ನವದೆಹಲಿ:ದೆಹಲಿಯ ಎಎಪಿ ನೇತೃತ್ವದ ಸರ್ಕಾರದ ಮಾಡೆಲ್ ಫೇಲ್ ಆಗಿದ್ದು, ಜನರು ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಕಾರಣವಾಗುವ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.
ದೆಹಲಿ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಬಿರುಸಿನ ಮತ ಪ್ರಚಾರ ಮೂರು ಪ್ರಮುಖ ಪಕ್ಷಗಳಿಂದ ಸಾಗಿದೆ. ಈ ನಡುವೆ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಾಯ್ಡು, ದೆಹಲಿಯ ಹವಾಮಾನ ಮತ್ತು ರಾಜಕೀಯ ಮಾಲಿನ್ಯದಿಂದ ಜನರು ದೆಹಲಿಯಲ್ಲಿ ವಾಸಿಸಲು ಹೆದರುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಭಿವೃದ್ಧಿ ಇಲ್ಲದಂತೆ ಆಗಿದೆ ಎಂದರು.
ರಾಜಕಾರಣಿಗಳು ಯಾಗಾಗಲೂ ಇಂದು, ನಾಳೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ಸರ್ಕಾರ ಉತ್ತಮ ಸಾರ್ವಜನಿಕ ನೀತಿಯಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೆಹಲಿ ಅರ್ಧ ಎಂಜಿನ್ ಸರ್ಕಾರ ಹೊಂದಿದ್ದು, ಅಭಿವೃದ್ಧಿ ಸಾಧಿಸಲು ಡಬಲ್ ಎಂಜಿನ್ ಸರ್ಕಾರ ಬೇಕು. ಕಾರ್ಯಕ್ಷಮತೆ ಮತ್ತು ಉತ್ತಮ ಜೀವನ ಮಟ್ಟಗಳು ಪ್ರಸ್ತುತವಾಗುತ್ತಿದ್ದು, ಸಿದ್ಧಾಂತವಲ್ಲ ಎಂದು ಟಿಡಿಪಿ ಮುಖ್ಯಸ್ಥ ನಾಯ್ಡು ಹೇಳಿದರು.