ಕರ್ನಾಟಕ

karnataka

ETV Bharat / bharat

'ಆಪ್ ಹಿಂದೂ ಹೋ ಹಿ ನಹೀ' ಹೇಳಿಕೆ ವಿಚಾರ: ಕ್ಷಮೆಯಾಚನೆಗೆ ಬಿಜೆಪಿ ಪಟ್ಟು: ನೀಟ್ ಪರೀಕ್ಷೆ ಶ್ರೀಮಂತ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ಅಲ್ಲ: ರಾಗಾ - Rahul Gandhi - RAHUL GANDHI

ನೀಟ್ ಇನ್ನು ಮುಂದೆ ವೃತ್ತಿಪರ ಪರೀಕ್ಷೆಯಲ್ಲ. ನೀಟ್ ಒಂದು ವಾಣಿಜ್ಯ ಪರೀಕ್ಷೆ. ಇದು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ. ಸತ್ಯವೆಂದರೆ ನೀಟ್​ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಂಬುವುದಿಲ್ಲ, ಅವರು ಇದನ್ನು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾವಿಸುತ್ತಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ (Sansad TV)

By ETV Bharat Karnataka Team

Published : Jul 1, 2024, 6:27 PM IST

Updated : Jul 1, 2024, 7:07 PM IST

ನವದೆಹಲಿ: ಬಿಜೆಪಿ ಸರ್ಕಾರ ರೈತರು, ಮಹಿಳೆಯರು, ಸೈನಿಕರು, ರೈತರು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಭಯದ ಉಡುಗೊರೆಯನ್ನು ನೀಡಿದೆ. ನೀಟ್ ಇನ್ನು ಮುಂದೆ ವೃತ್ತಿಪರ ಪರೀಕ್ಷೆಯಲ್ಲ. ನೀಟ್ ಒಂದು ವಾಣಿಜ್ಯ ಪರೀಕ್ಷೆ. ಇದು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಟೀಕಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲದ ಕಾರಣ ಸರ್ಕಾರ ನೀಟ್ ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸತ್ಯವೆಂದರೆ ನೀಟ್​ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಂಬುವುದಿಲ್ಲ, ಅವರು ಇದನ್ನು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾವಿಸುತ್ತಾರೆ. ಈ ಪರೀಕ್ಷೆ ಪ್ರತಿಭಾವಂತರಿಗೆ ಅಲ್ಲ ವಾಗ್ದಾಳಿ ನಡೆಸಿದರು.

ಸ್ಪೀಕರ್ ಆಗಿ ಮರು ಆಯ್ಕೆಯಾದ ದಿನದಂದು ಓಂ ಬಿರ್ಲಾ ಅವರು ಪ್ರಧಾನಿ ಮೋದಿ ಅವರೊಂದಿಗೆ ಕೈಕುಲುಕುವಾಗ ಏಕೆ ತಲೆಬಾಗಿ ನಮಸ್ಕರಿಸಿದ್ದೀರಿ. ಆದರೆ ನನ್ನ ಜೊತೆ ಕೈಕುಲುಕಿದಾಗ ನೀವು (ಬಿರ್ಲಾ) ನೇರವಾಗಿ ನಿಂತಿದ್ದೀರಿ ಎಂದು ರಾಹುಲ್​ ಹೇಳಿದ ತಕ್ಷಣ, ಸದನದಲ್ಲಿ ಕೋಲಾಹಲ ಉಂಟಾಯಿತು. ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್​ ಓಂ ಬಿರ್ಲಾ, ನನಗಿಂತ ಹಿರಿಯ ವ್ಯಕ್ತಿಗೆ ನಾನು ನಮಸ್ಕರಿಸಬೇಕೆಂದು ನನ್ನ ಸಂಸ್ಕೃತಿ ಹೇಳುತ್ತದೆ ಎಂದರು.

ಗುಜರಾತ್ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲಿದೆ:ನಾನು ಲೋಕಸಭೆಯ ಸದಸ್ಯನಾಗಿ ನನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ಅರಿತುಕೊಂಡೆ, ಭಯವನ್ನು ಬದಿಗಿಟ್ಟು ನಾನು ಎಲ್ಲಾ ವಿರೋಧ ಪಕ್ಷಗಳನ್ನು ಪ್ರತಿನಿಧಿಸುತ್ತೇನೆ. ಗುಜರಾತ್ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲಿದೆ. ಮೋದಿ ಜೀ, ದಯವಿಟ್ಟು ಈ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.

