ಹೈದರಾಬಾದ್ (ತೆಲಂಗಾಣ):ಜವರಾಯ ಯಾವಾಗ, ಎಲ್ಲಿ ಎರಗುತ್ತಾನೆ ಎಂಬುದು ಊಹೆಗೂ ನಿಲುಕದ ಸಂಗತಿ. ನಿಂತ, ಕುಳಿತ ಜಾಗದಲ್ಲೇ ಪ್ರಾಣಪಕ್ಷಿ ಹಾರಿಹೋದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಇಂಥದ್ದೇ ದುರ್ದೈವದ ಘಟನೆಯೊಂದು ತೆಲಂಗಾಣದಲ್ಲಿ ಸೋಮವಾರ ನಡೆದಿದೆ. ಮೊಹರಂ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಲಕ್ಷ್ಮಣ್ ಮೃತಪಟ್ಟ ಯುವಕ. ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಮಲ್ಯಾಲ ಎಂಬಲ್ಲಿ ಮೊಹರಂ ಹಬ್ಬದ ಆಚರಣೆ ನಡೆಯುತ್ತಿತ್ತು. ಈ ಪ್ರದೇಶದಲ್ಲಿ ಮೊಹರಂ ಆಚರಣೆಗೆ ಹುಲಿ (ಪುಲಿ ವೇಷಲು) ವೇಷ ಧರಿಸುವುದು ವಾಡಿಕೆ. ಲಕ್ಷ್ಮಣ್ ಇತರ ಸಂಗಡಿಗರೊಂದಿಗೆ ಸೇರಿ ಹುಲಿ ವೇಷ ಧರಿಸಿ ನೃತ್ಯ ಮಾಡುತ್ತಿದ್ದ.