ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದಲ್ಲಿ ಕಮರಿಗೆ ಉರುಳಿ ಬಿದ್ದ ಸೇನಾ ಟ್ರಕ್​: ಮೂವರು ಯೋಧರ ದುರ್ಮರಣ - Three soldiers died in accident - THREE SOLDIERS DIED IN ACCIDENT

ಒಟ್ಟು ಎಂಟು ಮಂದಿ ಯೋಧರನ್ನು ಹೊತ್ತ ಸೇನಾ ಟ್ರಕ್ ಅರುಣಾಚಲ ಪ್ರದೇಶದ ತಾಪಿ ಬಳಿ ರಸ್ತೆಯಲ್ಲಿ ಸ್ಕಿಡ್​ ಆಗಿ, ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಪರಿಣಾಮ ಟ್ರಕ್​ನಲ್ಲಿದ್ದ ಮೂವರು ಯೋಧರು ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ.

Died Soldiers
ಮೃತ ಯೋಧರು (ETV Bharat)

By ETV Bharat Karnataka Team

Published : Aug 28, 2024, 1:23 PM IST

ತೇಜ್​ಪುರ (ಅಸ್ಸಾಂ): ಪೂರ್ವ ಅರುಣಾಚಲ ಪ್ರದೇಶದ ಟ್ರಾನ್ಸ್​- ಅರುಣಾಚಲ ಹೆದ್ದಾರಿ ಗಡಿಯಲ್ಲಿರುವ್ ತಾಪಿ ಪ್ರದೇಶದ ಬಳಿ ಸೇನಾ ಟ್ರಕ್​ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಯೋಧರು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮೇಲಿನ ಸುಬನ್ಸಿರಿ ಜಿಲ್ಲೆಯ ಪರ್ವತ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಅಪಘಾತವಾಗಿದೆ. ಘಟನೆಯ ಬಗ್ಗೆ ಸೇನೆಯ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಸಾವನ್ನಪ್ಪಿದವರನ್ನು ಹವಿಲ್ದಾರ್​ ನರ್ಖತ್​ ಸಿಂಗ್​, ನಾಯಕ್​ ಮುಖೇಶ್​ ಕುಮಾರ್​ ಮತ್ತು ಗ್ರೆನೇಡಿಯರ್​ ಆಶಿಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮೃತ ಯೋಧರ ಹೆಸರುಗಳನ್ನು ಉಲ್ಲೇಖಿಸಿ, ವೀರಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ಎಂಟು ಸೇನಾ ಸಿಬ್ಬಂದಿಯನ್ನು ಹೊತ್ತ ಸೇನಾ ವಾಹನ, ತರಬೇತಿ ಮುಗಿಸಿದ ಬಳಿಕ ಆ ಪ್ರದೇಶದಿಂದ ತೆರಳಿದ್ದು, ತಾಪಿ ಬಳಿ (ಬಾರರೂಪನ್​ನಿಂದ 15 ಕಿ.ಮೀ ದೂರದ) ಅಪಘಾತಕ್ಕೀಡಾಗಿದೆ. ಎಂಟು ಮಂದಿ ಗಡಿಯಿಂದ ಬರರೂಪಕ್​ನಲ್ಲಿ ರಾತ್ರಿ ಕಳೆಯಲು ಬಂದಿದ್ದರು. ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಪೂರ್ವ ಕಮಾಂಡ್​ ತನ್ನ ಎಕ್ಸ್​ ಹ್ಯಾಂಡಲ್​ನಲ್ಲಿ ಸಂತ್ರಸ್ತರಿಗೆ ಗೌರವ ಸಲ್ಲಿಸಿದೆ.

ಇದನ್ನೂ ಓದಿ:ಚಾಮರಾಜನಗರ: ಪಂಜಾಬ್ ಗಡಿಯಲ್ಲಿ ಹೃದಯಾಘಾತದಿಂದ ಯೋಧ ಮೃತ, ಸ್ವಗ್ರಾಮದಲ್ಲಿ ಅಂತಿಮ ನಮನ - soldier funeral

ABOUT THE AUTHOR

...view details