ಶಿವನ ಫೋಟೋ ತೋರಿಸಿದಾಗಲೆಲ್ಲಾ ಸದನದ ಕಲಾಪಗಳನ್ನು ರೆಕಾರ್ಡ್ ಮಾಡುವ ಕ್ಯಾಮರಾ ನನ್ನನ್ನು ಏಕೆ ಚಿತ್ರೀಕರಿಸುವುದನ್ನು ನಿಲ್ಲಿಸಿದೆ. ಶಿವನ ಫೋಟೋ ಕೈಗೆತ್ತಿಕೊಂಡ ತಕ್ಷಣ ಕ್ಯಾಮರಾ ಹೇಗೆ ಬೇರೆ ಕಡೆ ತಿರುಗತ್ತದೆ ಎಂಬುದನ್ನು ರಾಹುಲ್ ಪ್ರದರ್ಶಿಸಿ, ಸರ್​ ಕ್ಯಾಮರಾ ನನ್ನನ್ನು ಸೆರೆಹಿಡಿಯುತ್ತಿಲ್ಲ ನೋಡಿ ಹೇಳಿದರು. "ಸಂಸತ್ತಿನಲ್ಲಿ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಮ್ಯಾಜಿಕ್ ನೋಡಿ" ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ರಾಹುಲ್ ಗಾಂಧಿ ತಕ್ಷಣ ಕ್ಷಮೆಯಾಚಿಸಬೇಕು: ಲೋಕಸಭೆಯಲ್ಲಿ "ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕ" ಎಂದು ಕರೆದಿದ್ದಕ್ಕಾಗಿ ರಾಹುಲ್ ಗಾಂಧಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಮಾಡಿರುವ ಅವರು, ರಾಹುಲ್ ಗಾಂಧಿ ಸಂಸದೀಯ ನಿಯಮಗಳನ್ನು ಕಲಿತಿಲ್ಲ. ಮೊದಲ ದಿನ, ಕೆಟ್ಟ ಪ್ರದರ್ಶನ! ಸುಳ್ಳುಗಳು + ಹಿಂದೂ ದ್ವೇಷ = ಸಂಸತ್ತಿನಲ್ಲಿ ರಾಹುಲ್ ಗಾಂಧಿ ಜಿ. ಇಂದಿನ ಭಾಷಣದಲ್ಲಿ ಅವರು 2024ರ ಜನಾದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ (ಸತತ ಮೂರನೇ ಸೋಲು) ಅಥವಾ ಅವರಿಗೆ ಯಾವುದೇ ನಮ್ರತೆ ಇಲ್ಲ ಎಂದು ತೋರಿಸಿದೆ.

ಇದೇ ವ್ಯಕ್ತಿ ವಿದೇಶಿ ರಾಜತಾಂತ್ರಿಕರಿಗೆ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳುತ್ತಿದ್ದರು. ಹಿಂದೂಗಳ ಮೇಲಿನ ಈ ಅಂತರ್ಗತ ದ್ವೇಷ ನಿಲ್ಲಬೇಕು. ವಿರೋಧ ಪಕ್ಷದ ನಾಯಕ ಈಗ 5 ಬಾರಿ ಸಂಸದರಾಗಿದ್ದಾರೆ. ಆದರೆ ಅವರು ಸಂಸದೀಯ ನಿಯಮಗಳನ್ನು ಕಲಿತಿಲ್ಲ ಮತ್ತು ಅವರಿಗೆ ಸಭ್ಯತೆಯ ಅರ್ಥವೂ ಗೊತ್ತಿಲ್ಲ. ಇಂದು ಸಭಾಧ್ಯಕ್ಷರ ಬಗೆಗಿನ ಅವರ ಮಾತುಗಳು ಕೆಟ್ಟ ಅಭಿರುಚಿಯನ್ನು ಹೊಂದಿದ್ದವು. ಸ್ಪೀಕರ್​ ಅವರ ಸಮಗ್ರತೆ ಮತ್ತು ವ್ಯಕ್ತಿತ್ವದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ರಾಹುಲ್​ ಅವರು ಸಭಾಧ್ಯಕ್ಷರಿಗೆ ಕ್ಷಮೆಯಾಚಿಸುತ್ತಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕ ವಯಸ್ಸಿನಲ್ಲೇ ಸಿಎಂ ಪಟ್ಟ ಅಲಂಕರಿಸಿದ್ದ ಅಖಿಲೇಶ್​ ಯಾದವ್​ಗೆ ಜನ್ಮದಿನದ ಸಂಭ್ರಮ! - Akhilesh Yadav Birthday

Last Updated : Jul 1, 2024, 7:07 PM IST

ABOUT THE AUTHOR

...view details