚನೆ ನೀಡಿದ್ದಾರೆ.

at-least-6-workers-feared-trapped-as-section-of-roof-in-slbc-tunnel-project-collapses-in-telangana
ಎಸ್​ಎಲ್​ಬಿಸಿ ಯೋಜನೆ ಟನಲ್ (ಐಎಎನ್​ಎಸ್​​)

By PTI

Published : Feb 22, 2025, 3:24 PM IST

ಹೈದರಾಬಾದ್ ​:ತೆಲಂಗಾಣದ ನಾಗರಕರ್ನೂಲ್​ ಜಿಲ್ಲೆಯ ಶ್ರೀಶೈಲಂ ಎಡ ದಂಡೆ ಕಾಲುವೆಯ ನಿರ್ಮಾಣ ಹಂತದ ಟನಲ್​ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಆರು ಜನ ಕಾರ್ಮಿಕರು ಅದರಡಿಯಲ್ಲಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುರಂಗ ನಿರ್ಮಾಣ ಮಾಡುತ್ತಿದ್ದ ಕಂಪನಿ ತಂಡ ಇದೀಗ ಸುರಂಗದ ಒಳಗೆ ಹೋಗಿದ್ದು, ಇದನ್ನು ಪರಿಶೀಲಿಸುತ್ತಿದೆ. ಆರರಿಂದ ಎಂಟು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದು, ಅವರು ಸಿಲುಕಿರುವ ಶಂಕೆ ಇದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಸುರಂಗದ ಒಳಗೆ 12 ರಿಂದ 13 ಕಿಲೋ ಮೀಟರ್​ ದೂರದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವಾಗ ಈ ಘಟನೆ ನಡೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಕಚೇರಿ, ಎಷ್ಟು ಜನರಿಗೆ ಗಾಯವಾಗಿದೆ ಎಂದು ನಿಖರವಾಗಿ ತಿಳಿಸಿಲ್ಲ. ಬದಲಾಗಿ ಕೆಲವರು ಗಾಯಗೊಂಡಿದ್ದಾರೆ ಎಂದಿದೆ.

ಸಿಎಂ ಎ ರೇವಂತ್​ ರೆಡ್ಡಿ ಈ ಕರಿತು ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಎಸ್ಪಿ ಮತ್ತು ಇತರೆ ಅಧಿಕಾರಿಗಳು ತಕ್ಷಣಕ್ಕೆ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.

ರಾಜ್ಯ ನೀರಾವರಿ ಸಚಿವ ಎನ್​ ಉತ್ತಮ್​ ಕುಮಾರ್​ ರೆಡ್ಡಿ, ನೀರಾವರಿ ಸರ್ಕಾರಿ ಸಲಹೆಗಾರ ಆದಿತ್ಯನಾಥ್​ ದಾಸ್​ ಮತ್ತು ಇತರೆ ನೀರಾವರಿ ಸಚಿವರು ಕೂಡ ವಿಶೇಷ ಹೆಲಿಕಾಪ್ಟರ್​ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗಣಿ ಸಚಿವ ಜಿ ಕಿಶನ್​ ರೆಡ್ಡಿ, ಘಟನೆ ಸಂಬಂಧ ಮಾಹಿತಿ ಪಡೆದಿದ್ದು, ಕಾರಣ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೇ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಚಿವರ ’ಅಜ್ಜಿ‘ ಹೇಳಿಕೆ ತಂದ ಕೋಲಾಹಲ; ರಾಜಸ್ಥಾನ ಕಾಂಗ್ರೆಸ್​ ಶಾಸಕರಿಂದ ಅಹೋರಾತ್ರಿ ಧರಣಿ

ಇದನ್ನೂ ಓದಿ: ಶೆಡ್​ ಮೇಲೆ ಮರಳು ಸುರಿದ ಟಿಪ್ಪರ್​: ಐವರು ಕಾರ್ಮಿಕರು ಸ್ಥಳದಲ್ಲೇ ಸಾವು, ಬಾಲಕಿ ರಕ್ಷಣೆ

ABOUT THE AUTHOR

...view details