ನವದೆಹಲಿ: ವಿಧಾನಸಭಾ ಚುನಾವಣೆಯ ಹಿನ್ನೆಲೆ ನವದೆಹಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಅರವಿಂದ್ ಕೇಜ್ರಿವಾಲ್‌ಗೆ ಕೆಲವರು ಕಪ್ಪು ಬಾವುಟ ತೋರಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಚಾಲಕ ಕಾರನ್ನು ವೇಗವನ್ನು ಚಲಾಯಿಸಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ದ ಕಾರ್ಯಕರ್ತರು ನಡುವೆ ವಾಗ್ವಾದ ನಡೆದಿದೆ.
ಅರವಿಂದ್ ಕೇಜ್ರಿವಾಲ್ ಕಾರು ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿದೆ. ಸೋಲಿನ ಭಯದಿಂದ ಆಮ್ ಆದ್ಮಿ ಪಕ್ಷದ ನಾಯಕರು ಜನರ ಜೀವದ ಮೌಲ್ಯವನ್ನೇ ಮರೆತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಆರೋಪಿಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ರವಾಸಿಸಲಾಗಿದೆ. ಪ್ರವೇಶ್ ವರ್ಮಾ ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಕೇಜ್ರಿವಾಲ್‌ಗೆ ಕೆಲ ಪ್ರಶ್ನೆ ಕೇಳುವವರಿದ್ದೆವು:ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಷೇಕ್ ಪ್ರತಿಕ್ರಿಯಿಸಿ, "ನಾನು ಗೋಲ್ ಮಾರ್ಕೆಟ್‌ನ ಲಾಲ್ ಬಹದ್ದೂರ್ ಸದನ್ ಕಾಲೋನಿಯಲ್ಲಿ ನಿವಾಸಿ. ಅಲ್ಲಿ ಇಂದು ಮಧ್ಯಾಹ್ನ ಅರವಿಂದ್ ಕೇಜ್ರಿವಾಲ್ ಅವರ ಪ್ರಚಾರ ಕಾರ್ಯಕ್ರಮವಿತ್ತು. ನಾವು ಕೇಜ್ರಿವಾಲ್‌ಗೆ ಕೆಲ ಪ್ರಶ್ನೆಗಳನ್ನು ಕೇಳಲು ಬಯಸಿದ್ದೆವು. ಯುವಕರಿಗೆ ಉದ್ಯೋಗ ನೀಡಲು ಕೇಜ್ರಿವಾಲ್ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸಿದ್ದೆವು. ಇದಕ್ಕೆ ಕೇಜ್ರಿವಾಲ್ ಉತ್ತರ ನೀಡಿದ್ದಾರೆ. ನಾವು ಮೊದಲು ಪ್ರಶ್ನೆ ಕೇಳಲು ಮುಂದಾದಾಗ ಕೇಜ್ರಿವಾಲ್ ಅವರ ಡ್ರೈವರ್ ಕಾರನ್ನು ನಿಲ್ಲಿಸಿದರು. ನಂತರ ನಾವು ಮತ್ತೊಂದು ಪ್ರಶ್ನೆ ಕೇಳಲು ಪ್ರಾರಂಭಿಸಿದಾಗ, ಕೇಜ್ರಿವಾಲ್ ಅವರ ಚಾಲಕ ನಮ್ಮನ್ನು ನೋಡದೇ ಕಾರನ್ನು ಮುಂದಕ್ಕೆ ವೇಗವಾಗಿ ಚಲಾಯಿಸಿದರು. ಈ ವೇಳೆ ಮೂವರು ಕೆಳಗೆ ಬಿದ್ದೆವು, ಆಗ ಕಾಲಿಗೆ ಗಾಯವಾಯಿತು. ಆದರೂ ಕೇಜ್ರಿವಾಲ್ ಅವರ ಚಾಲಕ ಕಾರನ್ನು ನಿಲ್ಲಿಸಲಿಲ್ಲ, ಇದರಿಂದ ನಾವು ಕಲ್ಲು ತೂರಿದ್ದೇವೆ" ಎಂದು ತಿಳಿಸಿದರು.
ಕೇಜ್ರಿವಾಲ್ ಮೇಲಿನ ದಾಳಿ ಖಂಡಿಸಿದ ಎಎಪಿ:ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮೇಲಿನ ದಾಳಿಯನ್ನು ಖಂಡಿಸಿರುವ ಆಪ್ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್, ''ಇಂದು ಮತ್ತೆ ಬಿಜೆಪಿ ಗೂಂಡಾಗಳು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ . ಈ ದಾಳಿ ಅತ್ಯಂತ ಖಂಡನೀಯ. ನವದೆಹಲಿ ವಿಧಾನಸಭೆಯಲ್ಲಿ ಶಾಂತಿಯುತ ಚುನಾವಣೆ ನಡೆಯುವುದನ್ನು ಚುನಾವಣಾ ಆಯೋಗ ಬಯಸುವುದಿಲ್ಲ. ದಾಳಿ ನಡೆಸಿದವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಈಗಲಾದರೂ ಚುನಾವಣಾ ಆಯೋಗದ ಮತ್ತು ದೆಹಲಿ ಪೊಲೀಸರ ಕಣ್ಣು ತೆರೆಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿ ಬಿಜೆಪಿಯಿಂದಲೂ ಭರ್ಜರಿ ಘೋಷಣೆ: ಮಹಿಳೆಯರಿಗೆ ಮಾಸಿಕ 2500 ರೂ, ಸಿಲಿಂಡರ್ಗೆ 500 ರೂ ಸಬ್ಸಿಡಿ ನೀಡೋ ಭರವಸೆ
ಇದನ್ನೂ ಓದಿ:ಕಾಂಗ್ರೆಸ್ 4ನೇ ಗ್ಯಾರಂಟಿ: ₹500 ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್, ಪಡಿತರ ಉಚಿತ