ಕರ್ನಾಟಕ

karnataka

ETV Bharat / bharat

ವಕ್ಫ್ ನೇಮಕಾತಿಯಲ್ಲಿ ಅಕ್ರಮ ಆರೋಪ: ಇಡಿಯಿಂದ ಆಪ್​ ಶಾಸಕ ಅಮಾನತುಲ್ಲಾ ಖಾನ್​ ಬಂಧನ - ED Arrests Amanatullah Khan - ED ARRESTS AMANATULLAH KHAN

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಇಡಿ ಬಂಧಿಸಿದೆ.

ED arrests AAP MLA Amanatullah Khan following raid at his home
ಅಮಾನತುಲ್ಲಾ ಖಾನ್ (ETV Bharat)

By ETV Bharat Karnataka Team

Published : Sep 2, 2024, 1:54 PM IST

Updated : Sep 2, 2024, 2:55 PM IST

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ಮನೆಯ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ (ಇಡಿ)ವು ಸೋಮವಾರ ಮಧ್ಯಾಹ್ನ ಅವರನ್ನು ಬಂಧಿಸಿದೆ. ದೆಹಲಿ ವಕ್ಫ್ ಮಂಡಳಿಯಲ್ಲಿ ನಡೆದ ನೇಮಕಾತಿಗಳು ಮತ್ತು ಅದರ ಆಸ್ತಿಗಳ ಗುತ್ತಿಗೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.

ಇದಕ್ಕೂ ಮುನ್ನ ಬೆಳಗ್ಗೆ, ದೆಹಲಿ ವಕ್ಫ್ ಮಂಡಳಿಗೆ ಸಿಬ್ಬಂದಿ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ದೆಹಲಿಯ ಓಖ್ಲಾದಲ್ಲಿರುವ ಖಾನ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ದೆಹಲಿ ಪೊಲೀಸರು ಮತ್ತು ಸಿಆರ್​ಪಿಎಫ್ ಸಿಬ್ಬಂದಿಯನ್ನು ಖಾನ್​ ಅವರ ಮನೆಯ ಸುತ್ತಲೂ ಭದ್ರತೆಗಾಗಿ ನಿಯೋಜಿಸಲಾಗಿತ್ತು.

ತನ್ನನ್ನು ಬಂಧಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಅಮಾನತುಲ್ಲಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಇಡಿ ತನಗೆ ಮತ್ತು ಎಎಪಿ ನಾಯಕತ್ವಕ್ಕೆ ಕಿರುಕುಳ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

"ಕಳೆದ ಎರಡು ವರ್ಷಗಳಿಂದ, ಇಡಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ನನಗೆ ಕಿರುಕುಳ ನೀಡುತ್ತಿದೆ. ನನಗೆ ಮತ್ತು ನನ್ನ ಇಡೀ ಪಕ್ಷಕ್ಕೆ ಪ್ರತಿದಿನ ಒಂದಿಲ್ಲೊಂದು ತೊಂದರೆಗಳನ್ನು ಸೃಷ್ಟಿಸಲಾಗುತ್ತಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಸಂಜಯ್ ಸಿಂಗ್ ಜೈಲಿನಲ್ಲಿದ್ದರು ಮತ್ತು ಸತ್ಯೇಂದ್ರ ಜೈನ್ ಈಗಲೂ ಜೈಲಿನಲ್ಲಿದ್ದಾರೆ. ಆದರೆ ಈಗ ಅವರು ನನ್ನನ್ನು ಕೂಡ ಬಂಧಿಸಲು ಬಯಸಿದ್ದಾರೆ. ನಮ್ಮನ್ನು ಮತ್ತು ನಮ್ಮ ಪಕ್ಷವನ್ನು ಒಡೆಯುವುದು ಅವರ ಏಕೈಕ ಉದ್ದೇಶವಾಗಿದೆ" ಎಂದು ಖಾನ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಬಂಧನದ ಬೆನ್ನಲ್ಲೇ ಹಲವಾರು ಎಎಪಿ ನಾಯಕರು ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿ ಮತ್ತು ಇಡಿ ವಿರೋಧಿಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿವೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದರು.

"ಬಿಜೆಪಿ ವಿರುದ್ಧದ ಪ್ರತಿಯೊಂದು ಧ್ವನಿಯನ್ನು ನಿಗ್ರಹಿಸುವುದು ಇಡಿಗೆ ಉಳಿದಿರುವ ಏಕೈಕ ಕೆಲಸವಾಗಿದೆ. ಯಾರು ಶರಣಾಗುವುದಿಲ್ಲವೋ ಅಥವಾ ಬಗ್ಗುವುದಿಲ್ಲವೋ ಅಂಥವರನ್ನು ಬಂಧಿಸಿ ಜೈಲಿಗೆ ಹಾಕುವುದು ಅದರ ಉದ್ದೇಶವಾಗಿದೆ" ಎಂದು ಸಿಸೋಡಿಯಾ ಹೇಳಿದರು. ಈ ಬೆಳವಣಿಗೆಗಳು ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಿವೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡುತ್ತಿವೆ.

ಇದನ್ನೂ ಓದಿ:6,900 ಸಿಬಿಐ ಪ್ರಕರಣಗಳು ವಿಚಾರಣೆಗೆ ಬಾಕಿ: 361 ಕೇಸ್ 20 ವರ್ಷ ಹಳೆಯವು! - CBI Cases Pending Trial

Last Updated : Sep 2, 2024, 2:55 PM IST

ABOUT THE AUTHOR

...view details