ಕರ್ನಾಟಕ

karnataka

ETV Bharat / bharat

ಮೋದಿ ಸಂಪುಟದಲ್ಲಿರುವ ಶೇ.66ರಷ್ಟು ಮಂತ್ರಿಗಳ ವಯಸ್ಸು 51 ರಿಂದ 70 ವರ್ಷ! - ADR Report

ಪ್ರಧಾನಿ ಮೋದಿ ನೇತೃತ್ವದ ನೂತನ ಸಂಪುಟದಲ್ಲಿ 71 ಸಚಿವರ ಪೈಕಿ ಶೇ.66ರಷ್ಟು ಮಂತ್ರಿಗಳು 51ರಿಂದ 70 ವರ್ಷ ವಯಸ್ಸಿನವರು ಎಂದು ಎಡಿಆರ್​ ಹೇಳಿದೆ.

new council of ministers
ನೂತನ ಸಚಿವ ಸಂಪುಟ (ANI)

By PTI

Published : Jun 11, 2024, 10:22 PM IST

ನವದೆಹಲಿ:ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 71 ಸದಸ್ಯರ ಸಂಪುಟವೂ ರಚನೆಯಾಗಿ ಕಾರ್ಯಾರಂಭಿಸಿದೆ. ಒಟ್ಟಾರೆ ಸಚಿವರ ಪೈಕಿ ಬಹುಪಾಲು ಹಿರಿಯರಿಗೆ ಅವಕಾಶ ದೊರೆತಿದೆ. ಶೇ.66ರಷ್ಟು ಮಂತ್ರಿಗಳು 51ರಿಂದ 70 ವರ್ಷ ವಯಸ್ಸಿನವರು ಎಂದು ಚುನಾವಣಾ ವಿಶ್ಲೇಷಕ ಸಂಸ್ಥೆಯಾದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್​)​ ಬಹಿರಂಗಪಡಿಸಿದೆ.

ಕೇಂದ್ರದಲ್ಲಿ ನೂತನವಾಗಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಲ್ಲ 71 ಸಂಸದರ ವಯಸ್ಸಿನ ವಿಶ್ಲೇಷಣೆಯನ್ನು ಎಡಿಆರ್ ಮಾಡಿದೆ. 71 ಸಚಿವರ ಪೈಕಿ ಶೇ.66ರಷ್ಟು ಎಂದರೆ, 47 ಮಂತ್ರಿಗಳು 51ರಿಂದ 70 ವರ್ಷ ವಯಸ್ಸಿನವರು. ಅದರಲ್ಲೂ, 22 ಸಚಿವರು 51ರಿಂದ 60ರ ವರ್ಷದೊಳಗಿದ್ದರೆ, ಉಳಿದ 25 ಸಚಿವರು 61ರಿಂದ 70 ವರ್ಷ ವಯಸ್ಸಿನವರು ಎಂದು ವರದಿ ಹೇಳಿದೆ.

ಉಳಿದಂತೆ ಶೇ.24ರಷ್ಟು ಸಚಿವರು 31ರಿಂದ 50 ವರ್ಷದ ವಯಸ್ಸಿನವರಾಗಿದ್ದಾರೆ. ಇದರಲ್ಲಿ 17 ಮಂತ್ರಿಗಳು ಬರಲಿದ್ದು, ಇಬ್ಬರು ಮಾತ್ರ 31ರಿಂದ 40 ವರ್ಷದ ಒಳಗಿನವರು. ಇನ್ನುಳಿದ 15 ಸಚಿವರು 41ರಿಂದ 50 ವರ್ಷದವರಾಗಿದ್ದಾರೆ. ಅತ್ಯಂತ ಹಿರಿಯ ವಯಸ್ಸಿನವರಾದ 71ರಿಂದ 80 ವರ್ಷದೊಳಗೆ ಶೇ.7ರಷ್ಟು ಎಂದರೆ 10 ಜನ ಸಚಿವರಿದ್ದಾರೆ ಎಂದು ಎಡಿಆರ್​ ತಿಳಿಸಿದೆ.

ಎಲ್ಲ ಸಚಿವರ ಪೈಕಿ 28 ಮಂದಿ ಕ್ರಿಮಿನಲ್​ ಆರೋಪ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ 19 ಮಂದಿ ವಿರುದ್ಧ ಕೊಲೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ದ್ವೇಷ ಭಾಷಣ ಮಾಡಿದ ಕೇಸ್​ ದಾಖಲಾಗಿದೆ ಎಂದು ಹೇಳಿದೆ. ಇತ್ತೀಚೆಗೆ ಮುಗಿದ ಚುನಾವಣೆಯಲ್ಲಿ ಬಿಜೆಪಿ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಜೂನ್​ 9ರಂದು ಎನ್​ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಹೊಸ ಸಂಪುಟದ 28 ಸಚಿವರ ಮೇಲಿದೆ ಕ್ರಿಮಿನಲ್ ಪ್ರಕರಣ

ABOUT THE AUTHOR

...view details