ಸುರ್ಗುಜಾ (ಛತ್ತೀಸ್‌ಗಢ):ಮಗಳ ಮೇಲೆ ಆಕೆಯ ತಂದೆ ಮತ್ತು ದೊಡ್ಡಪ್ಪ ಅತ್ಯಾಚಾರವೆಸಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಸಂತ್ರಸ್ತೆ ತಾಯಿ ಹೇಳಿದಾಗ ಇಬ್ಬರಿಗೂ ಕೊಲೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದರು. ಈಗ ಕೋರ್ಟ್ ಕಾಮುಕರಿಗೆ ತಕ್ಕ ಶಾಸ್ತಿ ಮಾಡಿದೆ.
ಮಗಳ ಮೇಲೆ ಅತ್ಯಾಚಾರ: ಅಂಬಿಕಾಪುರ ನ್ಯಾಯಾಲಯದಿಂದ ಬಂದ ಮಾಹಿತಿಯ ಪ್ರಕಾರ, ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 12 ವರ್ಷದ ಬಾಲಕಿ 18 ನವೆಂಬರ್ 2020 ರಂದು ತನ್ನ ಹೆತ್ತವರೊಂದಿಗೆ ಅಜ್ಜಿಯ ಮನೆಗೆ ಹೋಗಿದ್ದಳು. ಈ ವೇಳೆ ಬಾಲಕಿಯ ದೊಡ್ಡಪ್ಪ ಆಕೆಯ ಒಂಟಿಯಾಗಿರುವುದನ್ನು ಕಂಡು ಬಲವಂತವಾಗಿ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಕಿರುಚಲು ಯತ್ನಿಸಿದಾಗ ಆಕೆಯ ದೊಡ್ಡಪ್ಪ ಕತ್ತು ಹಿಸುಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದರು.
ಮರ್ಯಾದೆಗೆ ಹೆದರಿ ಕೊಲೆ ಬೆದರಿಕೆ: ಮನೆಗೆ ಮರಳಿದ ಬಾಲಕಿ ಘಟನೆಯ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ತಾಯಿ ತನ್ನ ಮಾವನನ್ನು ಥಳಿಸಿದ್ದಾಳೆ. ನಂತರ ಆಕೆ ಬಾಲಕಿಯೊಂದಿಗೆ ಠಾಣೆಗೆ ಹೋಗಲು ಮುಂದಾದಾಗ ಅಷ್ಟರಲ್ಲಿ ಹುಡುಗಿಯ ತಂದೆ ಆಕೆಯನ್ನು ತಡೆದಿದ್ದಾನೆ. ಬಳಿಕ ಮರ್ಯಾದೆಗೆ ಹೆದರಿ ದೂರು ನೀಡಲು ನಿರಾಕರಿಸಿದರು. ಮಹಿಳೆ ದೂರು ನೀಡಲು ಒತ್ತಾಯಿಸಿದಾಗ ಮೂವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ನಂತರ ತಾಯಿ ಮತ್ತು ಮಗಳು ಭಯದಿಂದ ಸುಮ್ಮನಾಗಿದ್ದರು.
ತಂದೆಯಿಂದಲೂ ಮಗಳ ಮೇಲೆ ಅತ್ಯಾಚಾರ:ಘಟನೆಯ ಕೆಲವು ತಿಂಗಳ ನಂತರ 18 ಜುಲೈ 2021ರ ಸಂಜೆ ಬಾಲಕಿಯನ್ನು ಆಕೆಯ ತಂದೆ ಬೋರ್‌ವೆಲ್ ಪಂಪ್ ಸ್ವಿಚ್ ಆಫ್ ಮಾಡಲು ಕಳುಹಿಸಿದ್ದ. ಬಾಲಕಿ ಬೋರ್ವೆಲ್ ಪಂಪ್ ರೂಮ್ ತಲುಪಿದಾಗ ಬಾಲಕಿಯ ತಂದೆ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಗ್ಗೆಯೂ ಬಾಲಕಿ ತನ್ನ ತಾಯಿಗೆ ತಿಳಿಸಿದ್ದಾಳೆ.
ಪೊಲೀಸರಿಗೆ ದೂರು ನೀಡಿದ ಸಂತ್ರಸ್ತೆಯ ತಾಯಿ: ಈ ವೇಳೆ ಬಾಲಕಿಯ ತಾಯಿ ಧೈರ್ಯ ಮಾಡಿ ಮನೆಯವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕ ತಮ್ಮ ಸಂಬಂಧಿಕರೊಂದಿಗೆ ಸಂತ್ರಸ್ತೆ ತಾಯಿ 19 ಜುಲೈ 2021 ರಂದು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಜೀವಾವಧಿ ಕಠಿಣ ಶಿಕ್ಷೆ:ಸಂಬಂಧಗಳಿಗೆ ಕಳಂಕ ತರುವ ಈ ಅಸಹ್ಯಕರ ಅಪರಾಧ ಪ್ರಕರಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ, ದೊಡ್ಡಪ್ಪನ ವಿರುದ್ಧ ಅತ್ಯಾಚಾರ ಮತ್ತು ತಂದೆಗೆ ತಿಳಿದ ನಂತರವೂ ಘಟನೆಯನ್ನು ಮರೆಮಾಚುವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಂತ್ರಸ್ತೆಯ ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಎರಡನೇ ಪ್ರಕರಣದಲ್ಲಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆಗೆ ಅವಕಾಶವಿದೆ.
ಬಾಲಕಿಗೆ ಐದು ಲಕ್ಷ ರೂ. ಪರಿಹಾರ:ದೊಡ್ಡಪ್ಪ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ನಂತರ ತಂದೆ ವಿಷಯವನ್ನು ಮುಚ್ಚಿಟ್ಟಿರುವ ಬಗ್ಗೆ ನ್ಯಾಯಾಲಯವು ಕಟುವಾಗಿ ಪ್ರತಿಕ್ರಿಯಿಸಿದೆ. ತನ್ನ ಮಗಳ ಮೇಲೆ ಲೈಂಗಿಕ ಅಪರಾಧ ಎಸಗಿರುವುದು ತಿಳಿದಿದ್ದರೂ ಮತ್ತು ಆ ಅಪರಾಧದ ಬಗ್ಗೆ ಮಾಹಿತಿ ನೀಡಲು ಕಾನೂನುಬದ್ಧವಾಗಿ ಬದ್ಧನಾಗಿದ್ದರೂ ಸಂಬಂಧಿತ ಪೊಲೀಸ್ ಠಾಣೆಗೆ ದೂರು ನೀಡದ ಅಪರಾಧವನ್ನು ತಂದೆ ಮಾಡಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ಸಂತ್ರಸ್ತೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಕ್ರಿಮಿನಲ್ ಬೆದರಿಕೆಯನ್ನು ಉಂಟುಮಾಡಿದ ಆರೋಪವೂ ತಂದೆಯ ಮೇಲಿದೆ. ಅಪ್ಪ-ಮಗಳ ಸಂಬಂಧವನ್ನು ಹಾಳುಮಾಡಲು ತಂದೆಯೂ ಅವಕಾಶವನ್ನು ಬಳಸಿಕೊಂಡರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ವೇಳೆ ಅಪ್ರಾಪ್ತ ಬಾಲಕಿಗೆ ಪರಿಹಾರ ಯೋಜನೆಯಡಿ 5 ಲಕ್ಷ ರೂ.ನೀಡಲು ಆದೇಶ ಮಾಡಿದೆ.
ಓದಿ:ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ: 30ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ - Ammonia gas leakage